![]() |
![]() |
![]() |
![]() |
![]() |
ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್ ಮೊದಲಿನಷ್ಟು ಉತ್ತಮ ಲಯದಲ್ಲಿ ಇಲ್ಲ. ಆದರೆ ಮೂರನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಅವರು ಚೀನಾದ ಹಾಂಗ್‍ಜೌನಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಶ್ರೀಕಾಂತ್ ಅವರಿಗೆ ಈ ವರ್ಷ ಫಲಪ್ರದವೇನೂ ಆಗಿಲ್ಲ. ವಿಶ್ವ ಕ್ರಮಾಂಕದಲ್ಲಿ 21ನೇ ಸ್ಥಾನಕ್ಕೆ ಇಳಿದಿದ್ದಾರೆ.
2014ರ ಇಂಚಿಯೋನ್ ಕ್ರೀಡೆಗಳಲ್ಲಿ ಪ್ರಿಕ್ವಾರ್ಟರ್‍ಫೈನಲ್ ತಲುಪಿದ್ದ ಅವರು, 2018ರ ಜಕಾರ್ತಾಕ್ರೀಡೆಗಳಲ್ಲಿ 32ರ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.ಪ್ರಮುಖ ಕ್ರೀಡಾಕೂಟಗಳಾದ ವಿಶ್ವ ಚಾಂಪಿಯನ್‍ಷಿಪ್ ಮತ್ತು ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಪದಕಗಳನ್ನು ಗೆದ್ದಿರುವ ಗುಂಟೂರಿನ ಆಟಗಾರ ಟ್ರಯಲ್ಸ್‍ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಈಗ ಈ ಅವಕಾಶದ ಸದುಪಯೋಗ ಪಡೆಯಲು 30 ವರ್ಷದ ಆಟಗಾರನಿಗೆ ಒಳ್ಳೆಯ ಅವಕಾಶ ಒದಗಿದೆ.
‘ಏಷ್ಯನ್ ಗೇಮ್ಸ್ ನನ್ನ ಪಾಲಿಗೆ ಅವಿಸ್ಮರಣೀಯ ವಾಗಿಲ್ಲ. ಕಳೆದ ಎರಡು ಕ್ರೀಡೆಗಳಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಬಂದಿಲ್ಲ. ಹೀಗಾಗಿ ಇಲ್ಲಿ ಉತ್ತಮ ಆಟವಾಡಿದರೆ ಅದು ನನ್ನ ಪಾಲಿಗೆ ಸ್ಮರಣೀಯ ವಾಗಲಿದೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
![]() |
![]() |
![]() |
![]() |
![]() |
Leave a Review