ವಿಜಯಪುರ: ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ ವಿಶ್ವೇಶ್ವರಯ್ಯ ರವರ ಮಾರ್ಗದರ್ಶನದಂತೆ ಕನ್ನಡ ಸಾಹಿತ್ಯ ಪರಿಷತ್ ಇಂದಿಗೂ ಸಹ ಅತ್ಯುತ್ತಮವಾಗಿ ನಡೆದುಕೊಂಡು ಬರುತ್ತಿದೆ. ಕನ್ನಡ ಸಮ್ಮೇಳನ ಸಾಹಿತ್ಯ ಕಾರ್ಯ ಆಯೋಜಿಸುವುದಕ್ಕಿಂತ ದಿನ ನಿತ್ಯಕನ್ನಡ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ರವರು ತಿಳಿಸಿದರು.
ವಿಜಯಪುರ ಪಟ್ಟಣದ ಶಿಲ್ಪ ಪ್ರಿಂಟರ್ಸ್ ಮಳಿಗೆಯಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವಿಜಯಪುರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 110 ನೇಯ ಸಂಸ್ಥಾಪನಾ ದಿನಾಚರಣೆ ಮತ್ತು ಅಭಿನಂದನೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಪರಿಷತ್ ಹಿರಿಯ ಸದಸ್ಯರು ಹಾಗೂ ತಾಲ್ಲೂಕು ಕಸಾಪ ಸಂಸ್ಥಾಪಕ ಖಜಾಂಚಿಗಳಾದ ಎಂ.ಗಿರಿರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿ ಎಂ.ಗಿರಿರಾಜ್ ರವರು ಮಾತನಾಡುತ್ತಾ ನನ್ನ ಅಧಿಕಾರ ಅವಧಿಯಲ್ಲಿ ಮೂರು ಬಾರಿ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿ ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿದ್ದೇನೆ ಎಂದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾದ ಮಾಸ್ ಮಹೇಶ್ ವಹಿಸಿದ್ದರು.
ಹಿರಿಯ ಕಲಾವಿದರಾದ ಅರದೇಶನಹಳ್ಳಿಯ ಮುನಿಕೆಂಪಣ್ಣ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆರ್ ಕೆ ನಂಜೇಗೌಡರು,ಕೋಶಾಧಿಕಾರಿಗಳಾದ ರಾಮಾಂಜಿನಪ್ಪ, ಹೋಬಳಿ ಕೋಶಾಧ್ಯಕ್ಷರಾದ ಕನ್ನಡಿಗ ಎನ್ ಕನಕರಾಜು, ಪಟ್ಟಣ ಕಸಾಪ ನಿಕಟ ಪೂರ್ವ ಅಧ್ಯಕ್ಷರಾದ ಜೆ ಆರ್ ಮುನಿವೀರಣ್ಣ, ಮುರುಳಿ ಮಗು, ಜೇಸಿಐ ವಲಯ 14ರ ವಲಯಾಧಿಕಾರಿಗಳಾದ ಎನ್.ಸಿ ಮುನಿ ವೆಂಕಟರಮಣ, ಹಾರೋಹಳ್ಳಿ ಗ್ರಾಮದ ಬೈರೇಗೌಡರು, ಮಂಜುನಾಥ್, ಸುಬ್ರಮಣಿ, ಮಳ್ಳೂರು ಮಂಜುನಾಥ್, ಗೋವಿಂದರಾಜುಉಪಸ್ಥಿತರಿದ್ದರು.