ಬೆಂಗಳೂರು: ಸಂಘಗಳನ್ನು ಕಟ್ಟಿಕೊಂಡರೆ ಅಷ್ಟೇ ಸಾಲದು ಜನಸಾಮಾನ್ಯರ ಧ್ವನಿಯಾಗಿ ಸಲ್ಲಬೇಕಾದ ಹಕ್ಕುಗಳ ರಕ್ಷಣೆಗಾಗಿ ಸರ್ಕಾರಗಳ ಕಣ್ತೆರೆಸುವಲ್ಲಿ ಗಮನಹರಿಸಬೇಕು’ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್ ಹನುಮಂತಯ್ಯ ಕಿವಿ ಮಾತು ಹೇಳಿದರು.
ನಗರದ ನಯನ ಸಭಾಂಗಣದಲ್ಲಿ ಭೀಮಬಾಯಿ ಮಹಿಳಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ 134 ನೇ ಜಯಂತೋತ್ಸವ, ಭೀಮಬಾಯಿ ಜನ ಸೇವಾ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು.ಸಮಾಜದ ಶೋಷಿತ ಮಹಿಳೆಯರ ಬೆಂಬಲವಾಗಿ ನಿಂತು ಅವರ ಕಷ್ಟ ಸುಖಗಳಿಗೆ ಸ್ಪಂದಿಸಲು ಡಾ. ಲಕ್ಷ್ಮಮ್ಮ ಅವರು ಈ ಟ್ರಸ್ಟ್ ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ’ ಎಂದರು.
ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ ಮಾತನಾಡಿ ‘ಮಹಿಳೆಯರು ಪುರುಷರಂತೆ ಸಮಾನಾಗಿ ದುಡಿಯುತ್ತಿದ್ದಾರೆ. ಮಹಿಳಾ ಸಂಘಗಳು ಸಮಾಜದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿವೆ. ಅದರಂತೆ ಸಮಾಜಕ್ಕೆ ಏನಾದರೂ ಕೊಡಗೆ ನೀಡಲು ತೀರ್ಮಾನಿಸಿ ಲಕ್ಷ್ಮಮ್ಮ ಅವರು ಸಂಘದ ಸದಸ್ಯರ ಮೂಲಕ ಸೇವೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂಥದ್ದು ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಲಾಯಿತು. ಸಂಘದ ಎಲ್ಲಾ ಸದಸ್ಯರಿಗೆ ಸೀರೇ ವಿತರಣೆ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ವಿಧವೆಯರಿಗೆ ಸೀರೆ ವಿತರಣೆ ಪೌರಕಾರ್ಮಿಕರಿಗೆ ಮತ್ತು ಅಂಗವಿಕಲರಿಗೆ ಸನ್ಮಾನ ಮಾಡಲಾಯಿತು.ಈ ವೇಳೆ ಟ್ರಸ್ಟ್ ಅಧ್ಯಕ್ಷೆ ಡಾ. ಲಕ್ಷ್ಮಮ್ಮ, ಉಪಾಧ್ಯಕ್ಷೆ ಮಂಜುಳಾ, ರಾಮೋಹಳ್ಳಿ ಸಿದ್ದರೂಡ ಮಿಷನ್ ಆರೂಢ ಭಾರತಿ ಸ್ವಾಮೀಜಿ, ನೆಲಮಂಗಲದ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ನೆಲಮಂಗಲ ಶಾಸಕ ಎನ್. ಶ್ರೀನಿವಾಸ್, ಡಾ. ನರಸಿಂಹಮೂರ್ತಿ ಕೆ.ಜಿ, ಸಮಾಜ ಸೇವಕರಾದ ಸುಭಾಷಿಣಿ, ಭಾವನಾಶೇಖರ್, ಶ್ರೀಧರ್, ಹಿನ್ನೆಲೆ ಗಾಯಕಿ ಚೈತ್ರ, ಶಶಿಕಲಾ, ಪುರುಷೋತ್ತಮ್, ಉನ್ಮೇಷ ಭಾರತಿ ಮುಂತಾದವರಿದ್ದರು.