ಕೋಲಾರ: ದನದ (ಗೋ) ಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡಿರುವುದನ್ನು ವಿರೋಧಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಹಾಸ್ಯಾಸ್ಪದ ಎಂದು ವಕೀಲ ಕೆಂಬೋಡಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ದನ, ಹಸು, ಗೋವು, ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಪ್ರಾಣಿ ಮಾನವನ ಆಹಾರ ಮತ್ತು ವಾಣಿಜ್ಯ ದೃಷ್ಠಿಯಿಂದ ಸಾಕಾಣಿಕೆ ಮಾಡುವ ಹಂದಿ, ಕುರಿ, ಮೇಕೆ ಎಮ್ಮೆ, ಒಂಟೆ ಇವುಗಳಲ್ಲಿ ಗೋವು ಸಹ ಒಂದು ಪ್ರಾಣಿ. ದೇಶದಲ್ಲಿ ಶೇ.80ರಷ್ಟು ಮಾಂಸ ಭಕ್ಷಕರಲ್ಲಿ ಗೋ ಮಾಂಸ ಭಕ್ಷರೂ ಇದ್ದಾರೆ.
ಹಾಗೂ ಪಶು ಸಾಕಾಣಿಕೆದಾರರಲ್ಲಿ ಶೇ. 50ರಷ್ಟು ಗೋವು ಸಾಕಾಣಿಕೆ ಮಾಡುವ ಬಡ ಕುಟುಂಬಗಳು ತಮ್ಮ ಆರ್ಥಿಕ ಹಾಗೂ ಜೀವನಕ್ಕೆ ಗೋವು ಸಾಕಾಣಿಕೆ ಮೇಲೆ ಅವಲಂಬಿತರಾಗಿದ್ದಾರೆ.ಗೋಹತ್ಯ ನಿಷೇಧ ಕಾಯ್ದೆಯಿಂದ ಪಶು ಸಾಕಾಣಿಕೆ ಮಾಡುತ್ತಿದ್ದ ಬಡ ಕುಟುಂಬಗಳು ತಮ್ಮ ಅನಪಯುಕ್ತ ಮತ್ತು ಬರಡು ರಾಸುಗಳನ್ನು ಮಾರಾಟ ಮಾಡಲಾಗದೆ ಈ ಕುಟುಂಬಗಳಿಗೆ ದೊಡ್ಡ ಹೊಡೆತ ಬಿದ್ದು, ಜೀವನ ದುಸ್ತರವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.
ಪ್ರಸ್ತುತ ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯಿದೆ ರದ್ದು ಮಾಡಿರುವುದರಿಂದ ಪಶು ಸಾಕಾಣಿಕೆದಾರರು ತಮ್ಮ ಅನುಪಯುಕ್ತ ಗೋವುಗಳನ್ನು ಮುಕ್ತವಾಗಿ ಮಾರಾಟ ಮಾಡಿ, ತಮ್ಮ ಆರ್ಥಿಕಾಭಿವೃದ್ಧಿಯನ್ನು ಹೆಚ್ಚಿಸಿಕೊಳ್ಳಲು ಪೂರಕವಾಗಿದೆ. ಹಾಗೂ ರಾಜ್ಯ ಸರ್ಕಾರದ ಗೋಹತ್ಯೆ ನಿಷೇಧ ಕಾಯಿದೆ ರದ್ದು ಆದೇಶ ಸ್ವಾಗತಾರ್ಹ ಎಂದಿದ್ದಾರೆ.
Leave a Review