ಕನಕಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ)ಕನಕಪುರ ವತಿಯಿಂದ ಸಾತನೂರಿನ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಾತನೂರು ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ.ರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕ್ಷೇತ್ರ ಯೋಜನೆಯಿಂದ ಮಂಜೂರು ಆಗಿರುವ ಆರೋಗ್ಯ ರಕ್ಷ ಕಾರ್ಯಕ್ರಮದಲ್ಲಿ 20 ಸಾವಿರ ರೂ ಚೆಕ್ ನ್ನು ಯೋಜನೆಯ ಪಾಲುದಾರ ಸದಸ್ಯರಿಗೆ ವಿತರಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆಸುವ ಜನಪರ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಸಂಸ್ಥೆಯ ಜಿಲ್ಲಾ ನಿರ್ದೇಶಕ ಜಯಕರ ಶೆಟ್ಟಿ ಶಾಲೆಗೆ ಬೆಂಚು ಡೆಸ್ಕ್ ಗಳನ್ನು ವಿತರಣೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಮುದಾಯ ಅಭಿವೃದ್ಧಿ, ಜನಮಂಗಳ,ಜ್ಞಾನದೀಪ, ಕಾರ್ಯಕ್ರಮ ಮತ್ತು ಯೋಜನೆಯ ವಿಶೇಷತೆಯ ಬಗ್ಗೆ ತಿಳಿಸಿದರು.
ಕನಕಾಂಬರಿ ಮಹಿಳಾ ಒಕ್ಕೂಟ ಸಂಘ(ರಿ) ದ ವ್ಯವಸ್ಥಾಪಕ ನಿರ್ದೇಶಕ ಮಾಯಣ್ಣ ರವರು ಜಲಮಂಗಳ ಕಾರ್ಯಕ್ರಮದ ಅಡಿಯಲ್ಲಿ ಪೂಜ್ಯರು ಮಂಜೂರು ಮಾಡಿರುವ ವೀಲ್ ಚೇರ್ ವಾಟರ್ ಬೆಡ್, ವಾಕಿಂಗ್ ಸ್ಟಿಕ್ ನ್ನು ವಿತರಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಡೆಯುವ ಕಾರ್ಯಕ್ರಮ ಗಳ ಬಗ್ಗೆ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಹನುಮಂತಯ್ಯ ಪೊಲೀಸ್ ಉಪ ನಿರೀಕ್ಷಕ ಸಾತನೂರು, ತಾಲ್ಲೂಕಿನ ಯೋಜನಾಧಿಕಾರಿ ಸಂತೋಷ್. ಕೆ, ಪೂಜಾ ಸಮಿತಿಯ ಅಧ್ಯಕ್ಷರು ಶ್ರೀಮತಿ ಶೈಲಜ ಗೌರಿಶಂಕರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು,ಊರಿನ ಮುಖಂಡರು,ಪಾಲುದಾರ ಸದಸ್ಯರು, ಮೇಲ್ವಿಚಾರಕ, ಸೇವಾ ಪ್ರತಿನಿಧಿಗಳು,ವಿ ಎಲ್.ಇ ಗಳು ಹಾಜರಿದ್ದರು.