ಚೆನ್ನೈ: ಸಾಂಘಿಕ ಆಟವಾಡಿದ ಪಂಜಾಬ್ ತಂಡವು ಸೋಮವಾರ ನಡೆದ 13ನೇ ಹಾಕಿ ಇಂಡಿಯಾ ಸೀನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ನ ಸೆಮಿಫೈನಲ್ನಲ್ಲಿ 5-1ರಿಂದ ಕರ್ನಾಟಕ ತಂಡವನ್ನು ಮಣಿಸಿತು.
ರಾಷ್ಟ್ರೀಯ ತಂಡದ ನಾಯಕರೂ ಆಗಿರುವ ಹರ್ಮನ್ಪ್ರೀತ್ ಸಿಂಗ್ (39, 44ನೇ ನಿ) ಪಂಜಾಬ್ ತಂಡದ ಪರ ಎರಡು ಗೋಲು ಗಳಿಸಿ ಮಿಂಚಿದರೆ, ಶಂಶೇರ್ಸಿಂಗ್ (4ನೇ), ಸುಖಜೀತ್ ಸಿಂಗ್ (13ನೇ) ಮತ್ತು ಆಕಾಶದೀಪ್ ಸಿಂಗ್ (45ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿ ತಂಡವನ್ನು ಫೈನಲ್ಗೆ ಮುನ್ನಡೆಸಿದರು. ಕರ್ನಾಟಕದ ಪರ ಏಕೈಕ ಗೋಲನ್ನು ಬಿ. ಅಭರಣ ಸುದೇವ್ (18ನೇ) ತಂದಿತ್ತರು.