ಬ್ಲೋಮ್ಫಾಂಟೀನ್: ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಲೀಗ್ ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿರುವ ಹಾಲಿ ಚಾಂಪಿಯನ್ ಭಾರತ, ಮಂಗಳವಾರ ಮೊದಲ ಸೂಪರ್ ಸಿಕ್ಸ್ ಪಂದ್ಯವಾಡಲಿದೆ. ಎದುರಾಳಿ ನ್ಯೂಜಿಲ್ಯಾಂಡ್.
`ಎ’ ವಿಭಾಗದ ಲೀಡರ್ ಎನಿಸಿರುವ ಉದಯ್ ಸಹಾರಣ್ ಪಡೆ ತನ್ನ ನೆಚ್ಚಿನ ತಾಣವಾದ ಬ್ಲೋಮ್ಫಾಂಟೀನ್ನಲ್ಲಿ ಈ ಪಂದ್ಯವನ್ನು ಆಡಲಿದೆ.ಮೂರೂ ಲೀಗ್ ಪಂದ್ಯಗಳನ್ನು ಭಾರತ ಇಲ್ಲೇ ಆಡಿತ್ತು. ಆದರೆ ನ್ಯೂಜಿಲ್ಯಾಂಡ್ ಈಸ್ಟ್ ಲಂಡನ್ನಿಂದ ನೂತನ ತಾಣಕ್ಕೆ ಆಗಮಿಸಿದೆ.