ಕೋಲಾರ: ಮಹಿಳೆಯರ ಸಾಧನೆಗಳನ್ನು ಆಚರಿಸಲು ಮತ್ತು ತ್ಯಾಗಗಳನ್ನು ಸ್ಮರಿಸಲುಮಾರ್ಚ್ ತಿಂಗಳು ಅತ್ಯಂತ ಪೂರಕವಾ ಗಿದೆ ಎಂದು ಕ.ಸಾ.ಪ ಜಿಲ್ಲಾಧ್ಯಕ್ಷ ಎನ್.ಬಿ. ಗೋಪಾಲಗೌಡ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಜೀವನದಲ್ಲಿ ಪ್ರತಿಯೊಬ್ಬ ಮಹಿಳೆಯು ತನ್ನ ತ್ಯಾಗ, ನಾಯಕತ್ವ, ಬದ್ಧತೆ ಮತ್ತು ಸಹಾನುಭೂತಿಗೆ ಮನ್ನಣೆ ನೀಡಬೇಕು. ಜೀವನದಲ್ಲಿ ಮಹಿಳೆಯರು ವಿಶೇಷ ಮತ್ತು ಮೆಚ್ಚುಗೆಯನ್ನು ಅನುಭವಿಸುವಂತೆ ಮಾಡಲು ಪುರುಷ ಪ್ರಧಾನ ಸಮಾಜ ಪ್ರಯತ್ನಿಸಬೇಕೆಂದರು..
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಂತರರಾಷ್ಟ್ರೀಯ ಕ್ರೀಡಾಪಟು ಸಿ. ಲಕ್ಷ್ಮಮ್ಮ ಜಗತ್ತಿನ ತೆರೆಮರೆಯಲ್ಲಿ ದಣಿವರಿಯಿದ ಕೆಲಸ ಮಾಡಿ ತನ್ನ ಕನಸುಗಳನ್ನು ನನಸು ಮಾಡಿಕೊಳ್ಳಲು ಹೊರಟಿರುವ ಮಹಿಳೆಯರಿಗೆ ಅಭಿನಂದನೆಗಳನ್ನು ಹೇಳುತ್ತಾ ನಾವು ಒಗ್ಗಟ್ಟಿನಿಂದ ಅಂತರ್ಗತ ಮತ್ತು ಸಮಾನ ಪ್ರಪಂಚದ ಕಡೆಗೆ ಪರಸ್ಪರ ಪ್ರಯಾಣವನ್ನು ಬೆಂಬಲಿಸೋಣ. ಇಂದು ನಾವು ಎಲ್ಲಾ ವರ್ಗಗಳ ಮಹಿಳೆಯರ ವೈವಿಧ್ಯತೆಯನ್ನು ಗೌರವಿಸಬೇಕಾಗಿದೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ ನಾರಾಯಣಪ್ಪ ಮಾತಾನಾಡಿ ಮಹಿಳೆಯರ ಕುರಿತು ಮೆಚ್ಚುಗೆಯ ಸಂದೇಶಗಳು ಜೀವನದ ಸಾಧನೆಯ ಸಂಕೇತಗಳಾಗಿ ಕಾರ್ಯನಿರ್ವಹಿಸುತ್ತವೆ. ವಿವಿಧ ಜೀವನ ರಂಗಗಳಲ್ಲಿ ಮಹಿಳೆಯರ ಲೆಕ್ಕವಿಲ್ಲದಷ್ಟು ಸಾಧನೆಗಳು ಮತ್ತು ತ್ಯಾಗಗಳನ್ನು ಗೌರವಿಸಬೇಕಾಗುತ್ತದೆ ಎಂದರು.
ಪ್ರಾಂಶುಪಾಲರಾದ ಡಾ. ಕಮಲಮ್ಮ ಮಾತಾನಾಡಿ ಮಹಿಳೆಯರ ತ್ಯಾಗ, ಬಲಿದಾನ, ಸಾಧನೆಗಳನ್ನು ಗುರುತಿಸಿ ಶುಭಾಶಯಗಳನ್ನು ಕೋರುವುದರೊಂದಿಗೆ ಸಮಾಜದಲ್ಲಿ ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳನ್ನು ಹೆಚ್ಚಿಸಲು ನಿಮ್ಮ ಬದ್ಧತೆಯನ್ನು ತೋರಿಸಬೇಕು ಎಂದರು.
ಎಸ್.ಎನ್.ಆರ್. ಆಸ್ಪತ್ರೆಯ ವಿಜಯಮ್ಮಮಾತಾನಾಡಿ ವ್ಯವಸ್ಥೆ ಮತ್ತು ಅಸಮಾನತೆ ಗಳಲ್ಲಿನ ಅಡೆತಡೆಗಳನ್ನು ಪರಿಹರಿಸಲು ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಳ್ಳುವ ಮೂಲಕ, ಮುಂದಿನ ಪೀಳಿಗೆಗೆ ನಾವು ಹೆಚ್ಚು ಸಮಾನ ಮತ್ತು ಅಂತರ್ಗತ ಜಗತ್ತನ್ನು ರೂಪಿಸಬಹುದು. ಜಾಗತಿಕವಾಗಿ ಮಹಿಳೆಯರ ಧ್ವನಿಯನ್ನು ವರ್ಧಿಸಲು ನಾವು ಅವರೊಂದಿಗೆ ಒಗ್ಗಟ್ಟಿನಿಂದ ನಿಲ್ಲಬೇಕು ಮತ್ತು ಅವರಿಗೆ ಅರ್ಥಪೂರ್ಣ ಬದಲಾವಣೆಗಾಗಿ ಪ್ರತಿಪಾದಿಸಬೇಕು ಎಂದರು.
ಸರ್ಕಾರಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಾಂಶುಪಾಲ ನವೀನ್, ತರಬೇತುದಾರ ವೆಂಕಟೇಶ್ ಬಾಬು, ಚುಟುಕು ಸಾಹಿತ್ಯ ಪರಿಷತ್ತಿನ ಪರಿಷತ್ತಿನ ಉಪಾಧ್ಯಕ್ಷ ಟಿ ಸುಬ್ಬರಾಮಯ್ಯ, ಪ್ರಧಾನ ಕಾರ್ಯದರ್ಶಿ ಡಾ. ಶರಣಪ್ಪ ಗಬ್ಬೂರು ಮಾತನಾಡಿದರು.ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.