This is the title of the web page
This is the title of the web page

ಏಷ್ಯಾಕಪ್: ಫೈನಲ್‍ಗೆ ಲಂಕಾ ಲಗ್ಗೆ

ಕೊಲೊಂಬೊ: ಏಷ್ಯಾಕಪ್‍ನ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ತಂಡ 2 ವಿಕೆಟ್‍ಗಳ ರೋಚಕ ಜಯ ಸಾಧಿಸಿ ಸತತ 2ನೇ ಬಾರಿಗೆ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಅತಿಥೇಯ ತಂಡ ಭಾನುವಾರ ಪ್ರಶಸ್ತಿ ಪೈಪೋಟಿಯಲ್ಲಿ ಭಾರತ ತಂಡವನ್ನು ಎದುರಿಸಲಿದೆ.

ಗುರುವಾರ ನಡೆದ ತನ್ನ ಕೊನೆಯ ಸೂಪರ್ 4 ಪಂದ್ಯದಲ್ಲಿ ಪಾಕ್ ನೀಡಿದ್ದ 253 ರನ್‍ಗಳ ಗುರಿಯನ್ನ ಕೊನೆಯ ಎಸೆತದಲ್ಲಿ ತಲುಪುವ ಮೂಲಕ ಫೈನಲ್ ಪ್ರವೇಶ ಪಡೆದಿದೆ.

ಕೊನೆಯ ಓವರ್ ಹೈಡ್ರಾಮಕೊನೆಯ 12 ಎಸೆತಗಳಲ್ಲಿ ಶ್ರೀಲಂಕಾ ತಂಡಕ್ಕೆ ಗೆಲ್ಲಲು 12 ರನ್‍ಗಳ ಅಗತ್ಯವಿತ್ತು. 41 ನೇ ಓವರ್ ಮಾಡಿದ ಶಾಹೀನ್ ಅಫ್ರಿದಿ 4 ರನ್ ನೀಡಿ 2 ವಿಕೆಟ್ ಪಡೆದರು. ಅಂತಿಮ ಓವರ್‍ನಲ್ಲಿ 8 ರನ್‍ಗಳ ಅಗತ್ಯವಿತ್ತು .

ಮೊದಲ 4 ಎಸೆತಗಳಲ್ಲಿ ಕೇವಲ 2 ರನ್ ಮಾತ್ರ ಬಂದವು. ಆದರೆ, ಅಸಲಂಕಾ ಕೊನೆಯ ಎರಡು ಎಸೆತಗಳಲ್ಲಿ ಬೌಂಡರಿ ಸಿಡಿಸುವ ಮೂಲಕ ಶ್ರೀಲಂಕಾ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.