ದೇವನಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಯ ಬೆಳ್ಳಿ ಸಂಭ್ರಮ. ಮಾರ್ಚ್ 24ರಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಅಧ್ಯಕ್ಷತೆಯಲ್ಲಿ ಆಚರಿಸಲಾಗುತ್ತದೆ, ಇಡೀ ರಾಜ್ಯದ ಕರವೇ ಪದಾಧಿಕಾರಿಗಳು ಮತ್ತುಕನ್ನಡದ ಮನಸ್ಸುಗಳು ಭಾಗವಹಿಸಲಿದ್ದಾರೆ,ಬೆಂಗಳೂರು ನಗರ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಆಚರಿಸಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಕುವೆಂಪು, ರಾಜ್ ಕುಮಾರ್ ರಂತಹ ಹಲವಾರು ಸಾಧಕರ ಹೆಸರಿನಲ್ಲಿ ಇಂದಿನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಸಂಚಾಲಕರು ಬಿ.ಕೆ .ನಾರಾಯಣಸ್ವಾಮಿ ಹೇಳಿದರು.
ದೇವನಹಳ್ಳಿ ಪಟ್ಟಣದ ಪತ್ರಕರ್ತರ ಭವನದಲ್ಲಿ “ಮಾರ್ಚ್24 ಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ಬೆಳ್ಳಿ ಸಂಭ್ರಮ” ದ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕರು ಬಿ.ಕೆ .ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಕರವೇ ರಾಜ್ಯ ಉಪಾಧ್ಯಕ್ಷ ಅಂಬರೀಶ ಗೌಡರು ಮಾತನಾಡಿ ಕರ್ನಾಟಕ ರಕ್ಷಣಾ ವೇದಿಕೆಯ 25 ವರ್ಷಗಳು ತುಂಬಿರುವ ಸಲುವಾಗಿ
ಬೆಳ್ಳಿ ಹಬ್ಬಕ್ಕೆ ಆಚರಿಸಲು ಎಲ್ಲರೂ ಭಾಗವಹಿಸಿ ಬೆಳ್ಳಿಹಬ್ಬವೂ ಅರ್ಥಪೂರ್ಣವಾಗಿ ನಡೆಯಲು ಸಹಕರಿಸಿ ಎಂದರಲ್ಲದೇ ಕನ್ನಡ ಕಟ್ಟುವ ಮತ್ತು ಕನ್ನಡದ ತೇರನ್ನು ದೇಶದ್ದುಗಲಕ್ಕೂ ಕೊಂಡುಯ್ಯುವ ಇತಿಹಾಸವನ್ನು ಹೊಂದಿರು ವುದು ಕರ್ನಾಟಕ ರಕ್ಷಣಾ ವೇದಿಕೆಯಾಗಿದೆ, ಕನ್ನಡ ನಾಡು ನುಡಿ ಉಳಿವಿನ ಹೋರಾಟದ ಜೊತೆಯಲ್ಲಿ ಪ್ರವಾಹದ ಸಮಯದಲ್ಲಿ ಜನ ಸಾಮಾನ್ಯರು ಕಷ್ಟದ ಸಮಯದಲ್ಲಿದ್ದಾಗ ನಮ್ಮ ಕರವೇ ಅಹಾರ,ಅಗತ್ಯ ಚಿಕಿತ್ಸೆ ಮತ್ತು ಆರ್ಥಿಕ ಸಹಾಯ ಮಾಡಿದೆ ಎಂದು ತಿಳಿಸಿದರು.
ಕರವೇ ರಾಜ್ಯ ಉಪಾಧ್ಯಕ್ಷ ಆಂಜಿನಪ್ಪ ಮಾತನಾಡಿ ಕೇಂದ್ರ ಸರ್ಕಾರ ಸ್ಪಧಾತ್ಮಕ ಪರೀಕ್ಷೆಗಳು ಹಿಂದಿ ಮತ್ತು ಇಂಗ್ಲೀಷ್ ಕಡ್ಡಾಯ ಎಂದಾಗ ಸತತ ಹೋರಾಟದ ಫಲವೇ ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ಕಲ್ಪಿಸಿದ್ದು ಕರವೇ ಆಗಿದೆ. ಇಷ್ಟೇಲ್ಲ ಹೋರಾಟಗಳು ಪ್ರತಿಫಲ ನಮ್ಮ ಕರವೇ ಸದಸ್ಯರ ಮೇಲೆ ಪ್ರಕರಣಗಳು ದಾಖಲಿಸಿ ವಿದೇಶ ಪ್ರಯಾಣಕ್ಕೆ ಅಗತ್ಯ ಸವಲತ್ತುಗಳನ್ನು ಅಮಾನ್ಯ ಮಾಡಿರುವುದು ಸಮಂಜಸವಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಚಾರ ಅಧ್ಯಕ್ಷ ಲೋಕೇಶ್, ತಾಲ್ಲೂಕು ಅಧ್ಯಕ್ಷ ಬಿ.ಟಿ.ಅನಿಲ್ ಕುಮಾರ್, ತಾ. ಉಪಾಧ್ಯಕ್ಷ ಎಂ.ಜೆ ಶ್ರೀನಿವಾಸ್, ತಾ.ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಕಾರ್ಯದರ್ಶಿ ಮೋಹನ್ ಶಾಸ್ತ್ರಿ, ಕಾರ್ಮಿಕ ಘಟಕ ಅಧ್ಯಕ್ಷ ಶಿವಕುಮಾರ್, ಯುವ ಘಟಕ ಅಧ್ಯಕ್ಷ ಗೋಕರೆ ಸತೀಶ್ ರೈತ ಘಟಕ ಅಧ್ಯಕ್ಷ ವೆಂಕಟೇಶ್, ಜಿಲ್ಲಾ ಕಾರ್ಮಿಕ ಘಟಕದ ಉಪಾಧ್ಯಕ್ಷ ಶಿವಕುಮಾರ್, ತಾ. ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾ, ಉಪಾಧ್ಯಕ್ಷೆ ಸಹನಾ. ಇನ್ನೂ ಹಿತರರು ಹಾಜರಿದ್ದರು.
Leave a Review