ಯಲಹಂಕ: ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ರಾಜಸ್ವ ನಿರೀಕ್ಷಕರ ಕಚೇರಿ ಮಾದಾವರ ವೃತ್ತ ಹಾಗೂ ದಾಸನಪುರ ವೃತ್ತಕ್ಕೆ ಒಬ್ಬರೇ ರೆವೆನ್ಯೂ ಇನ್ಸ್ಪೆಕ್ಟರ್ ಇದ್ದು ಕೆಲಸದ ಒತ್ತಡ ಹೆಚ್ಚಾದ್ದರಿಂದ ಕಚೇರಿಯ ಕೆಲಸ ಕಾರ್ಯಗಳು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
ಸಾರ್ವಜನಿಕರ ಪರದಾಟ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಹಾಗೂ ಕಂದಾಯ ಇಲಾಖೆ ಕೆಲಸ ಕಾರ್ಯಗಳಿಗಾಗಿ ಪ್ರತಿನಿತ್ಯ ನೂರಾರು ರೈತರು ಸಾರ್ವಜನಿಕರು ಆಗಮಿಸುತ್ತಿದ್ದು ಕಚೇರಿ ಬಾಗಿಲು ಹಾಕಿರುವುದನ್ನು ಕಂಡು ಬೇಸರದಿಂದ ವಾಪಸಾಗುತ್ತಿದ್ದಾರೆ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಇತ್ತ ಕಡೆ ಗಮನಹರಿಸಿ ಮಾದವರ ವೃತ್ತಕ್ಕೆ ರೆವಿನ್ಯೂ ಇನ್ಸ್ಪೆಕ್ಟರ್ ನೇಮಕಗೊಳಿಸಬೇಕಾಗಿ ಅಕ್ಕ ಪಕ್ಕದ ಗ್ರಾಮಸ್ಥರು ಹಾಗೂ ಹಲವು ರೈತರ ಬೇಡಿಕೆಯಾಗಿದೆ.