ಬೆಂಗಳೂರು: ಮಹಿಳಾ ಪಿಎಸ್ಐ ಗೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನುವ ಆರೋಪದ ಮೇಲೆ ಕೆಎಸ್ಐಎಸ್ಎಫ್ ನ ಪಿ ಎಸ್ ಐ ಸಂಜಯ್ ಎಂಬುವರನ್ನು ಬಂಧಿಸಲಾಗಿದೆ.
28 ವರ್ಷದ ಸಹದ್ಯೋಗಿ ಮಹಿಳಾ ಪಿಎಸ್ ಐ ಕೊಟ್ಟ ದೂರಿನ ಆಧಾರದ ಮೇಲೆ ಸಂಜಯ್ ಬಂಧನವಾಗಿದೆ. ತರಬೇತಿ ಪಡೆಯುವ ವೇಳೆ ಇಬ್ಬರಿಗೂ ಪರಸ್ಪರ ಪರಿಚಯವಾಗಿತ್ತು. ಆರಂಭದಲ್ಲಿ ಪ್ರೇಮ ನಿವೇದನೆ ಮಾಡಿದ್ದ ಪಿಎಸ್ಐ ಸಂಜಯ್ ಈ ವೇಳೆ ಅದನ್ನ ದೂರುದಾರು ಮಹಿಳೆ ಪಿಎಸ್ಐ ತಿರಸ್ಕರಿಸಿದ್ದರು ಎಂದು ಹೇಳಲಾಗಿದೆ.
ಕೆಎಸ್ಐಎಸ್ಎಫ್ ಪಿಎಸ್ಐ ಆಗಿ ಇದ್ದುಕೊಂಡು ನಿಮ್ಮನ್ನು ವಿವಾಹ ಆಗುವುದಿಲ್ಲ. ಯುಪಿಎಸಿ ಮಾಡುತ್ತೇನೆ ನನಗೆ ಓದಲು ಸಹಾಯಮಾಡಿ ಎಂದು ಸಂಜಯ್ ಹೇಳಿದ್ದರು ಎಂದು ತಿಳಿದುಬಂದಿದೆ. ಓದಿನ ನೆಪ ಇಟ್ಟುಕೊಂಡು ದೂರುದಾರರಿಗೆ ಹತ್ತಿರವಾಗಿದ್ದ ಸಂಜಯ್ 2020ರಲ್ಲಿ 5.50 ಲಕ್ಷ ರೂ. ಸಂಜಯ್ ತೆಗೆದುಕೊಂಡಿದ್ದರು ಎಂದು ಆರೋಪ ಮಾಡಲಾಗಿದೆ.
ಓದುವ ನೆಪದಲಿ ಹತ್ತಿರವಾಗಿ ಪಿ ಎಸ್ ಐ ಜೊತೆಗೆ ಸಲುಗೆಯಿಂದಿದ್ದ ಸಂಜಯ್. ಅದೇ ವೇಳೆ ತೆಗೆದುಕೊಂಡಿದ್ದ ಫೋಟೋ ಗಳಿನ್ನಿಟ್ಟುಕೊಂಡು ಬ್ಲಾಕ್ ಮೇಲ್ ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ತಿರಸ್ಕರಿಸಿದರೆ ಕಿಡ್ನ್ಯಾಪ್ ಮಾಡಿ ತಾಳಿ ಕಟ್ಟುವುದಾಗಿ ಬೆದರಿಕೆ ಹಾಕಿದ್ದರು. ಮನೆಗೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು ಎಂದು ಚಂದ್ರಾಲೇ ಔಟ್ ಪೊಲೀಸ್ ಠಾಣೆಗೆ ಮಹಿಳಾ ಪಿಎಸ್ಐ ದೂರು ನೀಡಿದ್ದು, ದೂರು ದಾಖಲಿಸಿಕೊಂಡು ಸದರಿ ಪಿಎಸ್ಐನನ್ನು ಬಂಧಿಸಿದ್ದಾರೆ.