ಇನ್ನೂ ಗೆಲುವಿನ ಹುಡುಕಾಟದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗೆಲುವಿನ ದಾರಿ ಕಂಡುಕೊAಡಿರುವ ಲಖನೌ ಸೂಪರ್ ಜೈಂಟ್ಸ್ ಇದೀಗ ಮುಖಾಮುಖಿಯಾಗಲಿವೆ. ಏಪ್ರಿಲ್ 9ರ ಗುರುವಾರದಂದು ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ನಡೆಯುವ ಪಂದ್ಯದಲ್ಲಿ ಮಳೆ ಬಾರದೇ ಹೋದಲ್ಲಿ ರನ್ ಸುರಿಮಳೆ ಆಗುವುದು ಖಚಿತ ಎಂದೇ ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.ಇತ್ತಂಡಗಳ ಈ ಹಿಂದಿನ ದಾಖಲೆಯನ್ನು ಗಮನಿಸಿದಲ್ಲಿ ಒಟ್ಟು 6 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು 4 ಬಾರಿ ಲಖನೌ ಜಯಭೇರಿ ಬಾರಿಸಿದ್ದರೆ, ಕೋಲ್ಕತ್ತಾ ಎರಡು ಬಾರಿ ಮಾತ್ರ ಗೆಲುವಿನ ನಗೆ ಬೀರಿದೆ. ಆದರೆ ಈಗ ಪರಿಸ್ಥಿತಿ ವಿಭಿನ್ನವಾಗಿದೆ. ಈ ಸೀಸನ್ ನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ 2 ಸೋಲು ಮತ್ತೊಂದು ರದ್ದಿನಿಂದಾಗಿ ಕೇವಲ ಒಂದು ಅಂಕವನ್ನಷ್ಟೇ ಸಂಪಾದಿಸಿರುವ ಕೋಲ್ಕತ್ತಾ ಗೆಲುವಿಗಾಗಿ ಹಪಹಪಿಸುತ್ತಿದೆ. ಇದೇವೇಳೆ ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ ಬಲಾಢ್ಯ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಿದ ಆತ್ಮವಿಶ್ವಾಸದಲ್ಲಿದೆ ಲಖನೌ.ನಾಯಕ ರಹಾನೆ, ರಘುವಂಶಿ, ರಿಂಕು ಸಿಂಗ್ ಉತ್ತಮ ಆಟವಾಡುತ್ತಿದ್ದಾರೆ. ಆದರೆ ಫಿನ್ ಅಲೆನ್, ಕ್ಯಾಮರೂನ್ ಗ್ರೀನ್ ಅವರು ನಿರೀಕ್ಷೆಗೆ ತಕ್ಕಂತೆ ಆಟವಾಡಿಲ್ಲ. ಬೌಲಿಂಗ್ ವಿಭಾಗಕ್ಕೆ ಬಂದಾಗ ಮಿಸ್ಚರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು ಫಾರ್ಮ್ ನಲ್ಲಿರುವುದು ಚಿಂತೆಗೆ ಕಾರಣವಾಗಿದೆ.ಮತ್ತೊಂದೆಡೆ ಲಖನೌ ಸೂಪರ್ ಜೈಂಟ್ಸ್ ತಂಡ ಆತ್ಮವಿಶ್ವಾಸದಿಂದ ಪುಟಿಯುತ್ತಿದೆ. ತಂಡದ ಬೌಲಿಂಗ್ ವಿಭಾಗ ಸನ್ ರೈಸರ್ಸ್ ವಿರುದ್ಧ ಉನ್ನತ ಮಟ್ಟದ ಪ್ರದರ್ಶನ ನೀಡಿರುವುದು ಇದಕ್ಕೆ ಒಂದು ಕಾರಣವಾಗಿದ್ದರೆ, ನಾಯಕ ರಿಷಬ್ ಪಂತ್ ಅವರು ಫಾರ್ಮ್ ಕಂಡುಕೊAಡಿರುವುದು ಮತ್ತೊಂದು ಕಾರಣ. ಪಂತ್ ಜೊತೆ ಮಿಚೆಲ್ ಮಾರ್ಷ್, ಮಾರ್ಕಂ ಉತ್ತಮ ಲಯದಲ್ಲಿದೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ಮೊಹಮ್ಮದ್ ಶಮಿ ಅವರು ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.ಹೇಗಿದೆ ಈಡನ್ ಗಾರ್ಡನ್ ಪಿಚ್?
ಈಡನ್ ಗಾರ್ಡನ್ಸ್ನ ಪಿಚ್ ಇದೀಗ ಹೈಸ್ಕೋರಿಂಗ್ ಪಿಚ್ ಆಗಿ ಬದಲಾಗಿದೆ. ಬ್ಯಾಟ್ ಗೆ ಚೆಂಡು ಚೆನ್ನಾಗಿ ಬರುವುದರಿಂದ ಬ್ಯಾಟರ್ ಗಳು ಇಲ್ಲಿ ಆಕ್ರಮಣಕಾರಿ ಆಟವನ್ನು ಆನಂದಿಸಬಹುದು. ದೊಡ್ಡ ಹೊಡೆತಗಳಿಗೆ ಕೈ ಹಾಕಬಹುದು. ಪಿಚ್ನಲ್ಲಿ ತೇವಾಂಶ ಇರುವುದರಿಂದ ವೇಗದ ಬೌಲರ್ಗಳಿಗೆ ಇನ್ನಿಂಗ್ಸ್ನ ಆರಂಭದಲ್ಲಿ ಸ್ವಲ್ಪ ಸಹಾಯ ಸಿಗಬಹುದು. ಆದರೆ ಪಂದ್ಯ ಮುಂದುವರಿದAತೆ ಪಿಚ್ ಬ್ಯಾಟಿಂಗ್ ಗೆ ಅನುಕೂಲಕಾರಿಯಾಗುವುದರಿಂದ ಬೌಲರ್ ಗಳಿಗೆ ರನ್ ನಿಯಂತ್ರಣ ದೊಡ್ಡ ಸವಾಲಾಗಬಹುದು
ಕೋಲ್ಕತ್ತಾ ಲಖನೌ ವಿರುದ್ಧವಾದರೂ ಗೆಲ್ಲುತ್ತಾ?



