ವಿವಿಧ ಕಾರಣಗಳಿಗಾಗಿ ಪದೇ ಪದೇ ಮುಂದೂಡಲ್ಪಡುತ್ತಿದ್ದ ಕ್ರಿಕೆಟಿಗ ಕುಲ್ದೀಪ್ ಯಾದವ್ ಮದುವೆಗೆ ಇದೀಗ ಮಾರ್ಚ್ ೧೪ರಂದು ಮುಹೂರ್ತ ನಿಗದಿಯಾಗಿದೆ. ಉತ್ತರಾಖಂಡದ ಮಸೂರಿಯಲ್ಲಿ ವಿವಾಹ ನಡೆಯಲಿದ್ದು ಭಾರತ ತಂಡದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಪ್ರಧಾನ ವೇಗಿ ಜಸ್ಪಿçÃತ್ ಬುಮ್ರಾ ಸೇರಿದಂತೆ ಹಲವು ಖ್ಯಾತನಾಮ ಕ್ರಿಕೆಟಿಗರು ವಿವಾಹ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಏತನ್ಮಧ್ಯೆ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರಂತೂ ನನ್ನ ಸಹೋದರನ ಮದುವೆಯಲ್ಲಿ ಕುಣಿಯಲು ಉತ್ಸುಕನಾಗಿದ್ದೇನೆ ಎಂದು ಹೇಳಿಕೆ ಸಹ ನೀಡಿದ್ದಾರೆ.
ಮಸ್ಸೂರಿಯ ಸವೋಯ್ ಹೋಟೆಲ್ ನಲ್ಲಿ ೧೪ರಂದು ನಡೆಯುವ ಸಮಾರಂಭಕ್ಕಾಗಿ ತಮ್ಮ ಬಾಲ್ಯದ ಗೆಳತಿ ವಂಶಿಕಾ ಅವರ ಕೈಬಿಡಿಯಲಿದ್ದಾರೆ ಭಾರತ ತಂಡದ ಚೈನಾಮನ್ ಬೌಲರ್ ಕುಲ್ದೀಪ್ ಯಾದವ್. ಇಡೀ ಹೋಟೆಲ್ ಅನ್ನೇ ಅದ್ಧೂರಿ ಸಮಾರಂಭಕ್ಕಾಗಿ ಬುಕ್ ಮಾಡಲಾಗಿದ್ದು ಎರಡು ಮೂರು ದಿನಗಳಿಗೆ ಬೇರೆ ಯಾರಿಗೂ ಈ ಹೋಟೆಲ್ ಸೇವೆ ಲಭ್ಯವಿಲ್ಲ.
ಯಾರೆಲ್ಲಾ ಆಹ್ವಾನಿತರು?
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪಿçÃತ್ ಬುಮ್ರ ಅವರಲ್ಲದೆ ಇನ್ನೂ ಹಲವಾರು ವಿಐಪಿಗಳನ್ನು ಈ ಸಮಾರಂಭಕ್ಕಾಗಿ ಆಹ್ವಾನಿಸಲಾಗಿದೆ. ಭಾರತ ಕ್ರಿಕೆಟ್ ನ ದಂತಕತೆ ಸುನಿಲ್ ಗವಾಸ್ಕರ್, ಭಾರತ ಟಿ೨೦ ತಂಡದ ನಾಯಕ ಸೂರ್ಯಕುಮಾರ್ ಯಾದವ್, ಟಿ೨೦ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದ ರಿಂಕು ಸಿಂಗ್, ತಿಲಕ್ ವರ್ಮಾ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಇನ್ನು ಕುಲ್ದೀಪ್ ಯಾದವ್ ಅವರ ತಂದೆ ರಾಮ್ ಸಿಂಗ್ ಯಾದವ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದರು.
ಇದಕ್ಕಾಗಿ ಡೆಹ್ರಾಡೂನ್ ಗೆ ಆಗಮಿಸಿರುವ ಯುಜುವೇಂದ್ರ ಚಹಲ್ ಅವರನ್ನು ಎಎನ್ ಐ ಪ್ರತಿನಿಧಿ ಪ್ರಶ್ನಿಸಿದಾಗ, “ತಾನಂತೂ ನನ್ನ ಸಹೋದರನ ಮದುವೆಯಲ್ಲಿ ನೃತ್ಯ ಮಾಡಲು ಉತ್ಸುಕನಾಗಿದ್ದೇನೆ. ತುಂಬಾ ಡ್ಯಾನ್ಸ್ ಮಾಡುವೆ, ಮಜಾ ಮಾಡುವೆ” ಎಂದು ಉತ್ತರಿಸಿದರು.
ಪದೇ ಪದೇ ಮುಂಡೂಲ್ಪಡುತ್ತಿದ್ದ ವಿವಾಹ
ಕಾನ್ಪುರದಲ್ಲಿ ಹುಟ್ಟಿ ಬೆಳೆದ ಕುಲ್ದೀಪ್ ಯಾದವ್ ಮತ್ತು ವಂಶಿಕಾ ಅವರು ಬಾಲ್ಯದಿಂದಲೂ ಪರಸ್ಪರ ಪರಿಚಿತರು. ಕೇವಲ ೩ ಕಿಮೀ ಆಸುಪಾಸಲ್ಲೇ ಇವರ ಮನೆ ಇದೆ. ವಂಶಿಕಾ ಅವರು ಎಲ್ ಐಸಿಯಲ್ಲಿ ಉದ್ಯೋಗಿಯಾಗಿದ್ದಾರೆ.
ಕುಲ್ದೀಪ್ ಯಾದವ್ ಮದ್ವೇಲಿ ಡ್ಯಾನ್ಸ್ ಮಾಡೋಕೆ ಯುಜುವೇಂದ್ರ ಚಹಲ್ ರೆಡಿ



