ಬೆಂಗಳೂರು: ಟೆಕ್ನೋಪಾಕ್ ವರದಿಯ ಪ್ರಕಾರ, ವರಮಾನ ಮತ್ತು ತೆರಿಗೆಯ ನಂತರದ ಲಾಭದ ದೃಷ್ಟಿಯಿಂದ ದಕ್ಷಿಣ ಭಾರತದಲ್ಲಿ ಜನಾಂಗೀಯ ಉಡುಪುಗಳ ಅದರಲ್ಲೂ ವಿಶೇಷವಾಗಿ ಸೀರೆಗಳ ರಿಟೇಲ್ ವಹಿವಾಟಿನ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಸಾಯಿ ಸಿಲ್ಕ್ಸ್(ಕಳಾಮಂದಿರ್) ಲಿಮಿಟೆಡ್ (ಸಾಯಿ ಸಿಲ್ಕ್ಸ್ ಅಥವಾ ಎಸ್ಎಸ್ ಕೆಎಲ್) ದೇಶದಲ್ಲಿನ ತನ್ನ 54ನೇ ಮಳಿಗೆ ಪ್ರಾರಂಭಿಸಿದೆ. ಈ ಮಳಿಗೆಯು ಬೆಂಗಳೂರಿನ ಮೂರನೇ `ಕಳಾಮಂದಿರ್’ ಮಳಿಗೆ ಆಗಿದೆ.
ಸಾಯಿ ಸಿಲ್ಕ್ಸ್‍ನ (ಕಳಾಮಂದಿರ್) ವ್ಯವಸ್ಥಾಪಕ ನಿರ್ದೇಶಕ ನಾಗಕನಕ ದುರ್ಗಾ ಪ್ರಸಾದ್ ಛಲವಾದಿ ಅವರು ಮಾತನಾಡಿ, ಬೆಂಗಳೂರಿನಲ್ಲಿ ನಮ್ಮ ಮೂರನೇ ಕಳಾಮಂದಿರ್ ಮಳಿಗೆ ಆರಂಭಿಸುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ನಮ್ಮ ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ಅನುಭವ ನೀಡುವ ನಮ್ಮ ಸಾಮರ್ಥ್ಯವನ್ನು ಇದು ತೋರುತ್ತದೆ. ಹೊಸ ಮಳಿಗೆಯು ನಮ್ಮ ಗ್ರಾಹಕರಿಗೆ ವಿವಿಧ ಶ್ರೇಣಿಯ ಸಮಕಾಲೀನ ಸೀರೆಗಳನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಖ್ಯಾತ ನಟ ಕಿಚ್ಚ ಸುದೀಪ್ ಅವರು ಹೊಸ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ ಅವರು, ಸಾಯಿ ಸಿಲ್ಕ್ಸ್‍ನ ಪರಿಣತಿ, ನವೀನ ವಿನ್ಯಾಸಗಳು ಜೀವನದ ಅಮೂಲ್ಯ ಕ್ಷಣಗಳನ್ನು ಆನಂದಿಸಲು ಸ್ಫೂರ್ತಿ ನೀಡುತ್ತವೆ. ಸಾಯಿ ಸಿಲ್ಕ್ಸ್‍ನ ಗುಣಮಟ್ಟ, ಗ್ರಾಹಕ ಸೇವೆ, ಉತ್ಪನ್ನ ಶ್ರೇಣಿಯು ಅನನ್ಯವಾಗಿದ್ದು, ಅದರ ಬ್ರ್ಯಾಂಡ್ ಗುರುತಿಸುವಿಕೆಯನ್ನು ಬಲಪಡಿಸುತ್ತದೆ ಮತ್ತು ಗ್ರಾಹಕರ ನಿಷ್ಠೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.
Leave a Review