ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ದಲಿತ ಸಂಘಟನೆಗಳ ಮುಖಂಡರುಗಳ ಜೊತೆಗೆ ೨೦೨೬-೨೭ನೇ ಸಾಲಿನ ಬಜೆಟ್ ಗೆ ಸಂಬAಧಿಸಿದAತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಸಿದರು. ಈ ವೇಳೆ ಆದಿ ಜಾಂಬವ ಬ್ರಿಗೇಡ್ ನ ಅಧ್ಯಕ್ಷರಾದ ಪ್ರತಾಪ್ ಕೆ ರವರು ಬಜೆಟ್ಗೆ ಸಂಬAಧಪಟ್ಟAತೆ ಸರ್ಕಾರದ SಅSP ಯೋಜನೆಯಲ್ಲಿ ಈಗಾಗಲೇ ಸರ್ಕಾರ ಆದೇಶ ಮಾಡಿರುವ ಶೇಕಡ ೧೭% ಒಳ ಮೀಸಲಾತಿ ಅನುಸಾರ (೬+೬+೫) ಪ್ರಕಾರ ವರ್ಗೀಕರಣ ಮಾಡಿ ಪರಿಶಿಷ್ಟ ಜಾತಿ ಎಲ್ಲಾ ಜನಾಂಗಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಲಾಯಿತು. ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ, ಹಾಗೂ ಸಮಾಜದ ಮುಖಂಡರು, ಸರ್ಕಾರದ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.



