ಬೆಂಗಳೂರು: ಕೆಪಿಸಿಸಿ ಯುವ ಇಂಟಕ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಚಂದ್ರಶೇಖರ್ ರವರು ನೇಮಕ.ವಿಧಾನಪರಿಷತ್ ಸದಸ್ಯರಾದ ಸಲೀಮ್ ಅಹಮದ್ಮರವರು, ಬಿಎಂಟಿಸಿ ಮಾಜಿ ಉಪಾಧ್ಯಕ್ಷರಾದ ವಿ.ಎಸ್.ಆರಾಧ್ಯ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮೋಹನ್ ಕುಮಾರ್ ರವರು, ಯುವ ಇಂಟಕ್ ಅಧ್ಯಕ್ಷರಾದ ಡಾ. ಕುಮಾರ್ ಟಿ.ವೈ.ರವರು ನೇಮಕಾತಿ ಆದೇಶ ಪತ್ರ ನೀಡಿದರು.
ಇದೇ ಸಂದರ್ಭದಲ್ಲಿ ಜಿ.ಚಂದ್ರಶೇಖರ್ ರವರು ಮಾತನಾಡಿ ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರ ನೇತೃತ್ವದಲ್ಲಿ 5ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬಂದಿದೆ.ಇಂಟಕ್ ವಿಭಾಗದಿಂದ ರಾಜ್ಯದಲ್ಲಿ ಶ್ರಮಿಕ ವರ್ಗದವರನ್ನ ಸದಸ್ಯತ್ವ ಮಾಡಿಕೊಳ್ಳಲಾಗುವುದು.
ಕಾರ್ಮಿಕ ವರ್ಗ ರಾಜ್ಯದಲ್ಲಿ 2ಕೋಟಿಗಿಂತ ಹೆಚ್ಚು ಜನರು ವಾಸವಿದ್ದಾರೆ.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಅಂತಹ ಕಾರ್ಮಿಕ ವರ್ಗದವರನ್ನ ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗುತ್ತದೆ.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕ ವರ್ಗದವರ ಮತಗಳು ಸಂಪೂರ್ಣ ಕಾಂಗ್ರೆಸ್ ಪಕ್ಷಕ್ಕೆ ನೀಡುವಂತೆ ಶ್ರಮವಹಿಸಲಾಗುವುದು.ದೇಶದಲ್ಲಿ ಇಂಡಿಯ ಮೈತ್ರಿಕೂಟದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಕಾರ್ಮಿಕ ವರ್ಗಕ್ಕೆ ಇನ್ನು ಅನುಕೂಲವಾಗುವುದು ಎಂದು ಹೇಳಿದರು.