ನೆಲಮಂಗಲ: ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸೀಕ್ರೆಟ್ ಆಫ್ ಓಷನ್ ಹೋಟೆಲ್ ಬಳಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೆಲವು ಪುಂಡು ಪೋಕರಿಗಳು ಮದ್ಯದ ಅಮಲಿನಲ್ಲಿ ಗಲಾಟೆ ಮಾಡುತ್ತಿದ್ದರು.
ಗಲಾಟೆಯ ಸುದ್ದಿ ತಿಳಿದು ವರದಿ ಮಾಡಲು ತೆರಳಿದ್ದ ದಾಸರಹಳ್ಳಿ ವರದಿಗಾರ ಪ್ರಶಾಂತ್ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ಯಾಮರಾ ಕಸಿಯಲು ಮುಂದಾಗಿರುತ್ತಾರೆ. ಸ್ಥಳದಲ್ಲಿದ್ದ ಪೊಲೀಸರು ಕ್ಯಾಮೆರಾವನ್ನು ಹಿಂದಿರುಗಿಸುತ್ತಾರೆ. ಆದರೆ ಇದುವರೆಗೂ ಅವರ ಮೇಲೆ ಪೊಲೀಸರು ಪುಂಡು ಪೋಕರಿಗಳ ವಿರುದ್ಧ ಯಾವುದೇ ರೀತಿಯ ಕ್ರಮವನ್ನು ಜರುಗಿಸದಿರುವುದನ್ನುಖಂಡಿಸಿ, ಕೂಡಲೆ ಆರೋಪಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ನೆಲಮಂಗಲ ತಾಲೂಕು ಘಟಕದ ಅಧ್ಯಕ್ಷ ಗುರುಪ್ರಸಾದ್ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರಸಾಗರ ಭಾನುಪ್ರಕಾಶ್, ಪ್ರಧಾನ ಕಾರ್ಯದರ್ಶಿ ಮಹೇಶ್, ಕಾರ್ಯಾಧ್ಯಕ್ಷ ಸಿದ್ದರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ವರ್ಷಾ, ಸಂಘಟನಾ ಕಾರ್ಯದರ್ಶಿ ನಾಗೇಶ್, ಅಬ್ದುಲ್ ಅಫೀಸ್, ಪೂಜಾ ವೆಂಕಟಪ್ಪ, ಕನ್ನಡ ಪರ ಸಂಘಟನೆ ಹೋರಾಟಗಾರ ಮಲ್ಲೇಶ್, ಮತ್ತಿತರರು ಉಪಸ್ಥಿತರಿದ್ದರು.