ಶಿಡ್ಲಘಟ್ಟ: ಬ್ರಿಟಿಷರ ವಿರುದ್ಧ ಹೋರಾಡಿ, ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟಿಷರ ಕಾನೂನು ವಿರುದ್ಧ ಸುಮಾರು ಸಾರಿದ ವೀರರಾಣಿ ಕಿತ್ತೂರು ಚೆನ್ನಮ್ಮ ದೇಶಾಭಿಮಾನ ಆರರ್ಶವಾದುದು. ಮಹಿಳಾಶಕ್ತಿ ಸಂಪನ್ನತೆ ಮತ್ತು ಮಹತ್ವವನ್ನು ಜಗತ್ತಿಗೇ ಸಾರಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ. ಅವರು ದೇಶಾಭಿಮಾನ, ಕೆಚ್ಚು, ಹೋರಾಟ ಎಲ್ಲರಿಗೂ ಆದರ್ಶಪ್ರಾಯ ಎಂದು ಕುಮಾರಿ ಎಸ್ಎಂ ರಿಷಿತ ಅಭಿಪ್ರಾಯಪಟ್ಟಿರು. ಅವರು ನಿನ್ನೆ ರಾಷ್ಟೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಆರಂಭದಲ್ಲಿ ತಾಲೂಕು ತಹಸೀಲ್ದಾರ್ ಕುಮಾರಿ ಗಗನ ಸಿಂಧು ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವ ಕಾರ್ಯಕ್ರಮವನ್ನು ನಡೆಸಿಕೊಡಬೇಕಿದ್ದು, ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಮಿತಿ ಸಭೆಯನ್ನು ಏಕಕಾಲಕ್ಕೆ ಕರೆದಿದ್ದರಿಂದ ಸಭೆಯಲ್ಲಿ ಗೊಂದಲ ಉಂಟಾಯಿತು. ಕಿತ್ತೂರು ರಾಣಿ ಚೆನ್ನಮ್ಮ ಜಯಂತೋತ್ಸವಕ್ಕೆ ಆಗಮಿಸಿದ್ದ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಬಿ.ಜಿ .ಗಣೇಶ್, ಜಿಲ್ಲಾ ಸಫಾಯಿ ಕರ್ಮಚಾರಿ ಪುನರ್ವಸತಿ ಸಮಿತಿ ಸದಸ್ಯ ಸಿ.ವಿ. ಲಕ್ಷ್ಮಣರಾಜು, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್ ಸೂಕ್ತ ಮಾಹಿತಿ ತಿಳಿಸದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಬಳಿ ವಿವರ ಪಡೆಯುತ್ತಿದ್ದರು. ಇದೇ ಸಮಯಕ್ಕೆ ಬಸವೇಶ್ವರ ಸೇವಾ ಸಮಿತಿ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಚಂದ್ರಶೇಖರ ಬಾಬು ಆಗಮಿಸಿದರು.
ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಮಿತಿ ಸಭೆಯಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರು ತಾಲೂಕು ಆಡಳಿತ ವೇದಿಕೆ ಕಾರ್ಯಕ್ರಮ ನಡೆಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದರು. ಈ ಬಗ್ಗೆ ತಹಸೀಲ್ದಾರ್ ಗಗನ ಸಿಂಧು ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟಿಸಲಿಲ್ಲ. ಸಭೆಯಿಂದ ನಿರ್ಗಮಿಸಿದರು. ಇದೇ ಸಂದರ್ಭದಲ್ಲಿ ಉಪತಹಸಿಲ್ದಾರ್ ಪತ್ರಕರ್ತರನ್ನು ಫೋಟೋ ಹಿಡಿಯದಂತೆ ತಡೆದಿದ್ದಾರೆ. ಹಿರಿಯರು ಹಾಗೂ ವಾಸವಿ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ರೂಪ ಸಿ
ರಮೇಶ್ ಸಭೆಯಿಂದ ಹೊರ ನಡೆದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವಾಗ ಚಂದ್ರಶೇಖರ ಬಾಬು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಸಭೆಯನ್ನು
ಯಶಸ್ವಿ ಮಾಡೋಣ ಎಂದು ಹೇಳಿ ಎಲ್ಲರನ್ನು ಸಮಾಧಾನಪಡಿಸಿದರು.
ಸಭೆಯಲ್ಲಿ ಉನ್ನತ ವ್ಯಾಸಂಗ ಮಾಡಿ ಪ್ರತಿಭಾವಂತ ವಿದ್ಯಾರ್ಥಿಗಳಾದ ಬಿಎಸ್ ಶ್ರಾವಣಿ, ಬಿ.ಜಿ. ಆಪೇಕ್ಷಾ, ಸಿಂಚನ, ಇತ್ಯಶ್ರೀ, ಚೈತನ್ಯ ರಿಷಿತ, ವಿನುತಾ ಎಂ, ವೆನ್ನಲಾ, ಎಸ್ ಭ್ರಹ್ಮಿಣಿ, ದೀಪ್ತಿ, ಹರ್ಷಿತ, ದಿವ್ಯಾ, ಬಿ.ಜಿ. ನಂದಿನಿ, ಮುAತಾದವರನ್ನು ಸನ್ಮಾನಿಸಲಾಯಿತು.



