ಬೆಂಗಳೂರು: 2024-25ರಲ್ಲಿ ರಾಜಸ್ವ ಕೊರತೆ, 27354 ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ವಿತ್ತಿಯ ಕೊರತೆ 82981 ಕೋಟಿ ರೂ.ಗಳು ಎಂದು ಅಂದಾಜು ಮಾಡಲಾಗಿದ್ದು, ರಾಜ್ಯದ ಜಿಎಸ್ಡಿಪಿಯ ಶೇ. 2.95ರಷ್ಟಿದೆ.
ರಾಜ್ಯದ ಒಟ್ಟು ಹೊಣೆಗಾರಿಕೆಯು 24-25ರ ಅಂತ್ಯಕ್ಕೆ 665095 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿಎಸ್ಡಿಪಿಯ ಶೇ. 23.68ಷ್ಟು ತಲುಪಲಿದೆ ಎಂದು ಅಂದಾಜಿಸಿದ್ದು, 2024-25ರಲ್ಲಿ ರಾಜ್ಯದ ವಿತ್ತೀಯ ಕೊರತೆ ಹಾಗೂ ಹೊಟ್ಟು ಹೊಣೆಗಾರಿಕೆಯನ್ನು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರಲ್ಲಿ ನಿಗಧಿಪಡಿಸಿರುವ ಮಿತಿಯೊಳಗೆ ಅಂದಾಜು ಮಾಡುವ ಮೂಲಕ ವಿತ್ತೀಯ ಶಿಸ್ತನ್ನು ಪಾಲನೆ ಮಾಡಲಾಗಿರುತ್ತದೆ.
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ನುಡಿದ ವಿರೋಧಿಗಳ ಭವಿಷ್ಯವಾಣಿಗಳನ್ನು ಸುಳ್ಳು ಮಾಡಿದ್ದೇವೆ. ಐದು ಖಾತರಿ ಯೋಜನೆಗಳಿಗೆ ಮಾತ್ರವಲ್ಲದೆ ಹಲವಾರು ಹೊಸ ಯೋಜನೆಗಳಿಗೆ ಮತ್ತು ಮೂಲ ಸೌಕರ್ಯ ಕಾರ್ಯಕ್ರಮಗಳಿಗೆ ಅಗತ್ಯವಿರುವ ಆಯವ್ಯಯ ಹಂಚಿಕೆಯನ್ನು ಒದಗಿಸಿದ್ದೇವೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.