ಬೆಂಗಳೂರು: ನಿನ್ನೆ ವಿಧಾನಸಮಂಡಲದ ಅಧಿವೇಶನ ಮುಗಿದ ತಕ್ಷಣವೇ ಸಚಿವರ ವಿರುದ್ಧ ಗರಂಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಯೊಬ್ಬ ಸಚಿವರಿಗೂ ಖಡಕ್ ಪತ್ರ ಬರೆದಿದ್ದಾರೆ.
೧೬ ನೇ ವಿಧಾನಸಭೆ (೨೦೨೩-೨೦೨೬ ಇಂದಿನವರೆಗೆ) ೧ ನೇ ಅಧಿವೇಶನದಿಂದ ೯ ನೇ ಅಧಿವೇಶನದವರೆಗೆ ಇಲಾಖೆಗಳಿಂದ ಸಮರ್ಪಕವಾಗಿ ಉತ್ತರ ಸಿಕ್ಕಿಲ್ಲ. ಇದೇ ವಿಚಾರವಾಗಿ ಇಲಾಖಾವಾರು ಪ್ರಶ್ನೆಗಳ ಪಟ್ಟಿಯನ್ನು ದಿನಾಂಕ ೧೬/೦೩/೨೦೨೬ ರಂದು ಸದನದಲ್ಲಿ ಚರ್ಚೆಯಾಗಿದೆ. ಈವರೆಗೂ ೨೪೫ ಪ್ರಶ್ನೆಗಳಿಗೆ ೯೦ ಪ್ರಶ್ನೆಗಳಿಗೆ ಮಾತ್ರ ಉತ್ತರ ಒದಗಿಸಲಾಗಿದೆ. ಇದು ನನ್ನ ಗಮನಕ್ಕೂ ಬಂದಿದೆ. (ಪಟ್ಟಿ ಲಗತ್ತಿಸಲಾಗಿದೆ). ಪ್ರತಿಯೊಬ್ಬ ಸಚಿವರು ಕೂಡ ತಮ್ಮ ತಮ್ಮ ಇಲಾಖೆಯಿಂದ ಬರಬೇಕಾದ ಉತ್ತರ ಬಾರದೇ ಸದನದಲ್ಲಿ ಶಾಸಕರು ಚರ್ಚಿಸಲು ಅನಾನುಕೂಲ ಉಂಟು ಮಾಡಿದೆ. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ ಶಾಸಕರ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯುಂಟು ಮಾಡಿದೆ. ಇದೇ ವಿಚಾರವಾಗಿ ಮಾನ್ಯ ಸಭಾಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಇಲಾಖೆಯಿಂದ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಕಳುಹಿಸದೇ ಇರುವುದು ಇಲಾಖೆಯ ಕಾರ್ಯದರ್ಶಿಗಳ ವಿವರಣೆ ತಕ್ಷಣ ನೀಡಲು ಸೂಚಿಸಲಾಗಿದೆ. ಇನ್ನು ಉತ್ತರ ಕಳುಹಿಸದೇ ಇದ್ದ ಪಕ್ಷದಲ್ಲಿ ಸಂಬAಧಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರ ಕಳುಹಿಸಿ, ಮಾಹಿತಿ ಒದಗಿಸಲು ನಿರ್ದಿಷ್ಟ ಸಮಯವನ್ನು ಸಹ ಸೂಚಿಸಿದೆ.
೭ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ
ಬೆಂಗಳೂರು: ಸದನದಲ್ಲಿ ಶಾಸಕರ ಪ್ರಶ್ನೆಗೆ ಉತ್ತರ ನೀಡದ ಹಿನ್ನೆಲೆ ೮ ಐಎಎಸ್ ಅಧಿಕಾರಿಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಸಿಎಸ್ ಶಾಲಿನಿ ರಜನೀಶ್ ಕ್ರಮಕೈಗೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ.
