ಕರುನಾಡ ಸಿರಿ ಸಾಹಿತ್ಯ ವೇದಿಕೆ ನಗರದ ಕೆನ್ ಕಲಾ ಶಾಲೆಯಲ್ಲಿ ಕಾರ್ಮಿಕ ದಿನಾಚರಣೆ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾಂತಲಾ ಸುರೇಶ್ ರವರು ಎಲ್ಲರನ್ನು ಸ್ವಾಗತಿಸಿದರು.
ಸಂಸ್ಥೆಯು ದಿ.ಹನುಮಂತರಾಯ ರವರಿಂದ ಸ್ಥಾಪಿತವಾಗಿ ಅದನ್ನು ಮುಂದುವರೆಸುತ್ತಿರುವಾಗಿ ಹಾಗೂ ಮುಂಬರುವ ದಿನಗಳಲ್ಲಿ ಮತ್ತಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ತಿಳಿಸಿದರು.ಈ ಕಾರ್ಯಕ್ರಮದಲ್ಲಿ ಐ.ಟಿ.ಐ ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷರಾದ ಶ್ರೀ.ಶ್ರೀಧರ ನಾರಾಯಣ್ ರವರು ಮಾತನಾಡಿ ಕಾರ್ಮಿಕರಿಂದ ದೇಶದ ಅಭಿವೃದ್ದಿ. ನಮ್ಮ ದೇಶ ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಕಾರ್ಮಿಕರಿಗಾಗಿ ಮೇ 1 ವಿಶ್ವದಾದ್ಯಂತ ಅಚರಣೆಯಾಗುತ್ತಿದ್ದು ಅರ್ಥಪೂರ್ಣ ಎಂದು ತಿಳಿಸಿದರು.
ಕಾರ್ಮಿಕ ಶಕ್ತಿ ಅಪಾರವಾದುದು ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಶ್ರೀಧರ್ ನಾರಾಯಣ್, ಪೌರ ಕಾರ್ಮಿ ಕರಾದ ಅಮ್ಮು ಹಾಗೂ ಜಯಲಕ್ಷ್ಮಿ ರವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ.ರು.ಬಸಪ್ಪ ನವರು ಆಗಮಿಸಿದ್ದು ವಿಶೇಷವಾಗಿತ್ತು ಮತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ವೇದಿಕೆಯ ಪದಾಧಿಕಾರಿಗಳಾದ ಶ್ರೀ.ವೇಣುಗೋಪಾಲ್,ಎನ್, ಶ್ರೀ.ಭೀಮ್ ಜಿ, ಶ್ರೀ.ಉಮೇಶ್.ಸಿ.ಎನ್ , ಭಾರ್ಗವಿ.ಪಿ ರವರುಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆಯನ್ನು ವೇದಿಕೆಯ ಉಪಾಧ್ಯಕ್ಷರಾದ ಶ್ರೀಮತಿ ಇಂದಿರಾ ಶರಣ್ ಜಮ್ಮಲದಿನ್ನಿ ನಿರ್ವಹಿಸಿದರು.