ಬಂಗಾರಪೇಟೆ: ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಶಿವಾಂಷು ರಜಪೂತ್ ರವರು ಅಧಿಕಾರ ವಹಿಸಿಕೊಂಡ ನಂತರ ಕಾನೂನು ವ್ಯವಸ್ಥೆ ಬಲಿಷ್ಠಗೊಂಡಿದೆ ಹಾಗೂ ಕ್ರೈಂ ಲೋಕ ತಲ್ಲಣಗೊಂಡು ತಟಸ್ಥವಾಗಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಪುರಸಭೆ ಆವರಣದಲ್ಲಿ ಪೊಲೀಸ್ ಇಲಾಖೆಗೆ ನೂತನ ಬೋಲೇರೋ ವಾಹನ ಹಸ್ತಾಂತರ ಮಾಡಿ ಮಾತನಾಡಿದ ಅವರು, ನಮ್ಮ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮರ್ಥವಾಗಿದ್ದು ಯಶಸ್ವಿಯ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಕ್ರೈಂ ಲೋಕ ತಲ್ಲಣಗೊಂಡಿದ್ದು ತಟಸ್ಥವಾಗಿದೆ: ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಅಧಿಕಾರಿಗಳು ಅತ್ಯಂತ ಪ್ರಾಮಾಣಿಕ ಮತ್ತು ದಕ್ಷತೆಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಕಾರಣ ಕ್ಷೇತ್ರದಲ್ಲಿ ಕ್ರೈಂ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖಗೊಂಡಿದೆ, ನಮ್ಮ ಅಧಿಕಾರಿಗಳು ಅನೇಕ ಕೊಲೆ, ದರೋಡೆ, ಮಾದಕ ದ್ರವ್ಯ ಅಕ್ರಮ ಸಾಗಾಟ ಚಟುವಟಿಕೆಗಳು, ಅತ್ಯಾಚಾರ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಪೋಲಿಸ್ ಇಲಾಖೆಗೆ 5 ದ್ವಿಚಕ್ರವಾಹನಗಳ ಕೊಡುಗೆ: ಕಳೆದ ಬಾರಿ ಶಾಂತರಾಜು ರವರು ವರಿಷ್ಠಾಧಿಕಾರಿಗಳಾಗಿದ್ದಾಗ ಅವರ ಬೇಡಿಕೆಯಂತೆ ನನ್ನ ಅನುದಾನದಲ್ಲಿ ಕಾಮಸಮುದ್ರ ಹಾಗೂ ಬಂಗಾರಪೇಟೆ ಪೊಲೀಸ್ ಠಾಣೆಗಳಿಗೆ 2 ಬೋಲೇರೋ ವಾಹನಗಳನ್ನು ನೀಡಲಾಗಿತ್ತು, ಇದರೊಟ್ಟಿಗೆ ಪೊಲೀಸ್ ಇನ್ಸೆ÷್ಪಕ್ಟರ್ ರವಿಕುಮಾರ್ ರವರು ದ್ವಿಚಕ್ರ ವಾಹನಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ ಇವರ ಮನವಿಯನ್ನು ಪುರಸ್ಕರಿಸಲಾಗಿದ್ದು 2 ತಿಂಗಳ ಒಳಗಾಗಿ ಐದು ದ್ವಿಚಕ್ರ ವಾಹನಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರ ಮಾಡಲಾಗುವುದು ಎಂದರು.
ಸಿಸಿ ಕ್ಯಾಮೆರಾ ಅಳವಡಿಕೆಗೆ ಅಸ್ತು; ಪೊಲೀಸ್ ಇಲಾಖೆ ಈಗಾಗಲೇ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ ಇದಕ್ಕೆ ಪೂರಕ ಎಂಬAತೆ ಅದೇ ಶೀಘ್ರದಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿ ಸಿ ಕ್ಯಾಮೆರಾವನ್ನು ಅಳವಡಿಸಲಾಗುವುದು, ಇದರಿಂದ ಅಪರಾಧಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗುವ ನಿರೀಕ್ಷೆ ಇದೆ ಎಂದರು.
ನಮ್ಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿದ ಅನೇಕ ಪೊಲೀಸ್ ವರಿಷ್ಠಾಧಿಕಾರಿಗಳು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ ಅದರಂತೆಯೇ ಶಿವಂಶು ರಜಪೂತ್ ರವರು ಯುವಕರಾಗಿದ್ದು ಉನ್ನತ ಮಟ್ಟದ ಅಧಿಕಾರದ ಸ್ಥಾನಮಾನಗಳನ್ನು ಹೊಂದಲಿದ್ದಾರೆ ಎಂದು ಶುಭ ಹಾರೈಸಿದರು.
ಶಾಸಕರ ಸಹಕಾರ ಅನನ್ಯ: ನಂತರ ಪೊಲೀಸ್ ವರಿಷ್ಠ ಅಧಿಕಾರಿ ಶಿವಂಶೂ ರಜಪೂತ್ ಮಾತನಾಡಿ ಬಂಗಾರಪೇಟೆ ಪೊಲೀಸ್ ಠಾಣೆಯ ಸರಹದ್ದು ತಮಿಳುನಾಡಿನ ಗಡಿಯವರಿಗೆ ವ್ಯಾಪಿಸಿಕೊಂಡಿದ್ದು ವಾಹನಗಳ ಕೊರತೆ ಹೆಚ್ಚಾಗಿದೆ, ಇದಕ್ಕೆ ಪೂರಕ ಎಂಬAತೆ ಶಾಸಕರು ಈಗಾಗಲೇ ಎರಡು ವಾಹನಗಳನ್ನು ಕೊಟ್ಟಿದ್ದರು ಇಂದು ಮತ್ತೊಂದು ವಾಹನವನ್ನು ನೀಡುವುದರ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಿದ್ದಾರೆ ಇವರ ಕೊಡುಗೆ ಅನನ್ಯವಾದು, ಎಂದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು, ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಶಿವಂಶಿ ರಜಪೂತ್,ತಹಶೀಲ್ದಾರ್ ಸುಜಾತ, ಈ.ಓ ರವಿಕುಮಾರ್, ನಗರಸಭೆ ಪೌರಾಯುಕ್ತ ಸತ್ಯನಾರಾಯಣ, ಸಮಾಜ ಕಲ್ಯಾಣ ಅಧಿಕಾರಿ ಶಿವಕುಮಾರಿ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿಕುಮಾರ್, ಟಿ ಎಪಿಎಂಸಿ ಉಪಾಧ್ಯಕ್ಷ ಅ.ನಾ ಹರೀಶ್, ಬೆಸ್ಕಾಂ ಇಲಾಖೆಯ ರಾಜು, ಅಕ್ಷರ ದಾಸೋಹ ಯುವರಾಜು, ಇನ್ಸೆ÷್ಪಕ್ಟರ್ ರವಿಕುಮಾರ್ ಹಾಗೂ ಮೊದಲಾದವರು ಇದ್ದರು.
ಶಿವಾಂಶು ರಜಪೂತ್ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಬಲಿಷ್ಠ



