ಬೆಳಗಾವಿ: ಅನಿಲ್ ಬೆನಕೆ ಕಾಂಗ್ರೆಸ್ ಹೈಕಮಾಂಡ್ ಸಂಪರ್ಕಿಸಿರುವುದನ್ನ ಖಚಿತ ಪಡಿಸಿದ್ದಾರೆ. ನಾನು ನನ್ನ ಚುನಾವಣೆಯಲ್ಲಿ ಬಿಜಿ ಇದ್ದೇನೆ. ನಮ್ಮ ಹೈಕಮಾಂಡ್ ಜೊತೆಗೆ ಅನಿಲ್ ಬೆನಕೆ ಸಂಪರ್ಕದಲ್ಲಿರಬಹುದು. ಮುಂಬರುವ ದಿನಗಳಲ್ಲಿ ಯಾರು ಬರ್ತಾರೆ ನೋಡೋಣ. ಲಕ್ಷ್ಮಣ ಸವದಿಯವರು ಮೊದಲು ಕಾಂಗ್ರೆಸ್‍ಗೆ ಬರಲಿ ಅವರಿಗೆ ಸ್ವಾಗತ ಮಾಡುತ್ತೇವೆ ನಾವು. ನಮ್ಮ ಜಿಲ್ಲಾ ನಾಯಕರೆಲ್ಲರೂ ಕೂಡಿ ಅವರನ್ನ ಸ್ವಾಗತ ಮಾಡುತ್ತಿದ್ದಾರೆ.
ಅವರು ಬರೋದ್ರಿಂದ ಜಿಲ್ಲೆಗೆ ಅಷ್ಟೇ ಅಲ್ಲದೇ ರಾಜ್ಯದಲ್ಲೂ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ. ಲಕ್ಷ್ಮಣ ಸವದಿಯನ್ನ ಎಂಎಲ್‍ಸಿ ಚನ್ನರಾಜ ಕರೆದುಕೊಂಡು ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಹೈಕಮಾಂಡ್ ಕೊಟ್ಟಿರುವ ನಿರ್ದೇಶನವನ್ನ ಸಹೋದರ ಮಾಡಿದ್ದಾರೆ.
ಸವದಿಯವರು ಹಿರಿಯರಿದ್ದಾರೆ. ಅವರು ನಮಗೆ ಮಾರ್ಗದರ್ಶನ ಮಾಡಬೇಕು ಎಂದರು. ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಆಪ್ತ ನಾಗೇಶ್ ಮನ್ನೋಳ್ಕರ್‍ಗೆ ಟಿಕೆಟ್ ಸಿಕ್ಕಿರುವ ವಿಚಾರಕ್ಕೆ ಸಂಬಂಧಿಸಿ ಪಾಪ ಸಂಜಯ್ ಪಾಟೀಲ್ ಎರಡು ಬಾರಿ ಶಾಸಕರಾಗಿದ್ದವರು. ಧನಂಜಯ್ ಜಾಧವ್ ಕೂಡ ಪಕ್ಷದಲ್ಲಿದ್ದವರು. ಆದ್ರೂ ಅವರಿಗೆ ಟಿಕೆಟ್ ಸಿಕ್ಕಿಲ್ಲ ಅಂದ್ರೇ ಎನೂ ಮಾಡಲು ಆಗಲ್ಲಾ.
ಯಾರೇ ಅಭ್ಯರ್ಥಿಯಾದ್ರೂ ಹಗುರಾಗಿ ತೆಗೆದುಕೊಳ್ಳುವುದಿಲ್ಲ. ಚುನಾವಣೆ ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.
Leave a Review