ಬೆಂಗಳೂರು: ನೃತ್ಯ ದಿಶಾ ಟ್ರಸ್ಟಿನ ಸಂಸ್ಥಾಪಕರೂ ಗುರುಗಳೂ ಆದ ‘ಕಲಾಭೂಷಿಣಿ’ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ಶಿಷ್ಯೆ ಕು|| ಸಹನಾ ಹೊಸಮನೆ ಭಾಸ್ಕರ್ ರವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ಮಾರ್ಚ್ 31, ಭಾನುವಾರ ಸಂಜೆ ನಗರದ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ|| ಎಂ ಸೂರ್ಯಪ್ರಸಾದ್, ಶ್ರೀ ಎಸ್. ಕುಮಾರ್ ಬಂಗಾರಪ್ಪ , ಶ್ರೀ ಸೈಯದ್ ಸಲಾಉದ್ದೀನ್ ಪಾಶ, ಗುರು ಶ್ರೀ ಪ್ರಕಾಶ್ ಎಸ್. ಅಯ್ಯರ್, ಶ್ರೀ ಕೃಷ್ಣಮೂರ್ತಿ ಲಕ್ಷ್ಮಣ ಭಾಗವಹಿಸಿದ್ದರು. ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ಹಂಸಾನಂದಿ ರಾಗದ ‘ಪುಷ್ಪಾಂಜಲಿ’ಯೊಂದಿಗೆ ಸಹನಾ ಕಾರ್ಯಕ್ರಮ ಪ್ರಾರಂಭಿಸಿದಳು.
ತದನಂತರ ತಮ್ಮ ಗುರುಗಳು ಸಂಯೋಜಿಸಿದ ವಿಶೇಷವಾದ ಅರ್ಧನಾರೀಶ್ವರ ಅಲಾರಿಪು ನರ್ತಿಸಿದರು ಸಹನಾ.ಮುಂದಿನ ಆಯ್ಕೆಯ ಕೃತಿ ಗಜವದನ ಹೇರಂಭ ಅಮೋಘವಾಗಿ ಅಭಿನಯಿಸಿದಳು ಸಹನಾ.ಉತ್ತರಾರರ್ಧದಲ್ಲಿ ಶಂಕರಾಚಾರ್ಯರ ಸೌಂದರ್ಯ ಲಹರಿಯ ದೇವಿ ನವರಸ ಹಾಗೂ ದುರ್ಗೆ ದುರ್ಗೆ ಕೃತಿಯನ್ನು ಅಭಿನಯಿಸಿದರು. ಚಾಮುಂಡೇಶ್ವರಿ ಕಥೆ ನರ್ತಿಸಿದರು ಸಹನಾ. ತನ್ನ ಗುರುಗಳ ವಿದ್ವತ್ ಪೂರ್ಣ ಸಂಯೋಜನೆಗೆ ಸೈ ಅನ್ನಿಸುವಂತೆ ಅಭಿನಯಿಸಿದಳು.
ಸಹನಾ ಅವರ ಕಾರ್ಯಕ್ರಮದಲ್ಲಿ ತುಂಬಾ ಮೆಚ್ಚುಗೆ ಪಡೆದ ನೃತ್ಯ ದೇವರ ದಾಸಿಮಯ್ಯ ಅವರ ವಚನ. ಸಹನಾ ತನ್ಮಯತೆಯಿಂದ ಇದನ್ನು ನರ್ತಿಸಿದಳು. ಮುಂದಿನ ಪ್ರಸ್ತುತಿ ಹಂಸಾನಂದಿ ತಿಲ್ಲಾನದಲ್ಲಿ ಬೃಹದೇಶ್ವರನನ್ನು ವರ್ಣಿಸಿದರು ಸಹನಾ. ಇದರಲ್ಲಿನ ಜುಗಲ್ ಬಂದಿ ಪ್ರಸ್ತುತಿಗೆ ಪ್ರಸಂಶೆಗೆ ಪಾತ್ರಳಾದಳು ಸಹನಾ. ಸಹನಾ ತನ್ನ ಕಾರ್ಯಕ್ರಮವನ್ನು ಕನ್ನಡದ ಕೊರವಂಜಿ ನೃತ್ಯ ಹಾಗೂ ಮಂಗಳದೊಂದಿಗೆ ಸಂಪೂರ್ಣ ಗೊಳಿಸಿದಳು.
ಗುರು ದರ್ಶಿನಿ ಮಂಜುನಾಥ್ ರವರ ಸುಂದರ ಸಂಯೋಜನೆಗೆ ಅದ್ಬುತವಾಗಿ ನೃತ್ಯ ಹಾಗೂ ಅಭಿನಯಗಳಿಂದ ರಸಿಕರ ಮನ ಗೆದ್ದಳು ಸಹನಾ. ಒಟ್ಟಾರೆ ರಂಗಪ್ರವೇಶ ಯಶಸ್ವಿಯಾಗಿ ಮೂಡಿಬಂತು. ಗುರು.ದರ್ಶಿನಿ ಅವರ ಸಂಯೋಜನೆ ಕು|| ಸಹನಾ ಹೊಸಮನೆ ಭಾಸ್ಕರ್ ಅವರ ಅಭಿನಯಕ್ಕೆ ರಸಿಕರು ಪ್ರಸಂಶೆ ವ್ಯಕ್ತಪಡಿಸಿದರು.