ಶಿಡ್ಲಘಟ್ಟ: ಸೃಷ್ಟಿಗೂ ಮೊದಲೇ ತನ್ನ ಅಸ್ತಿತ್ವವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಮಹಾಮಹಿಮ ವಿಶ್ವರ್ಮ ಅವರ ಮಹತ್ವ ಯುಗಯುಗಗಳು ಕಳೆದರೂ ಮರೆಯಲು ಸಾಧ್ಯವಿಲ್ಲ. ವೇದ, ಉಪನಿಷತ್ತುಗಳು, ಪುರಾಣಗಳು, ಕಲೆ, ವಾಸ್ತು ಶಿಲ್ಪ, ಇಂದಿಗೂ ನಮ್ಮ ಕಣ್ಮುಂದೆ ವಿಶ್ವರ್ಮ ಸಮಾಜದ ಐತಿಹ್ಯವನ್ನು ತಿಳಿಸುತ್ತಿದೆ. ಅವರನ್ನು ನಾವು ಸ್ಮರಿಸಬೇಕು ಎಂದು ತಾಲೂಕು ತಹಸೀಲ್ದಾರ್ ಕುಮಾರಿ ಗಗನಸಿಂಧು ಅರೆ ನೀಡಿದರು.
ಅವರು ಇಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಮ್ಮಿಕೊಂಡಿದ್ದ ವಿಶ್ವರ್ಮ ಜಯಂತಿ ಕರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಕರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಬಿ ಎನ್ ರವಿಕುಮಾರ್ ವಹಿಸಿಕೊಂಡು ಮಾತನಾಡಿದರು.
ತಾಲೂಕು ವಿಶ್ವರ್ಮ ಕ್ಷೇಮಾಭಿವೃದ್ಧಿ ಸಮಿತಿ ಸಹಯೋಗದಲ್ಲಿ ಕರ್ಯಕ್ರಮ ನಡೆಯಿತು. ಮುಖ್ಯ ಭಾಷಣಕಾರರಾಗಿ ಬಿ ವಿ ಮಂಜುನಾಥ್ ಮಾತನಾಡಿ ವಿಶ್ವರ್ಮ ಹಿನ್ನೆಲೆ ಮತ್ತು ಮಹತ್ವವನ್ನು ವಿವರಿಸಿದರು.
ಕರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕರ್ಯನರ್ವಹಣಾಧಿಕಾರಿ ಶ್ರೀಮತಿ ಹೇಮಾವತಿ ಹಾಗೂ ರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಕೆ.ಎನ್. ಸುಬ್ಬಾರೆಡ್ಡಿ, ತಾಲೂಕು ವಿಶ್ವರ್ಮ ಶ್ರಮಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮರನಾರಾಯಣ ಚಾರಿ, ಕಾಳಿಕಾಂಬ ಕಮ್ಮಟೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಬಿಕೆ ಮುನಿರತ್ನ ಚಾರಿ ಸೇರಿದಂತೆ ಜಿಲ್ಲಾ ಸಫಾಯಿ ರ್ಮಚಾರಿ ಸಮಿತಿ ಸದಸ್ಯ ಸಿವಿ ಲಕ್ಷ್ಮಣ್ ರಾಜು ಜಿಲ್ಲಾ ಜಾಗೃತಿ ಸಮಿತಿ ಮಾಜಿ ಸದಸ್ಯ ಮೇಲೂರು ಮಂಜುನಾಥ್, ಮಾತನಾಡಿದರು.
ವಿಶ್ವರ್ಮ ಸಮುದಾಯದ ಪ್ರತಿಭಾವಂತ ವಿದ್ಯರ್ಥಿಗಳನ್ನು ಈ ಸಂರ್ಭದಲ್ಲಿ ಸನ್ಮಾನಿಸಲಾಯಿತು.೨೦೨೫ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ ಎಸ್. ಮೇಘನ, ಎಂ. ನವ್ಯಶ್ರೀ ಡಿ.ಎಸ್. ಹಾಸಿನಿ, ತೇಜಸ್ವಿನಿ, ರ್ಶನ್, ಪೂಜಾ, ವರುಣ್ ಆಚಾರಿ,ಡಿ.ಎಂ.ಸಂಜಯ್ ರವರುಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ,ಹಾರ, ಪದಕ ಹಾಕಿ, ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪಿ .ಪ್ರತಿಭಾ, ನೋಷಿತ, ನೇತ್ರಾವತಿ, ಲೋಕನಾಥಾಚಾರಿ, ಸುಹಾಸ್, ಪುನೀತ್, ಮೀನಾ, ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಸೋಮನೋಹರ,ಜೆ.ಪ್ರಿಯಾಂಕ, ತರುಣ್ ಕುಮಾರ್, ಜಾಹ್ನವಿ,ನಿರ್ಗ, ಡಿ.ಎಸ್.ಸಂದ್ಯಾ ಅವರನ್ನು ಶಾಸಕರಾದ ಬಿ ಎನ್ ರವಿ ಕುಮಾರ್ ಸನ್ಮಾನಿಸಲಾಯಿತು. ಪಂಚ ಕಸುಬುಗಳಲ್ಲಿ ತೊಡಗಿಸಿಕೊಂಡ ಚಿನ್ನ, ಬೆಳ್ಳಿ ಕೆಲಸದಲ್ಲಿ ಆಂಜನೇಯಾಚಾರಿ, ಕಬ್ಬಿಣದ ಕಾಯಕದಲ್ಲಿ ತೊಡಗಿರುವ ನಂಜುಂಡಾಚಾರಿ, ಶಿಲ್ಪಿ ಕೆಲಸ ಮಾಡುವ ಸುಭ್ರಮಣ್ಯಾಚಾರಿ ಬೆಡಗಿ ಕಾಯಕದಲ್ಲಿ ವೆಂಕಟಾಚಾರಿ ದೇವರನ್ನೂ ಸನ್ಮಾನಿಸಲಾಯಿತು. ಎಲ್ಲಾ ಪ್ರತಿಭಾವಂತರಿಗೆ, ಸಾಧಕರಿಗೆ ಜಯಪ್ರಕಾಶ್ ನಾರಾಯಣ್ ಟ್ರಸ್ಟ್ ವತಿಯಿಂದ ರ್ಥಿಕ ನೆರವು ಶಾಸಕರು ನೀಡಿದರು.