ಬೆಂಗಳೂರು: ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್ಅಪ್ಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ,ಬೆಂಗಳೂರಿನ ಐಐಎಸ್ಸಿಯ ಎಫ್ಎಸ್ಐಡಿ, ಐಐಎಂ ಇನ್ನೋವೇಶನ್ ಎನ್ಎಸ್ಆರ್ಸಿಇಎಲ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಬೆಸ್ಕಾಂ ಕಾರ್ಪೋರೇಟ್ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿಈ ಒಪ್ಪಂದಕ್ಕೆ ಕ್ರೆಡಲ್ನ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹಾಗೂ ಯುಎನ್ಎಸ್ಡಬ್ಲು÷್ಯ ಸಿಡ್ನಿಯಲ್ಲಿ ಪ್ರೊ ವೈಸ್-ಚಾನ್ಸೆಲರ್ ಆಗಿರುವ ಲಿಸಾ ಝಾಂಬರ್ಲಾನ್ ಅವರು ಸಹಿ ಹಾಕಿದರು. ಇದೇ ಸಂದರ್ಭದಲ್ಲಿ ಐಐಎಸ್ಸಿಯ ಎಫ್ಎಸ್ಐಡಿ, ಐಐಎಂಬಿ ಇನ್ನೋವೇಶನ್ ಎನ್ಎಸ್ಆರ್ಸಿಇಎಲ್ ಮುಖ್ಯಸ್ಥರು ಕ್ರೆಡಲ್ ಜತೆಗಿನ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.
ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ ಮತ್ತು ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಈ ಒಪ್ಪಂದಗಳಿಗೆ ಸಾಕ್ಷಿಯಾದರು.
ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ವ್ಯಾಪಾರ ಮತ್ತು ಹೂಡಿಕೆಗೆ ಒತ್ತು ನೀಡುವ ‘ಆಸ್ಟ್ರೇಲಿಯಾ ಇಂಡಿಯಾ ಬಿಸಿನೆಸ್ ಕೌನ್ಸಿಲ್’ ಈ ಒಪ್ಪಂದಕ್ಕೆ ನೆರವಾಗಿದೆ.
ಸೌರ, ಪವನ, ಜೈವಿಕ ಶಕ್ತಿ ಮತ್ತು ಇಂಧನ ಸಂಗ್ರಹಣೆಯಲ್ಲಿ ನವೋದ್ಯಮಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಒಪ್ಪಂದದ ಅನ್ವಯ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕ್ರೆಡಲ್ ಬೆಂಗಳೂರಿನಲ್ಲಿ ಇನ್ಕು÷್ಯಬೇಷನ್ ಮತ್ತು ತಂತ್ರಜ್ಞಾನ ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸಲಿದೆ. ಮೂಲಸೌಕರ್ಯ ಮತ್ತು ಸ್ಥಳೀಯ ನಿಧಿಯನ್ನು ಕ್ರೆಡಲ್ ಒದಗಿಸಿದರೆ, ಸಾಮರ್ಥ್ಯ ವೃದ್ಧಿ, ತಾಂತ್ರಿಕ ಮಾರ್ಗದರ್ಶನವನ್ನು ಪಾಲುದಾರಿಕೆ ಸಂಸ್ಥೆಗಳು ನೀಡಲಿವೆ. ಜತೆಗೆ, ಜಾಗತಿಕ ಸಂಶೋಧನಾ ಸಂಸ್ಥೆಗಳು ಮತ್ತು ನಾವೀನ್ಯತೆ ಜಾಲಗಳೊಂದಿಗೆ ಯುಎನ್ಎಸ್ಡಬ್ಲು÷್ಯ ಸಂಪರ್ಕ ಬೆಸೆಯಲಿದೆ.
