ಕೋಲಾರ: ಮನಜಪಥ ವಿಶ್ವಪಥ ಸಂದೇಶವನ್ನು ಸಾರಿದ ಶ್ರೇಷ್ಟ ವಿಶ್ವ ಮಾನವ ಕುವೆಂಪುರು ಸಮಾಜದಲ್ಲಿನ ಮೌಡ್ಯತೆಗಳನ್ನ ಹೋಗಲಾಡಿಸಲು ಶ್ರಮಿಸಿದರು, ಮಾತೃ ಭಾಷೆ ಕನ್ನಡವನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಬೇಕೆಂದು ವಿದ್ಯಾರ್ಥಿಗಳಿಗೆ ತಮ್ಮ ಉದ್ಘಾಟನಾ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಿ.ಆರ್ ಶಂಕರೇಗೌಡರವರು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೋಲಾರ ತಾಲ್ಲೂಕು ವತಿಯಿಂದ ನಗರದ ಸುಭಾಷ್ ವಿದ್ಯಾಸಂಸ್ಥೆಯಲ್ಲಿ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ರವರ 119 ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ 119ನೆಯ ಜನ್ಮದಿನೋತ್ಸವದ ಅಂಗವಾಗಿ ಶತಮಾನ ಕಂಡ ದೈತ್ಯ ಪ್ರತಿಭೆ ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ ಶ್ರೀರಾಮಾಯಣ ದರ್ಶನಂನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ.
ಅವರ ಎರಡು ಬೃಹತ್ ಕಾದಂಬರಿಗಳಾದ ’ಕಾನೂರು ಹೆಗ್ಗಡತಿ’ ಹಾಗೂ ’ಮಲೆಗಳಲ್ಲಿ ಮದುಮಗಳು’ ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ ಎಂದು ಮಕ್ಕಳಿಗೆ ಡಾ.ಗಾಯತ್ರಿದೇವಿರವರು ತಿಳಿಸಿದರುಮನುಷ್ಯ ಜಾತಿ ತಾನೊಂದೇವಲಂ ಎಂಬ ನುಡಿಯಮೇಲೆ ವಿಶ್ವ ಮಾನವ ಸಂದೇಶವನ್ನು ಸಾರಿದ ಜಗದಕವಿ, ಯುಗದ ರಸಋಷಿಯಾದ ಕುವೆಂಪುರವರು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿದ್ದಾರೆ.
ಕ.ಸಾ.ಪ ಕೋಲಾರ ತಾಲ್ಲೂಕಿನ ವತಿಯಿಂದ ಕುವೆಂಪು ರವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಬೆ.ಉ.ವಿ.ವಿದ್ಯಾಲಯದ ಉಪನ್ಯಾಸಕರಾದ ಡಾ.ಗಾಯತ್ರಿ ದೇವಿರವರನ್ನು ಸನ್ಮಾನಿಸಲಾಯಿತು ಹಾಗೂ ಕುವೆಂಪುರವರ ಕುರಿತು ಏರ್ಪಡಿಸಿದ್ದ ಪ್ರಬಂದ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸುಭಾಷ್ ಶಾಲೆಯ ಮುಖ್ಯ ಶಿಕ್ಷಕರಾದ ವೇಣುಗೋಪಾಲ್, ಕ.ಸಾ.ಪ ಕೋಲಾರ ತಾಲ್ಲೂಕು ಕಾರ್ಯದರ್ಶಿಗಳಾದ ಮಾರುತಿ ಚಾಮರಹಳ್ಳಿ, ಸುಭಾಷ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿಗಳಾದ ಧನ್ಯಶ್ರೀ, ಸುಭಾಷ್ ಶಾಲೆಯ ಕನ್ನಡ ಶಿಕ್ಷಕರಾದ ಕೃಷ್ಣೇಗೌಡ, ಹಾಗೂ ಸುಭಾಷ್ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.