ಬೆಂಗಳೂರು: ಬೆಂಗಳೂರು ಮೂಲದ ಮುಂಚೂಣಿಯ ಸಲೂನ್ ಸರಣಿ ನೂದಿರಾ ಯೂನಿಸೆಕ್ಸ್ ಸಲೂನ್ ಕೋರಮಂಗಲದಲ್ಲಿ ತನ್ನ ಹೊಸ ಶಾಖೆಯ ಹಾಗೂ ಇಂಟರ್ನ್ಯಾಷನಲ್ ಮೇಕಪ್ ಅಕಾಡೆಮಿಯ ಅದ್ಧೂರಿ ಪ್ರಾರಂಭ ಮಾಡಿದೆ.
ನೂದಿರಾ ಯೂನಿಸೆಕ್ಸ್ ಸಲೂನ್ ಖ್ಯಾತ ಸೆಲೆಬ್ರಿಟಿ ಮೇಕಪ್ ಕಲಾವಿದೆ ನಾದಿರಾ ನಾಯರ್ ಅವರ ಕನಸಿನ ಕೂಸಾಗಿದ್ದು ಅವರಿಗೆ ಬ್ಯೂಟಿ ಮತ್ತು ಮೇಕಪ್ ಉದ್ಯಮದಲ್ಲಿ ಮೂರು ದಶಕಗಳ ಅನುಭವವಿದ್ದು ನಗರದಾದ್ಯಂತ ಸಲೂನ್ ಸರಣಿ ಪ್ರಾರಂಭಿಸಿದ್ದಾರೆ.
ಈ ಸಲೂನ್ ಅನ್ನು ಕನ್ನಡ ಚಿತ್ರರಂಗದ ಖ್ಯಾತ ನಟಿ ಧನ್ಯಾ ರಾಮ್ ಕುಮಾರ್ ಮತ್ತು ಖ್ಯಾತ ನಟ ಸೂರಜ್ ಗೌಡ ಅವರು ಉದ್ಘಾಟಿಸಿದರು.
ಉದ್ಘಾಟನೆಯ ನೂದಿರಾ ಯೂನಿಸೆಕ್ಸ್ ಸಲೂನ್ಸ್ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ನಾದಿರಾ ನಾಯರ್, ಪ್ರತಿಯೊಬ್ಬರೂ ಸುಂದರವಾಗಿರುತ್ತಾರೆ. ನೂದಿರಾ ಸಲೂನ್ ವ್ಯಕ್ತಿಗಳನ್ನು ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುವುದಲ್ಲದೆ ವಿಶ್ವಾಸದಿಂದ ಇರುವಂತೆಯೂ ಮಾಡುತ್ತದೆ. ಪ್ರತಿಯೊಬ್ಬರೂ ಅವರ ದೇಹವನ್ನು ಪ್ರೀತಿಸಬೇಕು, ಗೌರವಿಸಬೇಕು ಮತ್ತು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದರಲ್ಲಿ ನಾವು ನಂಬಿಕೆ ಇರಿಸಿದ್ದೇವೆ. ಅದು ದೇವರ ಉಡುಗೊರೆ ಮತ್ತು ಅದನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಅವರಿಗೆ ನೆರವಾಗುತ್ತೇವೆ ಎಂದರು.
ಅಲ್ಲದೆ ಕೋರಮಂಗಲ ಶಾಖೆಯ ಮೇಕಪ್ ಅಕಾಡೆಮಿಯು ಉದಯೋನ್ಮುಖ ಬ್ಯೂಟಿಷಿಯನ್ನರಿಗೆ ವೃತ್ತಿಪರ ಮೇಕಪ್ ಕಲಾವಿದರಾಗಲು ಜ್ಞಾನ, ತಂತ್ರಗಳು ಮತ್ತು ವಿಶ್ವಾಸವನ್ನು ಮೂಡಿಸುತ್ತದೆ. ಈ ಸಲೂನ್ ಪ್ರತಿ ವೈಯಕ್ತಿಕ ಗ್ರಾಹಕನಿಗೂ ವೈಯಕ್ತಿಕಗೊಳಿಸಿದ ಮತ್ತು ವಿಶೇಷವಾಗಿ ರೂಪಿಸಿದ ಸೇವೆಗಳನ್ನು ನೀಡುವ ಮೂಲಕ ಸೌಂದರ್ಯ ಉದ್ಯಮದಲ್ಲಿ ಹೊಸ ಮೈಲಿಗಲ್ಲು ಪ್ರಾರಂಭಿಸುವ ಗುರಿ ಹೊಂದಿದೆ. ಪ್ರತಿ ಗ್ರಾಹಕರಿಗೂ ವಿಭಿನ್ನ ರೀತಿಯ ಚಿಕಿತ್ಸೆ ಅಗತ್ಯವಾಗುತ್ತದೆ. ನಮ್ಮ ಸೇವೆಯಲ್ಲಿ ಪ್ರಮುಖ ವ್ಯತ್ಯಾಸವೆಂದರೆ ನಾವು ನಮ್ಮ ಗ್ರಾಹಕರನ್ನು ಅವರ ದೇಹ, ಚರ್ಮ ಮತ್ತು ಕೂದಲಿನ ವಿಧ ಆಧರಿಸಿ ಅವರಿಗೆ ವಿಶಿಷ್ಟ ಚಿಕಿತ್ಸೆ ನೀಡುತ್ತೇವೆ ಎಂದು ನಾದಿರಾ ಹೇಳಿದರು.


		
		
		
		