ದೇವನಹಳ್ಳಿ : ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಕಾಂಗ್ರೇಸ್ ತೆಗದುಕೊಳ್ಳುವ ತಿರ್ಮಾನಗಳನ್ನು ಪರಿಷತ್ತಿನಲ್ಲು ಅಂಗಿಕಾರವಾಗಬೇಕಾದರೆ ನಮ್ಮ ವಿಧಾನ ಪರಿಷತ್ ಸದಸ್ಯರನ್ನು ಹೆಚ್ಚಿನ ಮತಗಳಿಂದ ಜಯವನ್ನು ತರಬೇಕು ಎಂದು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಬೆಂಗಳೂರು ಪದವೀಧರ ಕ್ಷೇತ್ರದ ಒಟ್ಟು 1,21,000 ಕ್ಕೂ ಹೆಚ್ಚು ಮತದಾರರಿದ್ದೂ, ರಾಮನಗರ, ಬೆಂ.ಗ್ರಾ.ಮತ್ತು ಬೆಂಗಳೂರು ನಗರಗಳ ವ್ಯಾಪ್ತಿಯ ಮತದಾರರಿದ್ದಾರೆ, ದೇ.ತಾ 4700 ಕ್ಕೂ ಹೆಚ್ಚು ಮತದಾರರು ಹೊಂದಿದ್ದು ಈಗಾಗಲೇ ಪದವೀಧರ ಕ್ಷೇತ್ರದ ರಾಮೋಜಿ ಗೌಡರವರು ನಿರುದ್ಯೋಗ ಯುವಕ ಯುವತಿಯರಿಗೆ 9,000 ಉದ್ಯೋಗವಕಾಶವನ್ನು ಕಲ್ಪಿಸಿದ್ದಾರೆ ಅಂತಹ ಸೇವಾ ಮನೋಭಾವದ ವ್ಯಕ್ತಿ ಅವಶ್ಯಕತೆ ಇದೆ ಎಂದರು.
ಬೆಂಗಳೂರು ಪದವೀಧರ ಕ್ಷೇತ್ರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಮೋಜಿಗೌಡ ಮಾತನಾಡಿ 36 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಪರಿಷತ್ ಕ್ಷೇತ್ರ ಇದಾಗಿದ್ದು ಕಾಂಗ್ರೆಸ್ ಬೆಂಬಲಿನಾಗಿ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದೇನೆ, ಈ ಬಾರಿ ಶಿಕ್ಷಕರ ಕ್ಷೇತ್ರದಿಂದ ಆರಿಸಿ ಬಂದಿರುವ ಪುಟ್ಟಣ್ಣ ತಮ್ಮ ಜೊತೆಗಿರುವುದು ಆನೆ ಬಲ ಬಂದಂತಾಗಿದೆ, ಪದವೀಧರರು ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.
ನಗರದಲ್ಲಿ ಕೆಲವು ಶಾಲೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಪದವೀಧರ ಶಿಕ್ಷಕರ ಬಳಿ ಮತಯಾಚಿಸಿದ್ದೇನೆ, ನಾನು ಸಹ ಶಿಕ್ಷಕನಾಗಿ ವೃತ್ತಿ ಆರಂಭಿಸಿ, ಶಿಕ್ಷಕರು ಮತ್ತು ಪದವೀಧರರ ಸಮಸ್ಯೆಗಳಿಗೆ ಹಲವು ಹೋರಾಟ ನಡೆಸಿದ್ದೇನೆ ಮತದಾರಿಗೆ ಭರ್ಜರಿ ಗಿಫ್ಟ್ ಕೊಟ್ಟು ಆಮಿಷಕ್ಕೆ ಒಳಪಡಿಸುವ ಮತದಾನ ಪಡೆಯುವ ಅವಶ್ಯಕತೆ ನನಗಿಲ್ಲ ಅದು ಊಹಾಪೋಹಾಗಳು ಚುನಾವಣೆಯ ನಂತರವೂ ನನ್ನ ಹಿಂದಿನ ರೀತಿಯಲ್ಲಿಯೇ ಜನಸೇವೆ ಮುಂದುವರಿಯಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಬಾಗೇಪಲ್ಲಿ ಮಾಜಿ ಶಾಸಕ ಸಂಪಂಗಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಬಿ.ರಾಜಣ್ಣ, ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಬಯಪ ಅಧ್ಯಕ್ಷ ವಿ.ಶಾಂತಕುಮಾರ್, ಕೆ.ಸಿ.ಮಂಜುನಾಥ್, ಯೂತ್ ಅಧ್ಯಕ್ಷ ಕೆ.ಆರ್.ನಾಗೇಶ್, ನಾಗೇಗೌಡ, ಜಯರಾಮೇಗೌಡ, ಅಣ್ಣೇಶ್ವರ ಚಂದ್ರಶೇಖರ್, ಮುನಿರಾಜು, ರಾಧಾರೆಡ್ಡಿ, ಮಾಧವಿ, ಶಶಿಕಲಾ, ಮೀನಾಕ್ಷಿ, ಶ್ರೀನಿವಾಸ್, ಎಂ.ಎನ್.ರಾಜಣ್ಣ, ಮುನಿಯಪ್ಪ, ಉಪಸ್ಥಿತರಿದ್ದರು.



