ಕನಕಪುರ: ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾದ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ನಗರಕ್ಕೆ ಆಗಮಿಸಿದ ಜಾಗೃತಿ ರಥಕ್ಕೆ ತಾಲ್ಲೂಕು ವೀರಶೈವ ಸಂಘದ ಸದಸ್ಯರು ಅದ್ದೂರಿಯಾಗಿ ಸ್ವಾಗತಿಸಿದರು.
ಪೆ. 06 ರಿಂದ ಆರಂಭವಾಗುವ ಐತಿಹಾಸಿಕ ಸುತ್ತೂರು ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರೇಶ್ವರ ಶಿವಯೋಗಿಗಳ ಮಹೋತ್ಸವ ರಥಕ್ಕೆ ನಗರದ ಶ್ರೀ ದೇಗುಲ ಮಠದ ಆವರಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.ಶ್ರೀ ಮಠದ ಹಿರಿಯ ಸ್ವಾಮೀಜಿಗಳಾದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳಿಗೆ ಪಾದಪೂಜೆ ನೇರವೇರಿಸಿದ ನಂತರ ಜಾಗೃತಿ ರಥಕ್ಕೆ ಚಾಲನೆ ನೀಡಿ ವೀರಗಾಸೆ, ಕಂಸಾಳೆ, ವಿವಿಧ ಜಾನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾರ್ಯಕ್ರಮದ ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.
ತಾಲ್ಲೂಕು ವೀರಶೈವ ತರುಣ ಸಂಘದ ಅಧ್ಯಕ್ಷ ಕೆ. ಆರ್. ಸುರೇಶ್, ಕಾರ್ಯದರ್ಶಿ ದೇವರಾಜು, ಖಜಾಂಚಿ ವಿರೇಶ್, ಮುಖಂಡರಾದ ಮಹದೇವ್ ಪ್ರಸಾದ್, ಕೆಂಪಣ್ಣ,ರೇಣುಕಾ, ಗಣೇಶಪ್ಪ ಸೇರಿದಂತೆ ವೀರಶೈವ-ಲಿಂಗಾಯಿತ ಸಮುದಾಯದ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.