ಕೆಎಲ್ ರಾಹುಲ್ ಅವರ ತಾಳ್ಮೆಯ ಅರ್ಧಶತಕಕದೊಂದಿಗೆ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು ದ್ವಿತೀಯ ಟೆಸ್ಟ್ ನಲ್ಲಿ ೭ ವಿಕೆಟ್ ಗಳಿಂದ ಜಯ ಗಳಿಸಿದ
ಆತಿಥೇಯ ಭಾರತ ಸರಣಿಯನ್ನು ೨-೦ ಅಂತರದಿAದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಪAದ್ಯದ ಅಂತಿಮ ದಿನವಾದ ಮಂಗಳವಾರ ಗೆಲ್ಲಲು ೯ ವಿಕೆಟ್ ಗಳಿಂದ ೫೮ ರನ್ ಗಳಿಸಬೇಕಿದ್ದ ಭಾರತ ಮತ್ತೆರಡು ವಿಕೆಟ್ ಗಳನ್ನು ಕಳೆದುಕೊಂಡು ಈ ಗುರಿ ತಲುಪಿತು.
ಭಾರತದ ಪರ ಕೆಎಲ್ ರಾಹುಲ್ ಒಂದು ತುದಿಯಲ್ಲಿ ಗಟ್ಟಿಯಾಗಿ ನೆಲೆಯೂರಿ ತಂಡವನ್ನು ವಿಜಯದ ದಡ ತಲುಪಿಸಿದರು. ೧೦೮ ಎಸೆತಗಳನ್ನು ಎದುರಿಸಿದ
ಅವರು ೬ ಬೌಂಡರಿ ಮತ್ತು ೨ ಸಿಕ್ಸರ್ ಗಳನ್ನು ಒಳಗೊಂಡ ೫೮ ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ನಾಯಕ ರೋಸ್ಟನ್ ಚೇಸ್ ಅವರು ಒಂದು ವಿಕೆಟ್ ಉರುಳಿಸಿದರು. ಒಟ್ಟಾರೆ ಪಂದ್ಯದಲ್ಲಿ ೮ ವಿಕೆಟ್ ಉರುಳಿಸಿದ ಭಾರತದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ದಿಲ್ಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಪ್ರಥಮ ಇನ್ನಿಂಗ್ಸ್ ನಲ್ಲಿ ೫ ವಿಕೆಟ್ ಕಳೆದುಕೊಂಡು ೫೧೮ ರನ್
ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಇದಕ್ಕುತ್ತರವಾಗಿ ವಿಂಡೀಸ್ ಪ್ರಥಮ ಇನ್ನಿಂಗ್ಸ್ ನಲ್ಲಿ ಕೇವಲ ೨೪೮ ರನ್ ಗಳನ್ನಷನ್ನೇ ಗಳಿಸಲು ಸಾಧ್ಯವಾಯಿತು.
೨೭೦ ರನ್ ಗಳ ಪ್ರಥಮ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದ ನಾಯಕ ಶುಭಮನ್ ಗಿಲ್ ಅವರು ವಿಂಡೀಸ್ ಗೆ ಫಾಲೋ ಆನ್ ಹೇರಿದರು.
ವಿಂಡೀಸ್ ತAಡ ದ್ವಿತೀಯ ಇನ್ನಿಂಗ್ಸ್ ನಲ್ಲಿ ಪ್ರತಿಹೋರಾಟ ನೀಡಿ ೩೯೦ ರನ್ ಗಳಿಸಿತಾದರೂ ಜಯದ ಗುರಿ ಕೇವಲ ೧೨೦ ರನ್ ಗಳಾಗಿದ್ದರಿಂದ ಭಾರತಕ್ಕೆ ಇದು ದೊಡ್ಡ ವಿಚಾರ ಎನ್ನಿಸಲಿಲ್ಲ. ಪಂದ್ಯವನ್ನು ೪ನೇ ದಿನದೊಳಗೇ ಮುಗಿಸುವ ಇರಾದೆಯಿಂದ ಕಣಕ್ಕಿಳಿದ ಭಾರತ ಯಶಸ್ವಿ ಜೈಸ್ವಾಲ್ (೮) ಅವರ ವಿಕೆಟ್ ಪತನದೊಂದಿಗೆ ಆಯೋಜನೆಯನ್ನು ಕೈಬಿಟ್ಟಿತು. ೪ನೇ ದಿನಾಂತ್ಯಕ್ಕೆ ೧೮ ಓವರ್ ಗಳಲ್ಲಿ ಒಂದು ವಿಕೆಟ್ ಗೆ ೬೩ ರನ್ ಗಳಿಸಿದ್ದ ಭಾರತ ತಂಡ ೫ನೇ ದಿನ ಮೊದಲ ಅವಧಿಯಲ್ಲಿ ೧೩ ಓವರ್ ಗಳಲ್ಲಿ ಗೆಲುವಿಗೆ ಅಗತ್ಯವಿದ್ದ ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಕೆಎಲ್ ರಾಹುಲ್ ಅವರಿಗೆ ಉತ್ತಮ ಸಾಥ್ ನೀಡಿದ್ದ ಸಾಯಿ ಸುದರ್ಶನ್ ಅವರು ವಿಂಡೀಸ್ ನಾಯಕ ಚೇಸ್ ಅವರ ಬೌಲಿಂಗ್ ನಲ್ಲಿ ಹೋಪ್ ಅವರಿಗೆ ಕ್ಯಾಚ್
ನೀಡಿದರು. ಔಟಾಗುವ ಮೊದಲು ಅವರು ೭೬ ಎಸೆತಗಳಲ್ಲಿ ೩೯ ರನ್ ಗಳಿಸಿದ್ದರು. ಓವರು ಔಟಾದ ಬಳಿಕ ನಾಯಕ ಶುಭಮನ್ ಗಿಲ್(೧೩) ಅವರು ಅನಗತ್ಯ ಹೊಡೆತಕ್ಕೆ ಹೋಗಿ ವಿಕೆಟ್ ಕೈಚೆಲ್ಲಿದರು.