ಈ ಉಪಕ್ರಮದಡಿ ಪ್ರತಿ ವರ್ಷ 20 ನವೋದ್ಯಮಗಳಿಗೆ ಬೆಂಬಲ ನೀಡಲಾಗುವುದು. ಕಾರ್ಯಕ್ರಮದ ಅವಧಿಯಲ್ಲಿ ಮೂಲ ಮಾದರಿ ಅಭಿವೃದ್ಧಿ ಹಾಗೂ ನವೋದ್ಯಮಗಳಿಗೆ ಕ್ರೆಡಲ್ ನೆರವು ನೀಡಲಿದೆ. ಕಾರ್ಯಕ್ರಮದ ವ್ಯಾಪ್ತಿ ವಿಸ್ತರಣೆಗೆ ಯುಎನ್ಎಸ್ಡಬ್ಲು÷್ಯ ಹೆಚ್ಚುವರಿ ಅಂತಾರಾಷ್ಟ್ರೀಯ ನಿಧಿ ಸಂಗ್ರಹಣೆಗೆ ಆದ್ಯತೆ ನೀಡಲಿದೆ. ಇದರಿಂದ ಈ ಸ್ಟಾರ್ಟ್ಅಪ್ಗಳಿಗೆ ಜಾಗತಿಕ ಮಟ್ಟದ ಸಂಪರ್ಕ, ಸುಧಾರಿತ, ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ವಿಸ್ತೃತ ಮಾರುಕಟ್ಟೆ ದೊರೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, “ಶುದ್ಧ ಇಂಧನ ಅಳವಡಿಕೆ ಹಾಗೂ ನವೀಕರಿಸಬಹುದಾದ ಇಂಧನ ವಲಯದ ನವೋದ್ಯಮಗಳನ್ನು ಬೆಂಬಲಿಸುವ ಪ್ರಮುಖ ಒಪ್ಪಂದಕ್ಕೆ ಕ್ರೆಡಲ್ ಹಾಗೂ ಯುಎನ್ಎಸ್ಡಬ್ಲು÷್ಯ ಸಹಿ ಹಾಕಿವೆ. ಈ ಸಹಯೋಗದಿಂದ ನಾವೂ ಆಸ್ಟ್ರೇಲಿಯಾದ ಸುಧಾರಿತ ಪರಿಣತಿಯನ್ನು ಬಳಸಿಕೊಳ್ಳಲು ಸಾಧ್ಯವಾಗಲಿದ್ದು, ಈ ಮೂಲಕ ಜಾಗತಿಕ ವ್ಯವಸ್ಥೆಯೊಂದಿಗೆ ನಾವು ಕೈಜೋಡಿಸಬಹುದಾಗಿದೆ. ಈ ಮೂರು ಒಪ್ಪಂದಗಳಿಂದ ರಾಜ್ಯದ ಉದ್ದಿಮೆಗಳಿಗೆ ನೆರವಾಗಲಿದ್ದು, ಉದ್ಯೋಗ ಸೃಷ್ಟಿಯೂ ಆಗಲಿದೆ,” ಎಂದು ಹೇಳಿದರು.
ಸಿಡ್ನಿಯ ಯುಎನ್ಎಸ್ಡಬ್ಲು÷್ಯ ಪ್ರೊ ವೈಸ್ ಚಾನ್ಸೆಲರ್ ಪ್ರೊಫೆಸರ್ ಲಿಸಾ ಜಾಂಬರ್ಲಾನ್ ಮಾತನಾಡಿ, “ಶುದ್ಧ ಇಂಧನ ವಲಯದ ಸ್ಟಾರ್ಟ್ಅಪ್ಗಳನ್ನು ಬೆಂಬಲಿಸುವ ಈ ಒಪ್ಪಂದವು ಭಾರತ ಮತ್ತು ಆಸ್ಟ್ರೇಲಿಯಾದ ಬದ್ಧತೆಗೆ ಸಾಕ್ಷಿಯಾಗಿದೆ. ಈ ಪಾಲುದಾರಿಕೆ ಮೂಲಕ ಪರಿಸರ ಸಂರಕ್ಷಣೆ, ಇಂಧನ ಪರಿವರ್ತನೆ ಮತ್ತು ಸುಸ್ಥಿರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಹೇಳಿದರು.
ಐಐಎಸ್ಸಿ ಹಾಗೂ ಐಐಎಂಬಿ ಜತೆಗೆ ಕ್ರೆಡಲ್ ಒಪ್ಪಂದ: ಕರ್ನಾಟಕದಲ್ಲಿ ಡೀಪ್-ಟೆಕ್ ನವೀಕರಿಸಬಹುದಾದ ಇಂಧನ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಬೆಂಗಳೂರಿನ ಐಐಎಸ್ಸಿಯ ಎಫ್ಎಸ್ಐಡಿ ಹಾಗೂ ಕ್ರೆಡಲ್ ನಡುವೆ ಮೂರು ವರ್ಷಗಳ ಸಹಯೋಗ ಏರ್ಪಟ್ಟಿದೆ. ಬೆಂಗಳೂರಿನಲ್ಲಿ ಇನ್ಕ್ಯುಬೇಷನ್ ಮತ್ತು ಟೆಕ್ನಾಲಜಿ ಇನ್ನೋವೇಶನ್ ಸೆಂಟರ್ ಸ್ಥಾಪನೆ, ನಿರ್ವಹಣೆ, ಸ್ಟಾರ್ಟ್ಅಪ್ಗಳ ಆಯ್ಕೆ ಪ್ರಕ್ರಿಯೆ ಮತ್ತು ಸಂಬAಧಿತ ಉದ್ಯಮ ಪಾಲುದಾರಿಕೆಗಳನ್ನು ಸಂಘಟಿಸುವ ಜವಾಬ್ದಾರಿ ಕ್ರೆಡಲ್ನದ್ದು. ಐಐಎಸ್ಸಿಯ ಇನ್ಕ್ಯೂಬೇಷನ್ ವಿಭಾಗವಾದ ಎಫ್ಎಸ್ಐಡಿಯು ಸಂಸೋಧನೆ ಮತ್ತು ಅಭಿವೃದ್ಧಿಗಾಗಿ ಲ್ಯಾಬ್ ಸೌಲಭ್ಯ ಒದಗಿಸಲಿದೆ. ಅಲ್ಲದೇ, ಐಐಎಸ್ಸಿಯ ಅಧ್ಯಾಪಕರು ಮತ್ತು ಸಂಶೋಧಕರು ವೈಜ್ಞಾನಿಕ ಮಾರ್ಗದರ್ಶನ ನೀಡಲಿದ್ದಾರೆ.
ಆರಂಭಿಕ ಹಂತದ ನವೀಕರಿಸಬಹುದಾದ ಇಂಧನ ವಲಯದ ಸ್ಟಾರ್ಟ್ಅಪ್ಗಳಿಗೆ ಪೂರಕ ಪರಿಸರ ಕಲ್ಪಿಸುವ ಜತೆಗೆ ದೊಡ್ಡ ಮಟ್ಟದಲ್ಲಿ ಅವುಗಳ ವಿಸ್ತರಣೆಗಾಗಿ ಐಐಎಂಬಿಯ ಇನ್ನೋವೇಶನ್ (ಎನ್ಎಸ್ಆರ್ಸಿಇಎಲ್) ಜತೆಗಿನ ಕ್ರೆಡಲ್ ಒಪ್ಪಂದ ನೆರವಾಗಲಿದೆ.
ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಗೌರವ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯನ್ ಕಾನ್ಸುಲ್ ಜನರಲ್ ಹಿಲರಿ ಮೆಕ್ಗೀಚಿ, ಯುಎನ್ಎಸ್ಡಬ್ಲು÷್ಯ ಪ್ರೊ ವೈಸ್ ಚಾನ್ಸೆಲರ್ ಪ್ರೊಫೆಸರ್ ಲಿಸಾ ಜಾಂಬರ್ಲಾನ್, ದಕ್ಷಿಣ ಏಷ್ಯಾ ಆಸ್ಟ್ರೇಲಿನ ವ್ಯಾಪಾರ ಮತ್ತು ಹೂಡಿಕೆ ಆಯುಕ್ತ ವಿಕ್ ಸಿಂಗ್, ಯುಎನ್ಎಸ್ ಡಬ್ಲೂ÷್ಯನ ವ್ಯವಸ್ಥಾಪಕ ನಿರ್ದೇಶಕ ದೀಪಂಕರ್ ಚಕ್ರವರ್ತಿ, ಎಫ್ಎಸ್ಐಡಿ ಸ್ಟೆಮ್ ಸೆಲ್ ಸಿಇಒ ರಾಜ್ ವಾಘ್ರೇ, ಎನ್ಎಸ್ಆರ್ಸಿಇಎಲ್ (ಐಐಎಂಬಿ ಇನ್ನೋವೇಶನ್ಸ್) ಸಿಇಒ ಆನಂದ್ ಶ್ರೀ ಗಣೇಶ್, ಎನ್ಎಸ್ಆರ್ಸಿಇಎಲ್ (ಐಐಎಂಬಿ ಇನ್ನೋವೇಶನ್ಸ್) ಸಿಎಫ್ಒ ವಿಜಯ್ಕೃಷ್ಣನ್ ಟಿಎಸ್ ಹಾಜರಿದ್ದರು.
ನವೀಕರಿಸಬಹುದಾದ ಇಂಧನ ಸ್ಟಾರ್ಟ್ ಆಪ್ ಉತ್ತೇಜನಕ್ಕೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ವಿವಿ, ಐಐಎಸ್ಸಿ, ಐಐಎಂಬಿ ಜತೆ ಕರ್ನಾಟಕ ಒಪ್ಪಂದ



