ಮಾಜಿ ಚಾಂಪಿಯನ್ ಕಿದಂಬಿ ಶ್ರೀಕಾಂತ್ ಮತ್ತು ಉತ್ತಮ ಲಯದಲ್ಲಿರುವ ಲಕ್ಷ್ಯ ಸೇನ್ ಅವರು ಬುಧವಾರ ಸ್ಫೂರ್ತಿಯುತ ಪ್ರದರ್ಶನ ನೀಡಿ, ಸ್ವಿಸ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಎರಡನೆ ಸುತ್ತಿಗೆ ಮುನ್ನಡೆದರು.
2015ರಲ್ಲಿ ಇಲ್ಲಿ ವಿಜೇತರಾಗಿದ್ದ ಶ್ರೀಕಾಂತ್ 21-17, 21-18 ರಿಂದ 24ನೇ ಕ್ರಮಾಂಕದ ವಾಂಗ್ ತ್ಜು ವೀ (ಚೀನಾ ತೈಪಿ) ಅವರನ್ನು ಸೋಲಿಸಿದರು. ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಶ್ರೀಕಾಂತ್ ಗೆಲ್ಲಲು ತೆಗೆದುಕೊಂಡಿದ್ದು 43 ನಿಮಿಷಗಳನ್ನು. ಅವರ ಮುಂದಿನ ಎದುರಾಳಿ ಮಲೇಷ್ಯಾದ ಅಗ್ರಮಾನ್ಯ ಆಟಗಾರ ಲೀ ಝೀ ಜಿಯಾ.
ಎರಡು ವಾರ ಅವಧಿಯಲ್ಲಿ ಫ್ರೆಂಚ್ ಓಪನ್ ಮತ್ತು ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ನಲ್ಲಿ ಸೆಮಿಫೈನಲ್ ತಲುಪಿದ್ದ ಲಕ್ಷ್ಯ ಸೇನ್ 21-19, 15-21, 21-11 ರಿಂದ ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ಅವರನ್ನು ಮಣಿಸಿದರು. ಎರಡನೇ ಸುತ್ತಿನಲ್ಲಿ ಅವರ ಎದುರಾಳಿ ಚೀನಾ ತೈಪೆಯ ಚಿಯಾ ಹಾವೊ ಲೀ.