ಅಡಿಲೇಡ್: ೧೭ ವರ್ಷಗಳ ವೃತ್ತಿಜೀವನದಲ್ಲಿ ಮೊದಲ ಬಾರಿ ವಿರಾಟ್ ಕೊಹ್ಲಿ ಕೆಟ್ಟ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ನಾಯಕ ಶುಭಮನ್ ಗಿಲ್೯ ರನ್ ಗಳಿಸಿ ಬಾರ್ಟ್ಲೆಟ್ಗೆ
ವಿಕೆಟ್ ಒಪ್ಪಿಸಿದರು. ನಂತರ ಬಂದ ಕೊಹ್ಲಿ ೪ ಎಸೆತ ಎದುರಿಸಿ ಎಲ್ಬಿಗೆ ಔಟಾದರು. ಈ ಮೂಲಕ ೧೭ ರನ್ಗಳಿಗೆ ಎರಡು ಅಮೂಲ್ಯ ವಿಕೆಟ್ಗಳನ್ನು ಭಾರತ
ಕಳೆದುಕೊಂಡಿತು.
ಅ.೧೯ ರಂದು ಪರ್ತ್ ನಲ್ಲಿ ನಡೆದ ಪಂದ್ಯದಲ್ಲೂ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದರು. ಸರಣಿಯೊಂದರಲ್ಲಿ ಕೊಹ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಇಲ್ಲಿಯವರೆಗ ಔಟ್
ಆಗಿರಲಿಲ್ಲ. ಈ ಹಿಂದೆ ೨೦೨೧ ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೆಸ್ಟ್ ಮತ್ತು ಟಿ೨೦ ಪಂದ್ಯದಲ್ಲಿ ಸತತ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದರು.
ಈ ಪಂದ್ಯಲ್ಲಿ ಸೊನ್ನೆ ಸುತ್ತುವ ಮೂಲಕ ಕೊಹ್ಲಿ ಏಕದಿನದಲ್ಲಿ ಒಟ್ಟು ೪೦ ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ವಿರಾಟ್ ಕೊಹ್ಲಿ ಜುಲೈ ೩ ರಂದು ಐಪಿಎಲ್ ಫೈನಲ್ ಪಂದ್ಯದ ಬಳಿಕ ಯಾವುದೇ ಟೂರ್ನಿಯಲ್ಲಿ ಭಾಗವಹಿಸರಲಿಲ್ಲ. ಐಪಿಲ್ ಬಳಿಕ ಕೊಹ್ಲಿ ಕುಟುಂಬದ ಸದಸ್ಯರ ಜೊತೆಗೆ ಯುಕೆಗೆ ಹೋಗಿದ್ದರು. ಅಲ್ಲಿ ಫಿಟ್ನೆಸ್ ಕಾಪಾಡಿಕೊಂಡಿದ್ದರೂ ಪಂದ್ಯದ ಅಭ್ಯಾಸ ಮಾಡಿಕೊಂಡಿರಲಿಲ್ಲ.