ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯ
ಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್? ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2026 ರ 12ನೇ
ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊAದು ಅಂಕ ಸಿಕ್ಕಿದೆ. ಇದರಿಂದ ಕೆಕೆಆರ್ಗೆ ಲಾಭವಾದರೆ, ಪಂಜಾಬ್ ತಂಡ ಬೇಸರದಿಂದ ಮೈದಾನ ತೊರೆದಿದೆ. ಏಕೆಂದರೆ ಕೆಕೆಆರ್ ತಂಡ ಆಡಿದ ಮೊದಲ ಎರಡು ಪಂದ್ಯಗಳನ್ನು ಸೋತಿತ್ತು. ಇದರಿಂದ ತಂಡ ಯಾವುದೇ ಅಂಕಗಳನ್ನು ಹೊಂದಿರಲಿಲ್ಲ. ಆದರೆ ಈ ಪಂದ್ಯ ರದ್ದಾದ ಕಾರಣ ಕೆಕೆಆರ್ಗೆ 1 ಅಂಕ ಸಿಕ್ಕಿದೆ. ಇತ್ತ ಪಂಜಾಬ್ ಮೊದಲ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳನ್ನು ಹೊಂದಿತ್ತು. ಇದೀಗ ಈ ಪಂದ್ಯವನ್ನು ಗೆದ್ದು 6 ಅಂಕಗಳನ್ನು ಪಡೆಯುವ ಅವಕಾಶ ಹೊಂದಿತ್ತು. ಆದರೆ ಅದಕ್ಕೆ ಮಳೆರಾಯ ಅವಕಾಶ ಮಾಡಿಕೊಡಲಿಲ್ಲ. ಆದಾಗ್ಯೂ ಪಂಜಾಬ್ 5 ಅಂಕಗಳೊAದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಇಬ್ಬರು ಪ್ರಮುಖ ಬ್ಯಾಟರ್?ಗಳಾದ ಫಿನ್ ಅಲೆನ್ ಹಾಗೂ ಕ್ಯಾಮರೂನ್ ಗ್ರೀನ್ ಬಹುಬೇಗನೇ ವಿಕೆಟ್ ಒಪ್ಪಿಸಿದರು. ಇದರಿಂದ ಈ ಪಂದ್ಯದಲ್ಲೂ ಕೆಕೆಆರ್ ಸೋಲು ಖಚಿತ ಎಂದು ತೋರುತ್ತಿತ್ತು. ಆದರೆ ಕೆಕೆಆರ್ ಇನ್ನಿಂಗ್ಸ್ನ 4ನೇ ಓವರ್ ನಡೆಯುತ್ತಿದ್ದಾಗ ಮಳೆ ಸುರಿಯಲಾರಂಬಿಸಿತು. ಇದರಿಂದ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
ತಲಾ ಐದು ಓವರ್ಗಳ ಪಂದ್ಯವನ್ನು ನಡೆಸಲು ಕಟ್ಆಫ್ ಸಮಯ ರಾತ್ರಿ 11:14 ಆಗಿದ್ದ ಕಾರಣ ಅಂಪೈರ್ಗಳು ಅಲ್ಲಿಯವರೆಗೆ ಕಾದರು. ಅಷ್ಟರಲ್ಲಿ ಮಳೆ ಕೂಡ ನಿಂತಿತು. ಆದರೆ ಕವರ್ಗಳನ್ನು ತೆಗೆದುಹಾಕಿದಾಗ, ಮೈದಾನವು ತುಂಬಾ ತೇವವಾಗಿತ್ತು, ಬೌಂಡರಿಯ ಬಳಿ ನೀರು ಸಂಗ್ರಹವಾಗಿತ್ತು. ನಿಗದಿತ ಸಮಯದೊಳಗೆ ಮೈದಾನವನ್ನು ಸಿದ್ಧಪಡಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅಂಪೈರ್ಗಳು ಮೈದಾನವನ್ನು ಪರಿಶೀಲಿಸಿದ ನಂತರ, ಎರಡೂ ನಾಯಕರೊಂದಿಗೆ ಚರ್ಚಿಸಿ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದರು. ಹೀಗಾಗಿ ಕೆಕೆಆರ್ ಮತ್ತು ಪಂಜಾಬ್ಗೆ ತಲಾ ಒಂದು ಪಾಯಿಂಟ್ ನೀಡಲಾಯಿತು.
ಮಳೆಯಿಂದ ಕೆಕೆಆರ್- ಪಂಜಾಬ್ ಪಂದ್ಯ ರದ್ದು



