ಕೆಎಲ್ ರಾಹುಲ್ ಅವರ ಅತ್ಯಮೋಘ ಅಜೇಯ ಶತಕ ಮತ್ತು ಸಾಯಿ ಸುದರ್ಶನ್ ಅವರ ಮನಮೋಹಕ ಶತಕಗಳ ನೆರವಿನಿಂದ ಆಸ್ಟೆçÃಲಿಯಾ ಎ ತಂಡವನ್ನು ೫ ವಿಕೆಟ್ ಗಳಿಂದ ಸೋಲಿಸಿರುವ ಭಾರತ ಎ ತಂಡ ಹೊಸ ವಿಶ್ವದಾಖಲೆ ನಿರ್ಮಿಸಿದೆ. ಆಸ್ಟೆçÃಲಿಯಾ ಎ ತಂಡ ನೀಡಿದ್ದ ೪೧೨ ರನ್ ಗಳನ್ನು ಲೀಲಾಜಾಲವಾಗಿ ಚೇಸ್ ಮಾಡಿದ ಭಾರತ ಎ ತಂಡ ಎರಡ ಪಂದ್ಯಗಳ ಅನಧಿಕೃತ ಟೆಸ್ಟ್ ಸರಣಿಯನ್ನು ೧-೦ ಅಂತರದಿAದ ಜಯಿಸಿತು. ಕ್ರಿಕೆಟ್ ಇತಿಹಾಸದಲ್ಲೇ ಎ ತಂಡವೊAದು ಬೆನ್ನತ್ತಿ ಜಯಗಳಿಸಿದ ಅತಿ ದೊಡ್ಡ ಮೊತ್ತವಿದು.
ಲಖನೌನ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲನೇ ಅನಧಿಕೃತ ಟೆಸ್ಟ್ ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತ್ತು. ಇದೀಗ ಇದೇ ಮೈದಾನದಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಸ್ಟೆçÃಲಿಯಾ ಎ ತಂಡವನ್ನು ಸೋಲಿಸುವ
ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತು. ಎರಡನೇ ಅನಧಿಕೃತ ಟೆಸ್ಟ್ ನಿಂದ ಶ್ರೇಯಸ್ ಅಯ್ಯರ್ ಹೊರನಡೆದಿದ್ದರಿಂದ ಧ್ರುವ್ ಜ್ಯುರೆಲ್ ನಾಯಕತ್ವ ವಹಿಸಿದ್ದರು.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಆಸ್ಟೆçÃಲಿಯಾವನ್ನು ಬ್ಯಾಟಿಂಗ್ ಗೆ ಇಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟೆçÃಲಿಯಾ ತಂಡ ನೇಥನ್ ಮೆಕ್ ಸ್ವೀನಿ(೭೪) ಮತ್ತು ಜಾಕ್ ಎಢ್ವರ್ಡ್್ಸ(೮೮) ಅವರ ಅರ್ಧಶತಕಗಳ ನೆರವಿನಿಂದ ೪೨೦ ರನ್ ಗಳ ಮೊತ್ತ ಕಲೆ ಹಾಕಿತು. ಮಾನವ್ ಸುಥರ್ ೫ ವಿಕೆಟ್ ಮತ್ತು ಗುರ್ನೂರ್ ಬ್ರಾರ್ ೩ ವಿಕೆಟ್ ಗಳಿಸಿದರು. ಇದಕ್ಕೆ ಉತ್ತರವಾಗಿ ಭಾರಕ ತಂಡ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಕೇವಲ ೧೯೪ ರನ್ ಗಳಿಗೆ ಆಲೌಟ್ ಆಗಿತ್ತು. ಸಾಯಿ ಸುದರ್ಶನ್ ಅವರು ೭೫ ರನ್ ಗಳಿಸಿದ್ದು ಬಿಟ್ಟರೆ ಬೇರಾವ ಬ್ಯಾಟರ್ ಕೂಡ ನೆಲಕಚ್ಚಿ ಆಡಲಿಲ್ಲ. ಈ ವೇಳೆ ಪ್ರಸಿದ್ಧ ಕೃಷ್ಣ ಅವರು ಗಾಯಾಳುವಾಗಿ
ನಿವೃತ್ತಿಯಾಗಿದ್ದರು. ಆಸೀಸ್ ಪರ ಹೆನ್ರಿ ಥಾಮ್ಸಂನ್ ೪ ವಿಕೆಟ್ ಮತ್ತು ಟಾಡ್ ಮರ್ಫಿ ೨ ವಿಕೆಟ್ ಗಳಿಸಿದರು.
ಆಸ್ಟೆçÃಲಿಯಾ ತಂಡ ೩ನೇ ಇನ್ನಿಂಗ್ಸ್ ನಲ್ಲಿ ೧೮೫ ರನ್ ಗಳಿಗೆ ಆಲೌಟ್ ಆಯಿತು. ವಿಕೆಟ್ ಕೀಪರ್ ಬ್ಯಾಟರ್ ಜೋಶ್ ಫಿಲಿಪ್ ಮಾತ್ರ ೫೦ ರನ್ ಗಳಿಸಿದರು. ಭಾರತದ ಗುರ್ನೂರ್ ಬ್ರಾರ್ ಮತ್ತು ಮಾನವ್ ಸೂಥರ್ ತಲಾ ೩ ವಿಕೆಟ್ ಗಳಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಯಶ್ ಠಾಕೂರು ತಲಾ ೨ ವಿಕೆಟ್ ಕಬಳಿಸಿದರು.
ಕೆಎಲ್ ರಾಹುಲ್- ಸಾಯಿ ಸುದರ್ಶನ್ ಆರ್ಭಟ ಗೆಲ್ಲಲು ೪೧೨ ರನ್ ಗಳ ಗುರಿ ಪಡೆದಿದ್ದ ಭಾರತಕ್ಕೆ ಎನ್ ಜಗದೀಶನ್ ಮತ್ತು ಕೆಎಲ್ ರಾಹುಲ್ ಅವರು ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್ ಗೆ ೮೫ ರನ್ ಗಳ ಜೊತೆಯಾಟವಾಡಿದರು. ೩೬ ರನ್ ಗಳಿಸಿದ ಜಗದೀಶನ್ ಅವರು ಮುರ್ಫೆ ಬೌಲಿಂಗ್ ನಲ್ಲಿ ಪೀಕ್ ಗೆ ಕ್ಯಾಚಿತ್ತು ಔಟಾದ ಬಳಿಕ ಕೆಎಲ್ ರಾಹುಲ್ ಮತ್ತು ಸಾಯಿ ಸುದರ್ಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು.