ದೇವನಹಳ್ಳಿ : ವಿಧಾನ ಪರಿಷತ್ನ 3 ಪದವೀಧರ 3 ಶಿಕ್ಷಕರ ಕ್ಷೇತ್ರಕ್ಕೆ ಮೇ 3ರಂದು ಚುನಾವಣೆ ನಡೆಯಲಿದ್ದು, ಪದವೀಧರರ ಹಕ್ಕುಗಳ ರಕ್ಷಣೆ ಮತ್ತು ಅವರ ಸಮಸ್ಯೆಗಳ ವಿರುದ್ಧ ಹೋರಾಡಲು ಬೆಂಗಳೂರು ಪದವೀಧರ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮೋಜಿಗೌಡ ಸೂಕ್ತ ವ್ಯಕ್ತಿಯಾಗಿದ್ದು ಅವರಿಗೆ ಬಹುಮತದ ಮೂಲಕ ಬೆಂಬಲಿಸಬೇಕು ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುಡಿಗಾರ ತಿಳಿಸಿದರು.
ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಬೆಂಗಳೂರು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಕರೆಯಲಾಗಿದ್ದ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬೆಂಗಳೂರು ಪದವೀಧರ ಕ್ಷೇತ್ರದ ಒಟ್ಟು 1,21,000 ಕ್ಕೂ ಹೆಚ್ಚು ಮತದಾರರಿದ್ದೂ, ದೇವನಹಳ್ಳಿ ತಾಲೂಕಿನಲ್ಲಿ 4700 ಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದಾರೆ, ಈಗಾಗಲೇ ಪದವೀಧರ ಕ್ಷೇತ್ರದ ರಾಮೋಜಿ ಗೌಡರು ಉದ್ಯೋಗ ಮೇಳ ಆಯೋಜನೆ ಮಾಡುವ ಮುಖಾಂತರ ನಿರುದ್ಯೋಗ ಯುವಕ ಯುವತಿಯರಿಗೆ 9,000 ಉದ್ಯೋಗವಕಾಶವನ್ನು ಕಲ್ಪಿಸಿದ್ದಾರೆ ಅಂತಹ ಸೇವಾ ಮನೋಭಾವದ ವ್ಯಕ್ತಿ ಅವಶ್ಯಕತೆ ಇದೆ ಎಂದರು.
ಕಳೆದ ಬಾರಿ ಮೂರು ಸಾವಿರಕ್ಕೂ ಹೆಚ್ಚುಮತಗಳು ತಿರಸ್ಕøತಗೊಂಡಿದ್ದರಿಂದ ರಾಮೋಜಿ ಗೌಡರು ಸೋಲುವಂತಾಗಿದೆ ಆದ್ದರಿಂದ ಪದವೀದರ
ಮತದಾರರು ಅವರ ಹೆಸರಿನ ಮುಂದೆ | ಎಂದು ಗೆರೆ ಎಳೆಯುವುದರ ಮುಖಾಂತರ ಮೊದಲ ಪ್ರಾಶಸ್ತ್ಯದ ಮತ ಚಲಾಯಿಸಬೇಕು, ಅದಕ್ಕೆ ಯಾವುದೇ ಸಿಂಗಾರ ಮಾಡಬೇಡಿ ಎಂದರು.
ಬಯಪ ಅಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್ ಮಾತನಾಡಿ 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಪರಿಷತ್ ಕ್ಷೇತ್ರ ಇದಾಗಿದ್ದು ಕಾಂಗ್ರೆಸ್ ಬೆಂಬಲಿತ
ರಾಗಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿರುವ ರಾಮೋಜಿಗೌಡರು ಕಳೆದ ಬಾರಿ ಕಡಿಮೆ ಮತಗಳ ಅಂತರದಿಂದಪರಾಭವಗೊಂಡಿದ್ದರು, ನಮ್ಮ ಪಕ್ಷದಿಂದ ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಬಂದಿರುವ ಪುಟ್ಟಣ್ಣನವರು ಸಹ ನಮ್ಮ ಜೊತೆಯಲ್ಲಿದ್ದಾರೆ ಆದ ಕಾರಣ ಪದವೀಧರರು ರಾಮೋಜಿಗೌಡರಿಗೆ ಹೆಚ್ಚಿನ ಮತ ನೀಡುವ ಮುಖಾಂತರ ಜಯಶಾಲಿಯನ್ನಾಗಿ ಮಾಡಬೇಕು ಎಂದರು.
ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ಕುಂದಾಣ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕೋದಂಡರಾಮ, ಸೋಲೂರು ಉಮೇಶ್ಕುಮಾರ್ ಉಪಸ್ಥಿತರಿದ್ದರು.