ಕನಕಪುರ: ಕೆಂಪೇಗೌಡರ ದೂರದೃಷ್ಟಿ ಚಿಂತನೆ ಮತ್ತು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ನಿರ್ಮಾಣ ಮಾಡಿದ ಬೆಂಗಳೂರು ಇಂದು ವಿಶ್ವ ಮಾನ್ಯತೆ ಪಡೆದಿದೆ ಎಂದು ಸಮುದಾಯದ ಮುಖಂಡ ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿಯ ತುಂಗಣಿ ಗ್ರಾಮದ ಕೆಂಪೇಗೌಡರ ಅಭಿಮಾನಿ ಬಳಗದ ವತಿಯಿಂದ ನಿರ್ಮಾಣ ಮಾಡಿರುವ ಕೆಂಪೇಗೌಡರ ಪುತ್ತಳಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು ಮಾಗಡಿ ಕೆಂಪೇಗೌಡರು ವಿಜಯನಗರದ ಅರಸರಂತೆ ನಾಡನ್ನು ಕಟ್ಟುವ ಸಂಕಲ್ಪ ಮಾಡಿ ದೂರ ದೃಷ್ಟಿ ಚಿಂತನೆ ಇಟ್ಟುಕೊಂಡು ಬೆಂಗಳೂರು ನಗರವನ್ನು ನಿರ್ಮಾಣ ಮಾಡಿದರು ಬೆಂಗಳೂರು ವಿಸ್ತಾರವಾಗುತ್ತಿದ್ದಂತೆ.
ಕೆಂಪೇಗೌಡರ ಬೆಳವಣಿಗೆಯನ್ನು ಸಹಿಸದೆ ಚನ್ನಪಟ್ಟಣದ ಪಾಳ್ಳೇಗಾರ ಜಗದೇಕರಾಯ ಮತ್ತು ಟಿಪ್ಪು ಸುಲ್ತಾನ್ ಇಬ್ಬರು ಸಂಚು ಮಾಡಿ ಕೆಂಪೇಗೌಡರು ನಿಮ್ಮ ವಿರುದ್ಧ ರಾಜ್ಯಭಾರ ಮಾಡುತ್ತಿದ್ದಾರೆ ಎಂದು ಶ್ರೀ ಕೃಷ್ಣದೇವರಾಯ ರಿಗೆ ದೂರನ್ನು ಕೊಟ್ಟಿದ್ದರು ಅದರ ಪರಿಣಾಮ ಶ್ರೀ ಕೃಷ್ಣದೇವರಾಯರು ಕೆಂಪೇಗೌಡರನ್ನು 6 ವರ್ಷಗಳ ಸೆರೆವಾಸದ ಶಿಕ್ಷೆ ನೀಡಿದರು.
ಕೆಂಪೇಗೌಡರು ಸೆರೆವಾಸವನ್ನು ಅನುಭವಿಸಿದ ನಂತರ ಕೆಂಪೇಗೌಡರು ಯಾವುದೇತಪ್ಪನ್ನು ಮಾಡಿಲ್ಲ ಎಂಬ ಸತ್ಯವನ್ನು ಮನ ಗಂಡ ಶ್ರೀ ಕೃಷ್ಣದೇವರಾಯರು ಆ ನಂತರ ಕೆಂಪೇಗೌಡರನ್ನ ಸೆರೆವಾಸದಿಂದ ಬಿಡುಗಡೆ ಮಾಡಿ ನಾಡನ್ನು ಕಟ್ಟಲು ಕೆಂಪೇಗೌಡರಿಗೆ ಹಣ ವಜ್ರ ವೈಡ್ಯೂರುಗಳನ್ನು ಕೊಡುಗೆಯಾಗಿ ಕೊಟ್ಟರು ಕೆಂಪೇಗೌಡರು ಬೆಂಗಳೂರು ಸುತ್ತಮುತ್ತ ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ಬೆಂಗಳೂರು ನಗರದಲ್ಲಿ ಎಲ್ಲಾ ಜಾತಿ ಧರ್ಮದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 60 ಕ್ಕೂ ಹೆಚ್ಚು ಪೇಟೆಗಳನ್ನು ನಿರ್ಮಾಣ ಮಾಡಿದರು.
ಮುಖಂಡ ವಿಶ್ವನಾಥ ಮಾತನಾಡಿ ಕೆಂಪೇಗೌಡರು ನಿರ್ಮಾಣ ಮಾಡಿದ ಬೆಂಗಳೂರು ಇಂದು ಜಗತ್ಪ್ರಸಿದ್ಧಿ ಯಾಗಿ ಪ್ರಖ್ಯಾತಿಯನ್ನು ಪಡೆದುಕೊಂಡಿದೆ ದೂರ ದೃಷ್ಟಿ ಚಿಂತನೆ ಇಟ್ಟುಕೊಂಡು ಕೆಂಪೇಗೌಡರು ಅಂದುನಿರ್ಮಾಣ ಮಾಡಿದ ಬೆಂಗಳೂರು ಕರ್ನಾಟಕ ರಾಜ್ಯಕ್ಕೆ ಕಿರೀಟ ಪ್ರಾಯವಾಗಿದೆ ಎಲ್ಲ ಜಾತಿ ಧರ್ಮದ ಜನರ ಜೀವನೋಪಾಯಕ್ಕೆ ವ್ಯಾಪಾರ ಕೇಂದ್ರಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ ಕೆಂಪೇಗೌಡರ ನಿಸ್ವಾರ್ಥ ಸೇವೆ ಮನೋಭಾವ ಪ್ರತಿಯೊಬ್ಬರಿಗೂ ಮಾದರಿ ಎಂದರು.
ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ಕೆಂಪೇಗೌಡ ಸೇನೆಯ ರಾಜ್ಯಾಧ್ಯಕ್ಷ ರವಿ, ಮುಖಂಡರಾದ ಸಿದ್ದ ಮರಿಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪುಟ್ಟೇಗೌಡ,,ರಾಮೇಗೌಡ, ರವಿ,ಪ್ರಕಾಶ್, ಶಿವನಂಜೇಗೌಡ, ಸೇರಿದಂತೆ ಕೆಂಪೇಗೌಡ ಅಭಿಮಾನಿ ಬಳಗದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.