೧೬ ನೇ ವಿಧಾನಸಭೆ (೨೦೨೩-೨೦೨೬ ಇಂದಿನವರೆಗೆ) ೧ ನೇ ಅಧಿವೇಶನದಿಂದ ೯ ನೇ ಅಧಿವೇಶನದವರೆಗೆ ಇಲಾಖೆಗಳಿಂದ ಸಮರ್ಪಕವಾಗಿ ಉತ್ತರ ಸಿಕ್ಕಿಲ್ಲ. ಇದೇ ವಿಚಾರವಾಗಿ ಇಲಾಖಾವಾರು ಪ್ರಶ್ನೆಗಳ ಪಟ್ಟಿಯನ್ನು ದಿನಾಂಕ ೧೬/೦೩/೨೦೨೬ ರಂದು ಸದನದಲ್ಲಿ ಚರ್ಚೆಯಾಗಿದೆ. ಈವರೆಗೂ ೨೪೫ ಪ್ರಶ್ನೆಗಳಿಗೆ ೯೦ ಪ್ರಶ್ನೆಗಳಿಗೆ ಮಾತ್ರ ಉತ್ತರ ಒದಗಿಸಲಾಗಿದೆ. ಇದು ನನ್ನ ಗಮನಕ್ಕೂ ಬಂದಿದೆ. (ಪಟ್ಟಿ ಲಗತ್ತಿಸಲಾಗಿದೆ). ಪ್ರತಿಯೊಬ್ಬ ಸಚಿವರು ಕೂಡ ತಮ್ಮ ತಮ್ಮ ಇಲಾಖೆಯಿಂದ ಬರಬೇಕಾದ ಉತ್ತರ ಬಾರದೇ ಸದನದಲ್ಲಿ ಶಾಸಕರು ಚರ್ಚಿಸಲು ಅನಾನುಕೂಲ ಉಂಟು ಮಾಡಿದೆ. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ ಶಾಸಕರ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯುಂಟು ಮಾಡಿದೆ. ಇದೇ ವಿಚಾರವಾಗಿ ಮಾನ್ಯ ಸಭಾಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಇಲಾಖೆಯಿಂದ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಕಳುಹಿಸದೇ ಇರುವುದು ಇಲಾಖೆಯ ಕಾರ್ಯದರ್ಶಿಗಳ ವಿವರಣೆ ತಕ್ಷಣ ನೀಡಲು ಸೂಚಿಸಲಾಗಿದೆ. ಇನ್ನು ಉತ್ತರ ಕಳುಹಿಸದೇ ಇದ್ದ ಪಕ್ಷದಲ್ಲಿ ಸಂಬAಧಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರ ಕಳುಹಿಸಿ, ಮಾಹಿತಿ ಒದಗಿಸಲು ನಿರ್ದಿಷ್ಟ ಸಮಯವನ್ನು ಸಹ ಸೂಚಿಸಿದೆ. ಹೀಗೆ ಸರ್ಕಾರದ ೭ ಪ್ರಮುಖ ಇಲಾಖೆಯ ಕಾರ್ಯದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಎಲ್ಲಾ ಇಲಾಖೆ ಅಪರ ಮುಖ್ಯ ರ್ಯರ್ಶಿ, ಪ್ರಧಾನ ರ್ಯರ್ಶಿ, ರ್ಯರ್ಶಿಗಳಿಗೆ ಸಿಎಸ್ ನೋಟಿಸ್ ಜಾರಿ ಮಾಡಿದ್ದಾರೆ. ಒಂದು ವಾರದಲ್ಲಿ ಉತ್ತರ ಕೊಡದೇ ಹೋದರೆ ಯಾಕೆ ಉತ್ತರ ಕಳಿಸಲು ಸಾಧ್ಯವಾಗಿಲ್ಲ ಅಂತ ವಿವರಣೆ ನೀಡಬೇಕು ಎಂದು ತಿಳಿಸಿದ್ದಾರೆ.
* ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ- ಆರ್.ವಿನೋತ್ ಪ್ರಿಯಾ
* ವಸತಿ ಇಲಾಖೆ ಕಾರ್ಯದರ್ಶಿ- ಮೋಹನ್ ರಾಜ್ ಕೆ.ಪಿ
* ಸಾರಿಗೆ ಇಲಾಖೆ ಕಾರ್ಯದರ್ಶಿ- ಎನ್.ವಿ ಪ್ರಸಾದ್
* ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಾರ್ಯದರ್ಶಿ ಆರ್.ಗೀರಿಶ್
* ಲೋಕಪಯೋಗಿ ಇಲಾಖೆ ರ್ಯರ್ಶಿ- ಅಮ್ಲಾನ್ ಆದಿತ್ಯ ಬಿಸ್ವಾಸ್
* ಕಂದಾಯ ಇಲಾಖೆ- ರಾಜೇಂದರ್ ಕುಮಾರ್ ಕಟಾರಿಯಾ
ಇನ್ನು ಈ ಎಲ್ಲಾ ಪತ್ರಗಳನ್ನು ಒಳಗೊಂಡAತೆ ಪ್ರತ್ಯೇಕವಾಗಿ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ಪತ್ರ ಬರೆದ ಸಿಎಸ್ ಶಾಲಿನಿ ರಜನೀಶ್.
ಈ ಮೇಲ್ಕಂಡ ಇಲಾಖೆಗಳ ಸರ್ಕಾರದ ಕಾರ್ತದರ್ಶಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಈ ವಿಷಯವನ್ನು ವಿಧಾನಸಭೆಯ ಸಭಾಧ್ಯಕ್ಷರ ಗಮನಕ್ಕೆ ತರುವಂತೆ ಪ್ರತ್ಯೇಕ ಪತ್ರ ಬರೆದಿದ್ದಾರೆ.



