ಮಧುಗಿರಿ: ಆಕಸ್ಮಿಕ ಹುಟ್ಟಿನ ಮತ್ತು ನಿಶ್ಚಿತ ಸಾವಿನ ನಡುವೆ ಸಮಾಜ ಮುಖಿಯಾಗಿ ಬದುಕಿ ಎಂದು ಸಚಿವ ಕೆ ಎನ್ ರಾಜಣ್ಣ ಕರೆ ನೀಡಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲ ಪ್ರೊ . ಡಿ.ಎಸ್ ಮುನೀಂದ್ರ ಕುಮಾರ್ ರವರ “ಮಲ್ಲಿಗೆ ಮನಕೆ ಅಕ್ಷರ ಬಾಗಿನ “ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡುತ್ತಾ- ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವ ಮುನೀಂದ್ರ ಕುಮಾರ್ ರವರ ಗ್ರಂಥದ ಶೀರ್ಷಿಕೆ ಅರ್ಥ ಪೂರ್ಣವಾಗಿದೆ ಎಂದರು.
ಅಕಾಲಿಕ ನಿಧನ ಹೊಂದಿದ ತಮ್ಮ ಮಗನ ಹೆಸರಿನಲ್ಲಿ 1 ಲಕ್ಷ ಠೇವಣಿ ಇರಿಸಿ ಪ್ರತಿ ವರ್ಷ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕರಿಸುತ್ತಿರುವ ಮುನೀಂದ್ರ ಕುಮಾರ್ ಅವರ ಕಾರ್ಯ ಅಭಿನಂದನೀಯ ಎಂದರು.ಎಲ್ಲರೂ ಅಧ್ಯಯನಶೀಲರಾಗಬೇಕು, ಹೆತ್ತವರು ಮಕ್ಕಳಿಗೆ ಜೀವ ನೀಡಿದರೆ ಗುರುಗಳು ಜೀವನ ನೀಡುತ್ತಾರೆ ಎಂದರು. ಸಾಮಾನ್ಯ ಜ್ಞಾನ ಮಾನವನಿಗೆ ಮುಖ್ಯ, ಸಾಮಾನ್ಯ ಜ್ಞಾನ ಹೊಂದಿದ್ಜ ಸರ್ವಜ್ಞ ಮಹತ್ತರವಾದ ತ್ರಿಪದಿಗಳನ್ನು ರಚಿಸಿದ್ದರು ಎಂದರು.
ಪಾವಗಡ ತಾಲೂಕು ನಿಡಗಲ್ಲಿನ ಸಂಸ್ಥಾನದ ಮಹರ್ಷಿ ವಾಲ್ಮೀಕಿ ಅಶ್ರಮದ ಪೀಠಾಧ್ಯಕ್ಷ ಶ್ರೀ ಸಂಜಯಕುಮಾರಸ್ವಾಮೀಜಿ, ವಿವಿಧ ಕಾಲೇಜಿನ ಪ್ರಾಂಶುಪಾಲರುಗಳಾದ ಡಾ.ಕರಿಯಪ್ಪ ಮಾಳಗಿ, ಬಸವರಾಜು, ಉಪನ್ಯಾಸಕ ಮಹಾಲಿಂಗೇಶ್, ಪ್ರೊಫೆಸರ್ ಮ.ಲ.ನ ಮೂರ್ತಿ ಇತರರು ಉಪಸ್ಥಿತರಿದರು.