ಮಾಗಡಿ: ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸುಮಾರು ವರ್ಷಗಳಿಂದ ವಿವಿಧ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು ಈ ಸೇವೆಯು ನಿತ್ಯ ನಿರಂತರವಾಗಿ ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಸಂಸ್ಥಾಪಕ ರಾಜ್ಯಾದ್ಯಕ್ಷರಾದ ಡಾ.ಹೆಚ್.ಎಂ.ಕೃಷ್ಣಮೂರ್ತಿ ಹೇಳಿದರು.
ತಾಲ್ಲೂಕಿನ ಹುಚ್ಚಹನುಮೇಗೌಡರ ಪಾಳ್ಯದ ಶ್ರೀ ಕಾಲ ಭೈರವೇಶ್ವರ ದೇವಾಲಯ ಸನ್ನಿಧಿಯಲ್ಲಿ ತಮ್ಮ ಜನುಮದಿನದ ನಿಮಿತ್ತವಾಗಿ ಶಾಸಕ ಹೆಚ್.ಸಿ.ಬಾಲಕೃಷ್ಣ ಮತ್ತು ತಮ್ಮ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರು ನಿರ್ಮಾತೃ ಮಾಗಡಿ ಕೆಂಪೇಗೌಡರ ಹೆಸರಿನಲ್ಲಿ ನಿರಂತರವಾಗಿ ಉಚಿತ ಸಾಮೂಹಿಕ ವಿವಾಹ,ಬೃಹತ್ ಆರೋಗ್ಯ ಶಿಬಿರ,ಕೆಂಪೇಗೌಡರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರದಲ್ಲಿದ್ದು ಕೆಂಪೇಗೌಡರ ಐಕ್ಯಸ್ಥಳ ಕೋಟೆ ಮೈದಾನ ಹಾಗೂ ಅವರ ಕಾಲದಲ್ಲಿ ನಿರ್ಮಾಣವಾಗಿರುವ ದೇವಸ್ಥಾನ ಕೋಟೆ ಕೊತ್ತಲುಗಳನ್ನು ಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು ಎಂದು ಕೃಷ್ಣಮೂರ್ತಿ ತಿಳಿಸಿದರು.
ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಮಾತನಾಡಿ ಡಾ.ಹೆಚ್.ಎಂ.ಕೃಷ್ಣಮೂರ್ತಿ ಅವರು ಯಾವುದೇ ಫಲಾಪೇಕ್ಷೆ ಬಯಸದೇ ಸಾಕಷ್ಟು ವರ್ಷಗಳಿಂದ ಗುರುತರವಾದ ಸಾಮಾಜಿಕ ಸೇವೆ ಮಾಡಿಕೊಂಡು ಬರುತ್ತಿದ್ದಾರೆ.
ವಿಶೇಷವಾಗಿ ಮಾಗಡಿ ಪಟ್ಟಣದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಕೆಂಪೇಗೌಡರಿಗೆ ಗೌರವ ಸಲ್ಲಿಸುವ ಕೆಲಸ ಮಾಡಿರುವುದು ಶ್ಲಾಘನೀಯ.ದೇವರು ಇವರಿಗೆ ಹೆಚ್ಚಿನ ಆಯಸ್ಸು ಆರೋಗ್ಯವನ್ನು ಕೊಟ್ಟು ಇವರ ಸೇವೆ ಹೀಗೆ ಮುಂದುವರೆಯಲು ಆಶೀರ್ವದಿಸಬೇಕೆಂದು ಬಾಲಕೃಷ್ಣ ಶುಭ ಹಾರೈಸಿದರು.
ದಿಶಾಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಸಮಾಜ ಸೇವಕ ಕೆ.ಬಾಗೇಗೌಡ,ಕಲ್ಕೆರೆ ಶಿವಣ್ಣ,ಮೋಹನ್, ದೊಡ್ಡಿಗೋಪಿ, ಗೌಡರಪಾಳ್ಯ ಧನಂಜಯ, ಜಾನಿಗೆರೆ ರವೀಶ್, ಹೊಸಪಾಳ್ಯ ಯತೀಶ್, ಡೇರಿ ಮಂಜುನಾಥ್,ಪಿ.ಸಿ.ಪಾಳ್ಯ ಶಿವು, ಎನ್.ಇ.ಎಸ್. ಆನಂದ್, ರಾಮು, ಜಗದೀಶ್ ಸೇರಿದಂತೆ ಮತ್ತಿತರಿದ್ದರು.