ದೇವನಹಳ್ಳಿ : ತಾಲೂಕಿನ ಇಲತೊರೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಬಂಡಿ ದೇವರ ಕರಗ ಮಹೋತ್ಸವ ಈ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖ ಮುಖಂಡ ಕೃಷ್ಣಪ್ಪ ಮತ್ತು ಕುಟುಂಬದವರು ವಿಶೇಷ ಪೂಜೆ ನೆರವೇರಿಸಿ ಕರಗ ಹೊತ್ತು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಯಲಿನಲ್ಲಿ ನಿಂತಿದ್ದ ಬಂಡಿಗಳ ಬಳಿ ಆಗಮಿಸಿ ಆರತಿ ದೀಪಗಳನ್ನು ಬೆಳಗಿ ದೇವರಿಗೆ ಸಮರ್ಪಣೆ ಮಾಡಿದರು.
ಈ ಸಮಯದಲ್ಲಿ ಕೃಷ್ಣಪ್ಪ ಮಾತನಾಡಿ ಅನಾದಿಕಾಲದಿಂದಲೂ ನಮ್ಮ ಎಲ್ಲಾ ಸಂಬಂಧಿ ಕುಟುಂಬದವರು ಈ ಒಂದು ಕಾರ್ಯಕ್ರಮವನ್ನು ಆಚರಿಸಿಕೊಂಡು ಬರ್ತಾ ಇದ್ದೇವೆ ಇದು ಸುಮಾರು 30 ವರ್ಷಗಳ ನಂತರ ನಮ್ಮ ಗ್ರಾಮದಲಿ ಎಲ್ಲಾ ಕುಲಬಾಂಧವರು ಸೇರಿ ಮಾಡಲಾಗುತ್ತಿದೆ, ಕುಲಬಾಂಧವರು ಸ್ನೇಹಿತರಿಗೂ ವಿಶೇಷ ಭೋಜನದ ವ್ಯವಸ್ಥೆ ಮಾಡಿ ಅವರಿಗೆ ತೃಪ್ತಿ ಪಡಿಸಿದರೆ ಕರಗದಮ್ಮ ತಾಯಿ ಕಾಲಕಾಲಕ್ಕೆ ಮಳೆ ಬೆಳೆ ನೀಡುತ್ತಾಳೆ ಎನ್ನುವುದು ನಮ್ಮ ಪೂರ್ವಿಕರ ನಂಬಿಕೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಹಿರಿಯ ಮುಖಂಡರುಗಳು ಸೇರಿದಂತೆ 15ಸಾವಿರಕ್ಕೂ ಅಧಿಕ ಕುಲಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ವಿವಿದ ತಾಲೂಕುಗಳಿಂದಲೂ ಆಗಮಿಸಿ ಕರಗ ಶುಭ ಕೋರಿದರು ಎಂದು ತಿಳಿಸಿದರು.ಕುಲಭಾಂದವರು ಎಲ್ಲಾ ಒಂದು ಕಡೆ ಬೆರೆತು ಕರಗಗಳನ್ನು ಪೂಜಿಸಿ ಕರಗ ಹೊರುವವರು ಮದುವೆ ಹೆಣ್ಣು-ಗಂಡಿನ ರೀತಿ ಅಲಂಕಾರ ಮಾಡಿಕೊಂಡು ತಲೆಯ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಎತ್ತಿನ ಬಂಡಿಗಳಿದ್ದಲ್ಲಿಗೆ ಬಂದು ಕಿವಿ ಚುಚ್ಚುವ ಮಕ್ಕಳಿದ್ದರೆ ಅಂತಹವರಿಗೆ ಕರ್ಣಭೂಷಣ,
ಸೇರಿದಂತೆ ಹಲವು ಆಯಾಮಗಳು ನಡೆದು ನಂತರ ಆಗಮಿಸಿರುವ ಎಲ್ಲಾ ಕುಲಭಾಂದವರಿಗೂ, ಸ್ನೇಹಿತರಿಗೂ ವಿಶೇಷವಾಗಿ ತಯಾರಿಸಿದ ಮಾಂಸಾಹಾರ, ಶಾಖಾಹಾರ ಬಡಿಸಿ ತೃಪ್ತಿ ಪಡಿಸಿಕಳಿಸುವುದೇ ಸಂಪ್ರದಾಯ.ಬೆಳಿಗ್ಗೆಯೇ ಬರುವಂತಿದ್ದ ಮಳೆ ಕಾರ್ಯಕ್ರಮಕ್ಕೆ ಎಲ್ಲಿ ತೊಂದರೆಯಾಗುವುದೇ ಎಂದು ತಿಳಿಯಲಾಗಿತ್ತು ಆದರೆ ಎಲ್ಲಾ ಪೂಜೆ, ಊಟ ಮುಗಿದ ನಂತರ ಸಂಜೆ ಭಾರಿ ಮಳೆ ಬಂದಿರುವುದು ವಿಶೇಷ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಟುಂಬ ಸಿ. ನಾರಾಯಣಸ್ವಾಮಿ, ಸಿ.ಕೃಷ್ಣಪ್ಪ, ಸಿ. ನಾಗೇಶ್ ಕುಟುಂಬ, ರಾಮಮೂರ್ತಿ ಕುಟುಂಬ, ಶಿವಣ್ಣನವರ ಕುಟುಂಬ, ಅನಿಲ್ರವರ ಕುಟುಂಬ, ಪಿ.ಮಂಜುನಾಥ್, ಪಿ.ರಾಮಕೃಷ್ಣ ಕುಟುಂಬ ಹಾಗೂ ನೆರಗನಹಳ್ಳಿ ಸೇರಿದಂತೆ ಅನೇಕ ಊರುಗಳ ಕುಟುಂಬದವರು ಭಾಗವಹಿಸಿದ್ದರು.