ಚಿತ್ರದುರ್ಗ: ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿನ ಸಮಸ್ಯೆ ಗಳ ಬಗ್ಗೆ ಗೋವಿಂದ ಕಾರಜೋಳ ರವರಿಗೆ ಯಾವುದೇ ಅರಿವಿಲ್ಲ. ಹಾಗಾಗಿ ಇಂತಹವರು ಚುನಾ ವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ದಿ ಹೇಗೆ ಸಾಧ್ಯ. ಹಾಲಿ ಸಂಸದ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಯುವ ಮುಖಂಡ ಎಂ.ಸಿ.ರಘುಚಂದನ್ ಇವರುಗಳ ಪೈಕಿ ಯಾರಿಗಾದರೂ ಟಿಕೆಟ್ ನೀಡಲಿ.
ನಗರದ ಬಿಜೆಪಿ ಕಛೇರಿ ಮುಂದೆ ಕರುನಾಡು ವಿಜಯ ಸೇನೆ ಸಂಘಟನೆಯ ಪದಾಧಿಕಾರಿಗಳು ಗೋವಿಂದ ಕಾರಜೋಳರಿಗೆ ಟಿಕೇಟ್ ನೀಡಿದರೆ.ಬಿಜೆಪಿ ಇಲ್ಲಿ ಕ್ಷೇತ್ರ ವನ್ನು ಕಳೆದುಕೊಂಡು ಸೋಲುವುದರಲ್ಲಿ ಅನುಮಾನ ವಿಲ್ಲ. ಹಾಗಾಗಿ ಬಿಜೆಪಿ.ನಾಯಕರುಗಳು ಗಂಭೀರವಾಗಿ ಪರಿ ಗಣಿಸಬೇಕೆಂದು ಪ್ರತಿಭಟನೆಯ ನೇತೃತ್ವವಹಿಸಿದ್ದ. ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾ ರ್ ಒತ್ತಾಯಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನಕಾರ್ಯದರ್ಶಿ ಗೋಪಿನಾಥ್, ಅಣ್ಣಪ್ಪ, ನಿಸಾರ್ ಅಹಮದ್, ಜಗದೀಶ್ ಸಿ.ಅವಿನಾಶ್, ನಾಗರಾಜ್, ಮುತ್ತು ಪ್ರದೀಪ್, ಸಂತೋಷ್, ಏನ್.ಸುರೇಶ್, ಅಖಿಲೇಶ್, ಕಮಲಮ್ಮ ಇವರುಗಳು ಪ್ರತಿಭ ಟನೆಯಲ್ಲಿ ಪಾಲ್ಗೊಂಡಿದ್ದರು.