ನಾವು ಪ್ರಾಮಾಣಿಕತೆಯಿಂದ ಸಂಪಾದನೆ ಮಾಡಿ, ಸಾಮಾಜಿಕಸೇವೆ ಸಲ್ಲಿಸಿದರೆ ದೇವರು ಮೆಚ್ಚುವಂತೆ ಆಗುತ್ತೆ, ಸೇವೆಯಿಂದ ನಮ್ಮ ಆತ್ಮತೃಪ್ತಿಯ ಜೊತೆಗೆ ಸಂತೋಷ – ಆರೋಗ್ಯ ಲಭಿಸುತ್ತದೆ ಎಂದು, ಸತ್ಯನಾರಾಯಣ ಛಾರಿಟೇಬಲ್ ಟ್ರಸ್ಟ್ ವತಿಯಿಂದ ಬಲಿಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರೋತ್ಸಾಹ ಧನ ನೀಡುತ್ತ ಟ್ರಸ್ಟಿನ ಅಧ್ಯಕ್ಷ ಟಿ.ವೇಣುಗೋಪಾಲ್ ರವರು ಇದೊಂದು ಸುಂದರ ಸಮಾರಂಭ ಎಂದು ನುಡಿದರು.
ಬಡ ವಿದ್ಯಾರ್ಥಿ ಎಂದೂ ನಾವು ಭಾವಿಸಬಾರದು, ಅವರ ವಿದ್ಯೆಯ ಶ್ರೀಮಂತಿಕೆ ವಿದ್ಯೆಯಿಂದ ಪ್ರಪಂಚದಲ್ಲಿ ಎಲ್ಲಿ ಬೇಕಾದರು ಹಣ-ಹೆಸರು ಗಳಿಸುವ ಶಕ್ತಿ, ಈ ವಿದ್ಯಾರ್ಥಿಗಳಿಗಿದೆ, ಶ್ರಮಪಟ್ಟು ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಎಂದೆಂದು ನೀವು ಶ್ರೀಮಂತರೆಂದು ಅಭಿನಂದಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ನೀಡಿ ಪೋಷಕರಿಗೆ ಸೌಭಾಗ್ಯವತಿವೇಣುಗೋಪಾಲ್ ರವರು ಮಾಲಾರ್ಪಣೆ ಮಾಡಿ ಶುಭಹಾರೈಸಿದರು.
ಬಲಿಜ ಪ್ರತಿಭಾವಂತ ವಿದ್ಯಾರ್ಥಿಗಳು ಹೆತ್ತ ಪೋಷಕರ ಬಗ್ಗೆ ಹಾಗೂ ದೇಶ ಮುನ್ನಡೆಸುವ ಶಕ್ತಿ ನಿಮ್ಮದಾಗಲಿ ಎಂದು ಹಂಸರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರುಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ ಹಾಗೂ ಎಂ.ಬಿ.ಬಿ.ಎಸ್ ನಲ್ಲಿ ಇಂದು ಕರ್ನಾಟಕದಲ್ಲಿ ಹೆಚ್ಚಿನ ಅಂಕ ಗಳಿಸಲು ಸಂಸದ ಪಿ.ಸಿ.ಮೋಹನ್ ಹಾಗು ನಮ್ಮೆಲ್ಲರ ಬೇಡಿಕೆಯಿಂದಾಗಿ 2011ರಲ್ಲಿ ಬಿಜೆಪಿ ಸರ್ಕಾರ 2ಂ ಮೀಸಲಾತಿಯಿಂದ ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಸಹಕಾರಿಯಾಯಿತು,
ಇಂದು ನಾವೆಲ್ಲರು ಈ ವಿಚಾರದಲ್ಲಿ ಬಿಜೆಪಿ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಬೇಕೆಂದು ಟಿ.ವೇಣುಗೋಪಾಲ್ ರವರು ಸಮಾರಂಭದಲ್ಲಿ ತಿಳಿಸಿದರು,ಈ ಮೀಸಲಾತಿ ಪಡೆಯಲು ನೀವು ಮುಖ್ಯ ಕಾರಣಕರ್ತರೆಂದು ಸಭಿಕರೆಲ್ಲರು ವೇಣುಗೋಪಾಲ್ ರವರಿಗೆ ಚಪ್ಪಾಳೆ ಮೂಲಕ ಅಭಿನಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಉತ್ತುಂಗ ಬ್ಯಾಂಕಿನ ಸಿ.ಇ.ಓ ರಾಜಶೇಖರ್ ನೆರವೇರಿಸಿದರು, ಸಮಾರಂಭದಲ್ಲಿ ಡಾ. ಶ್ವೇತ, ಬಿಂದು, ಕೀರ್ತಿಮಹಾರಾಜ್, ಸುಬ್ಬರಾಮ ಸೇರಿದಂತೆ ಅನೇಕರಿದ್ದರು.
ಚಿತ್ರ: ಜಿ.ಎಲ್.ಸಂಪಂಗಿ ರಾಮುಲು