ಬೆಂಗಳೂರು: ರಾಹುಲ್ ಗಾಂಧಿ ಅವರ ಆರೋಪ ಸತ್ಯವಾದ ಆರೋಪ. ಅಕ್ರಮದಿಂದಲೇ ಬಿಜೆಪಿ ಕೇಂದ್ರದಲ್ಲೂ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ಗೆ ಒಲವು ಇರುವ ಕಡೆ ಕಾಲ್ ಸೆಂಟರ್ ಸಂಸ್ಥೆಯನ್ನ ಹುಟ್ಟುಹಾಕಿ ಮೋಸ ಮಾಡಿದ್ದಾರೆಂದು ಸಚಿವ ಈಶ್ವರ್ ಖಂಡ್ರೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಳಂದ ಕ್ಷೇತ್ರದಲ್ಲಿ ಒಂದು ಮತದಾರನ ಚೀಟಿ ಅಕ್ರಮವಾಗಿ ರದ್ದುಪಡಿಸಲು ಅರ್ಜಿ ಸಲ್ಲಿಸಿದ್ದಕ್ಕೆ ೮೦ ರೂ. ಕೂಲಿ ನೀಡಿರುವ ವಿಚಾರವನ್ನು ಎಸ್ಐಟಿ ತನಿಖೆ ಬಯಲಿಗೆಳೆದಿರುವ ಕುರಿತು ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಎಂದೂ ಜನರ ಮತದಿಂದ, ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಬರೀ ಹಿಂಬಾಗಿಲಿನಿAದ ಅಧಿಕಾರಕ್ಕೆ ಬಂದಿದೆ. ಅಕ್ರಮ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದೆ. ಸ್ವಾಯತ್ತ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಂಡು ಅಧಿಕಾರಕ್ಕೆ ಬಂದಿದೆ. ಚುನಾವಣಾ ಆಯೋಗವನ್ನೇ ದುರುಪಯೋಗ ಮಾಡಿಕೊಂಡಿರೋದು ನಾವು ನೋಡ್ತಾ ಇದ್ದೀವಿ. ರಾಹುಲ್ ಗಾಂಧಿ ಮಾಡಿದ್ದ ಆರೋಪ ಸತ್ಯವಾದ ಆರೋಪ. ತನಿಖೆಯ ಸಂದರ್ಭದಲ್ಲಿ ಅದು ಸಾಬೀತು ಆಗ್ತಾ ಇದೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆಯನ್ನ ಬಿಜೆಪಿಯವರು ಅಲ್ಲಗಳೆಯುತ್ತಿದ್ದರು. ಕೆಲವು ಕಡೆ ಕಾಂಗ್ರೆಸ್ ಕಡೆ ಒಲವು ಇದೆ, ಅವರಿಗೆ ಹಣ ನೀಡಿ ಕಾಲ್ ಸೆಂಟರ್ ಮೂಲಕ ಸಂಸ್ಥೆಯನ್ನ ಹುಟ್ಟು ಹಾಕಿದ್ದಾರೆ. ಆಸೆ ತೋರಿಸಿ ಮೋಸ ಮಾಡಿದ್ದಾರೆ. ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾದದ್ದು. ಇದನ್ನ ತೀವ್ರವಾಗಿ ಖಂಡಿಸಬೇಕು. ಇದು ರಾಜ್ಯ ದೇಶದ್ಯಾಂತ ಚರ್ಚೆ ಆಗ್ತಾಇದೆ. ಕೇಂದ್ರದಲ್ಲೂ ಕೂಡ ಬಿಜೆಪಿ ಅಕ್ರಮದಿಂದಲೇ ಅಧಿಕಾರಕ್ಕೆ ಬಂದಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ತೊಲಗಬೇಕು ಅನ್ನೊದು ಎಲ್ಲರ ಮನಸ್ಸಿನಲ್ಲಿ ಇದೆ. ಹೀಗಾಗಿ ಇದು ತಾರ್ಕಿಕ ಅಂತ್ಯಕ್ಕೆ ಹೋಗಿ ಸಂವಿಧಾನ ಪ್ರಜಾಪ್ರಭುತ್ವ ಉಳಿಸಬೇಕು. ಮತದಾನದ ಹಕ್ಕು ಎಲ್ಲರಿಗೂ ಸಿಗಬೇಕು. ಇದನ್ನ ನಮ್ಮ ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದಿದ್ದಾರೆ. ಇನ್ನೂ ಮುಂದಿನ ನಾಯಕತ್ವ ವಿಚಾರ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ,ಏನ್ ಹೇಳಿದ್ದಾರೆ ಅಂತಾ ಮಾಹಿತಿ ಇಲ್ಲ. ಈಗಾಗಲೇ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ ಅನಿಸುತ್ತೆ ಎಂದು ತಿಳಿಸಿದ್ದಾರೆ.



