ಕನಕಪುರ: ಸರ್ಕಾರಿ ಹಳ್ಳದಲ್ಲಿ ಅನಧಿಕೃತವಾಗಿ ಯುಜಿಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರ ಮತ್ತು ಅದಕ್ಕೆ ಬೆಂಬಲ ಕೊಟ್ಟಿರುವ ಇಂಜಿನಿಯರ್ ಹಾಗೂ ಸಂಬಂ?ಪಟ್ಟ ಅಧಿಕಾರಿಗಳ ವಿರುದ್ಧ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್. ಸುರೇಶ್ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಗರದಲ್ಲಿ ನಗರಸಭೆ ವ್ಯಾಪ್ತಿಯಯಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಕೈಗೊಂಡಿ ದ್ದಾರೆ ಆದರೆ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಮಾಡಿ ಸರ್ಕಾರದ ಹಣ ಪೋಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಗಮ ರಸ್ತೆಯಲ್ಲಿರುವ ಕುರುಪೇಟೆಯ ಮಾ?ವನ ನಗರದ ಬಳಿಯಿಂದ ಬಿ ಜಿ ಎಸ್ ಬಡಾವಣೆ ಮೂಲಕ ಮೈಸೂರು ರಸ್ತೆವರೆಗೂ ಯುಜಿಡಿ ಕಾಮಗಾರಿ ಕೈಗೊಂಡಿದ್ದಾರೆ,
ನಗರದ ಎಲ್ಲ ಒಳಚರಂಡಿ ತ್ಯಾಜ್ಯವನ್ನು ಇಲ್ಲಿಂದ ಸಂಸ್ಕರಿಸುವ ಘಟಕಕ್ಕೆ ಡಂಪ್ ಮಾಡಲು ಯುಜಿಡಿ ಕಾಮಗಾರಿ ಮಾಡುತ್ತಿದ್ದಾರೆ ಆದರೆ ಇಲಾಖೆ ಎಸ್ಟಿಮೇಟ್ ಆಧಾರದ ಮೇಲೆ ಕಾಮಗಾರಿ ಕೈಗೊಳ್ಳದೆ ತಮ್ಮ ಅನುಕೂಲಕ್ಕೆ ತಕ್ಕಂತೆ ಕಾಮಗಾರಿ ಮಾಡಿ ಹೆಚ್ಚಿನ ಹಣ ಉಳಿಸಲು ಅವೈಜ್ಞಾನಿಕವಾಗಿ ಅನಧಿಕೃತವಾಗಿ ಯುಜಿಡಿ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಕಾಮಗಾರಿಯಲ್ಲಿ ಸರ್ಕಾರಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ,ಸರ್ಕಾರಿ ಹಳ್ಳ ದಲ್ಲಿ ಯಾವುದೇ ಕಾಮಗಾರಿಗಳನ್ನು ಮಾಡಲು ಅವಕಾಶ ವಿಲ್ಲ,ಒಂದು ವೇಳೆ ಸರ್ಕಾರಿ ಹಳ್ಳದಲ್ಲಿ ಕಾಮಗಾರಿ ಮಾಡುವ ಅನಿವಾರ್ಯತೆ ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು ಆದರೆ ಇಲ್ಲಿ ಯಾವುದೇ ಇಲಾಖೆಯಿಂದಲೂ ಅನುಮತಿ ಯನ್ನು ಪಡೆಯದೆ ಅಕ್ರಮವಾಗಿ ಕಾಮಗಾರಿ ಮಾಡುತ್ತಿ ದ್ದು ಸಂಬಂಧಪಟ್ಟ ಎಂಜಿನಿಯರ್ ಗುತ್ತಿಗೆದಾರರಿಗೆ ಬೆಂಲಬವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಹಳ್ಳಗಳು, ಕಾಲುವೆಗಳು, ಕೆರೆ ಹಾಗೂ ನದಿಗಳು ಜಲಮೂಲದ ಕೊಂಡಿಯಾಗಿದ್ದು, ಸರ್ಕಾರಿ ಹಳ್ಳ ಕಾಲುವೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಬೇಕು ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ನಗರದ ಮುಂದಿನ ಬೆಳವಣಿಗೆಗೆ ಅಡ್ಡಿಯಾಗದಂತೆ ವೈಜ್ಞಾನಿಕವಾಗಿ ಕಾಮಗಾರಿಯನ್ನು ಮಾಡಬೇಕು ಆದರೆ ಕಾಟಾಚಾರಕ್ಕೆ ಯುಜಿಡಿ ಕಾಮಗಾರಿ ಮಾಡಿ ಹಣ ಮಾಡಿ ಕೊಂಡು ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಅನಧಿಕೃತ ಕಾಮಗಾರಿಯಿಂದ ನದಿ ನೀರು ಮಲಿನ ವಾಗುತ್ತದೆ ಸುಮಾರು 70 ಅಡಿ ಅಗಲವಿರುವ ಈ ಹಳ್ಳ ನಗರದ ಮತ್ತು ಸುತ್ತಮುತ್ತ ಜಮೀನುಗಳಿಂದ ಬರುವ ನೀರು ಹಳ್ಳದ ಮೂಲಕ ಅರ್ಕಾವತಿ ನದಿ ಸೇರುತ್ತದೆ ಮಳೆಗಾಲದಲ್ಲಿ ಈ ಹಳ್ಳದಲ್ಲಿ ಕೈಗೊಂಡಿರುವ ಒಳ ಚರಂಡಿ ಮ್ಯಾನ್ ಹೋಲ್ಗಳಿಂದ ತ್ಯಾಜ್ಯದ ನೀರು ಹಳ್ಳದ ನೀರಿಗೆ ಸೇರಿ ಅರ್ಕಾವತಿ ನದಿಗೆ ಸೇರಿ ನದಿ ನೀರು ಮಲಿನವಾಗುತ್ತದೆ. ಈಗಾಗಲೇ ನಗರಸಭೆ, ತಾಲೂಕು ಆಡಳಿತ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದು ಕಾಮಗಾರಿಯನ್ನು ತಾತ್ಕಾಲಿಕವಾಗಿ ಮಾತ್ರ ಸ್ಥಗಿತ ಮಾಡಿದ್ದಾರೆ ಆದರೆ ಸಂಬಂಧಪಟ್ಟ ಗುತ್ತಿಗೆ ದಾರ ಮತ್ತು ಇಂಜಿನಿಯರ್ ವಿರುದ್ಧ ಯಾವುದೇ ಕ್ರಮ ವನ್ನು ಕೈಗೊಂಡಿಲ್ಲ, ಸಂಬಂಧಪಟ್ಟ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿ ಗಳು ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಯುಜಿಡಿ ಕಾಮಗಾರಿಯನ್ನು ವೈಜ್ಞಾನಿಕ ವಾಗಿ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.