This is the title of the web page
This is the title of the web page

ಮಾದಕವಸ್ತು ಸಾಗಣೆ: ಶಂಕಿತ ಪಾಕ್ ವ್ಯಕ್ತಿಗಳ ಹತ್ಯೆ

ನವದೆಹಲಿ: ಮಾದಕ ವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಶಂಕಿತ ಪಾಕಿಸ್ತಾನಿ ವ್ಯಕ್ತಿಗಳನ್ನು ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.

ಸೋಮವಾರ ರಾತ್ರಿ ಬಾರ್ಮರ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಹತ್ಯೆ ನಂತರ ಸುಮಾರು 3 ಕೆಜಿ ಶಂಕಿತ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.