ನೆಲಮಂಗಲ: ಆ ಯುವ ನಟ ಕಿರುತೆರೆಯಲ್ಲಿ ತನ್ನದೇ ಆದ ಮೈಲುಗಲ್ಲು ಸ್ಥಾಪಿಸಿದ್ದ, ಕಳೆದೊಂದು ವರ್ಷದ ಹಿಂದೆಯಷ್ಟೆ ಪ್ರೀತಿಸಿದ್ದ ಗೆಳತಿಯನ್ನ ವರಿಸಿದ್ದ, ಆಕೆಯ ಹೊಟ್ಟೆಯಲ್ಲಿ ಆತನ ವಂಶದ ಕುಡಿ ಹುಟ್ಟುವ ಮುನ್ನವೇ ಇಹಲೋಕ ತ್ಯಜಿಸಿದ್ದಾನೆ. ಯುವ ನಟನ ಹೆಸರು ಜಯರಾಮ್ 34 ವರ್ಷ ಅಂತ, ಕಿರೆತೆರೆಯಲ್ಲಿ ತನ್ನದೇ ಆದ ಮನೋಜ್ಞ ಅಭಿನಯದಿಂದ ಮನೆಮನೆಗಳ ತೆರೆಯಲ್ಲಿ ಮಿಂಚಿದ್ದ. ಆದರೆ ಕ್ರಮೇಣ ಸರಿಯಾದ ಅವಕಾಶಗಳು ಸಿಗದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆಲಮಂಗಲ ನಗರದ ಅರಿಶಿನಕುಂಟೆಯಲ್ಲಿ ವಾಸಿಸುತ್ತಿದ್ದ ಸಂಪತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಿರುತೆರೆಯ ಅಗ್ನಿ ಸಾಕ್ಷಿ ಧಾರವಾಹಿ ಸೇರಿದಂತೆ ಹಲವು ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸಿದ್ದು, ಒಂದಷ್ಟು ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ನಟಿಸಿದ್ದರು. ಒಂದಷ್ಟು ಸಿನಿಮಾಗಳಲ್ಲಿ ವಾಯ್ಸ್ ಡಬ್ಬಿಂಗ್ ಆರ್ಟಿಸ್ಟ್ ಕೆಲಸ ಮಾಡಿದ್ದರು. ಆದರೆ ನೆನ್ನೆ ಸಂಜೆ ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಇತ್ತೀಚೆಗೆ ಕಲಾವಿದರು ಮಾನಸಿಕ ಕಿನ್ನತೆಗೆ ಒಳಗಾಗುತ್ತಿದ್ದು, ಕಳೆದ ವರ್ಷ ನಟಿ ಜಯಶ್ರೀ ಸಹ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು . ಒಂದೆಡೆ ಕಲಾವಿದರಿಗೆ ಅವಕಾಶಗಳ ಕೊರತೆಯಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿರುವುದು ಸತ್ಯ ಎನಿಸುತ್ತೆ. ಆದರೆ ಕುಟುಂಬಸ್ಥರು, ಸ್ನೇಹಿತರು ಹೇಳುವ ಪ್ರಕಾರ ಸಂಪತ್ ಗೆ ಸಾಕಷ್ಟು ಅವಕಾಶಗಳಿತ್ತು. ಆದರೂ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಎಂಬುದರ ನಿಖರ ಮಾಹಿತಿ ಕುಟುಂಬಸ್ಥರಿಗೆ ಇಲ್ಲದಂತಾಗಿದೆ.
ಇತ್ತ ಕಲಾವಿದರ ಸಂಘದವರು ಮಾತನಾಡಿ ಅದೆಷ್ಟೊ ಕಲಾವಿದರು ಅವಕಾಶ ವಂಚಿತರಾಗಿದ್ದಾರೆ. ಮೊದಲಿನಂತೆ ಈಗ ಸರಿಯಾಗಿ ಕಲಾವಿದರಿಗೆ ಸ್ಪಂದನೆಸಿಗುತ್ತಿಲ್ಲ, ಕಲಾವಿದರನ್ನ ಗುರುತಿಸಿ ಕಲೆಗೆ ಬೆಲೆ ಕೊಡಿ ಎಂದು ಮನವಿ ಮಾಡಿದ್ದಾರೆ. ಒಟ್ಟಾರೆ ಕಿರುತೆರೆಯ ಉತ್ತಮ ಕಲಾವಿದನನ್ನ ಒಂದೆಡೆಯಾದರೆ , ಇತ್ತ ಇನ್ನೂ ಕಣ್ಣು ಬಿಡದ ಕಂದಮ್ಮ ತನ್ನ ತಂದೆಯನ್ನ ಕಳೆದುಕೊಂಡು ಅನಾಥವಾಗಿದೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪೊಲೀಸ್ರು ತನಿಖೆ ನೆಡೆಸುತ್ತಿದ್ದು, ಪೂರ್ಣ ತನಿಖೆಯ ನಂತ್ರವಷ್ಟೆ ಈ ಯುವ ನಟನ ಆತ್ಮಹತ್ಯೆಗೆ ನಿಖರ ಕಾರಣವೇನೆಂಬುದು ತಿಳಿಯಬೇಕಿದೆ.
Leave a Review