ಬೆಂಗಳೂರು: ಇತ್ತೀಚೆಗೆ ಬೆಂಗಳೂರು ರಸ್ತೆಗುಂಡಿಗಳ ಕುರಿತು ಪ್ರಶ್ನೆಗಳನ್ನೆತ್ತಿ ಸುದ್ದಿಯಾಗಿದ್ದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಇದೀಗ ನಮ್ಮ ಮೆಟ್ರೋ ನಿಲ್ದಾಣಗಳ ಹೊರಗಿನ ಗಲೀಜಿನ ಕುರಿತು ಮಾತನಾಡಿದ್ದಾರೆ. ಮಲ್ಲೇಶ್ವರದ ಮೆಟ್ರೋ ನಿಲ್ದಾಣದ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು ನಮ್ಮ ಮೆಟ್ರೋ ನಿಲ್ದಾಣಗಳ ಹೊರಗೆ ಗುಟ್ಕಾ ಉಗಿಯುವವರ ಸಂಖ್ಯೆ ಹೆಚ್ಚಾಗಿದೆ, ಇಂಥವರಿಗೆ ಭಾರಿ ದಂಡ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮೆಟ್ರೋ ಹೊರಗೆ ಪ್ರಯಾಣಿಕರಿಗಾಗಿ ಕಾಯುತ್ತಿರುವ ಆಟೋ ಚಾಲಕರು ಈ ಕೆಲಸ ಮಾಡಿದ್ದಾರೆ ಎಂದು ಕಿರಣ್ ದೂರಿದ್ದಾರೆ. ನೆಟ್ಟಿಗರು ಈ ವಿಚಾರವಾಗಿ ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಇದು ಒಂದು ಮೆಟ್ರೋ ನಿಲ್ದಾಣದ ವಿಚಾರದ ಬಗ್ಗೆ ಅಲ್ಲ ಬದಲಾಗಿ ಅಭ್ಯಾಸದ ಬಗ್ಗೆ, ಹಲವಾರು ಆಟೋ ಸಂಘಗಳಿವೆ, ಆದರೆ ನೈರ್ಮಲ್ಯದ ಬಗ್ಗೆ ಸದಸ್ಯರಿಗೆ ಶಿಕ್ಷಣ ನೀಡಲು ಯಾವುದೇ ಪ್ರಯತ್ನ ನಡೆದಿಲ್ಲ. ನಾನು ಸಾಕಷ್ಟು ಬಾರಿ ನೋಡಿದ್ದೇನೆ, ಮೆಟ್ರೋ ನಿಲ್ದಾಣಗಳ ಬಳಿ ಮಾತ್ರವಲ್ಲದೆ ರಸ್ತೆಗಳಲ್ಲಿಯೂ ಇದೇ ರೀತಿ ಇದೆ. ಬಿಎಂಆರ್ಸಿಎಲ್ ತಮ್ಮ ನಿಲ್ದಾಣಗಳ ಬಳಿ ಆ ವ್ಯಾಪ್ತಿಯಲ್ಲಿರುವ ಪ್ರದೇಶಗಳು ತನ್ನದು, ಹಾರ್ನ್ ಮಾಡಬೇಡಿ ಎಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದಿದೆ. ಆದರೆ ಸ್ವಚ್ಛವಾಗಿಡಲು ವಿಫಲವಾಗಿದೆ.
ಯಶವಂತಪುರ ನಿಲ್ದಾಣದ ಅಡಿಯಲ್ಲಿ ಹರಿಯುವ ನೀರು, ಮಲ್ಲೇಶ್ವರಂ ನಿಲ್ದಾಣದ ಸುತ್ತಲೂ ಕೊಳಕು, ಸೋಪ್ ಕಾರ್ಖಾನೆಯಲ್ಲಿ ತುಂಬಿ ಹರಿಯುವ ಬಿನ್ಗಳು, ಕೊಳಕು ಮತ್ತು ನಮ್ಮ ಮೆಟ್ರೋ ಸಮಾನಾರ್ಥಕ ಪದಗಳಾಗಿವೆ. ಒಳಗೆ ಸ್ವಚ್ಛತೆ, ಹೊರಗೆ ಕೊಳಕು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.



