ಬೆಂಗಳೂರು: ಇತ್ತೀಚೆಗೆ ಬೆಂಗಳೂರು ಮಹಾನಗರದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಕೋಗಿಲು ನಿವಾಸಿಗಳ ಒತ್ತುವರಿ ತೆರವು ಪಡಿಸಿದ ಜಾಗದ ಬದಲಿಗೆ ಪುನರ್ ವಸತಿ ಕಲ್ಪಿಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟಾಗುತ್ತದೆ ಎನ್ನಲಾಗಿದೆ.
ಕೋಗಿಲು ಬಡಾವಣೆಯಲ್ಲಿದ್ದ ನಿವಾಸಿಗಳನ್ನು ಖಾಲಿಮಾಡಿಸಿ ಅವರಿಗೆ ಪರ್ಯಾಯ ಜಾಗ ನೀಡಲು ಸರ್ಕಾರ ಮುಂದಾಗಿತ್ತು. ಆದರೆ ಆ ಜಾಗದಲ್ಲಿ ಯಾವುದೇ ವಸತಿ ಯೋಜನೆ ಕಲ್ಪಿಸಲು ಕಾನೂನು ತೊಡಕು ಎಂದು ಅಧಿಕಾರಿಗಳ ವರದಿ ಹೇಳುತ್ತಿದೆ.
ಈಗಾಗಲೇ ಅಲ್ಲಿದ್ದವರಿಗೆ ಪುನರ್ ವಸತಿ ಕಲ್ಪಿಸುವ ಸಂಬAಧ ಸರ್ಕಾರದ ವಿವಿಧ ವಸತಿ ಯೋಜನೆಗಳಲ್ಲಿ ಸ್ಥಳಾವಕಾಶ ಕಲ್ಪಿಸಲು ವರದಿ ಸಿದ್ಧಪಡಿಸಲಾಗಿತ್ತು. ಅಧಿಕಾರಿಗಳು ಸ್ಥಳ
ಪರಿಶೀಲನೆ ನಡೆಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಮುಂದಾಗಿದ್ದರು. ಸರ್ಕಾರದ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿಗೆ ಅಲ್ಲಿ ನಿವೇಶನ ತೆರವಾದವರಿಗೆ ಅವಕಾಶ ಕಲ್ಪಿಸಲು ಬರುವುದಿಲ್ಲ ಎಂದು ವರದಿ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಈ ವರದಿ ಅನ್ವಯ ೨೬ ಫಲಾನುಭವಿಗಳು ವಾಸಸ್ಥಳದ ದೃಢೀಕರಣ ಪತ್ರ ನೀಡಿರುವುದು ಸರಿಯಿಲ್ಲ ಎಂದು ಅವರ ದಾಖಲೆಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಾರೆ ವಿವಾದಕ್ಕೆ ಕಾರಣವಾಗಿದ್ದ ಕೋಗಿಲು ಬಡಾವಣೆ ನಿವಾಸಿಗಳಿಗೆ ಪುನರ್ ವಸತಿ ಸೌಕರ್ಯ ದೊರೆಯುವುದು ಮರೀಚಿಕೆ ಎಂದು ಹೇಳಲಾಗುತ್ತಿದೆ.
ನಿವೇಶನಕ್ಕೆ ಅರ್ಹರಲ್ಲ ಒತ್ತುವರಿ ತೆರವು ಮಾಡಿದ್ದ ಕೋಗಿಲು ನಿವಾಸಿಗಳಿಗೆ ಜಾಗ ಪಡೆಯಲು ಕಾನೂನು ತೊಡಕು



