ಬಾರ್ಬಡೋಸ್: ಟಿ20 ವಿಶ್ವಕಪ್ ನಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸಿರುವ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಈಗ ತಂಡದಿಂದ ಕಿತ್ತು ಹಾಕುವ ಭಯ ಶುರುವಾಗಿದೆಯಾ? ಹೀಗೊಂದು ಅನುಮಾನ ಹುಟ್ಟಿಕೊಂಡಿದೆ.ಟಿ20 ವಿಶ್ವಕಪ್ ನಲ್ಲಿ ಮೂರು ಲೀಗ್ ಪಂದ್ಯಗಳಲ್ಲಿ ಕೊಹ್ಲಿ ಎರಡಂಕಿಯನ್ನೂ ತಲುಪಲಿಲ್ಲ.ಎಲ್ಲಾ ಪಂದ್ಯಗಳಲ್ಲಿ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು.
ಆದರೆ ಯಾವ ಪಂದ್ಯದಲ್ಲೂ ಅವರು ಉತ್ತಮ ಆರಂಭ ನೀಡಲಿಲ್ಲ. ಹೀಗಾಗಿ ಅವರ ಬಗ್ಗೆ ಮಾಜಿ ಕ್ರಿಕೆಟಿಗರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.ಈ ನಡುವೆ ಟೀಂ ಇಂಡಿಯಾ ಸೂಪರ್ 8 ಹಂತದ ಪಂದ್ಯಕ್ಕೆ ಸಜ್ಜಾಗುತ್ತಿದೆ. ಕೊಹ್ಲಿಯನ್ನು ಆರಂಭಿಕ ಸ್ಥಾನದಿಂದ ಕಿತ್ತು ಹಾಕಬೇಕೆಂಬ ಒತ್ತಾಯವೂ ಹೆಚ್ಚಾಗುತ್ತಿದೆ. ಈ ನಡುವೆ ವಿರಾಟ್ ಕೊಹ್ಲಿ ನೆಟ್ಸ್ ನಲ್ಲಿ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಅವರ ಎಸೆತಗಳನ್ನು ಸತತವಾಗಿ ಎದುರಿಸಿ ಅಭ್ಯಾಸ ನಡೆಸುತ್ತಿದ್ದಾರೆ.